Leaked!: ಅಮೆರಿಕ ಗುಪ್ತಚರ ಇಲಾಖೆಯ ರಹಸ್ಯ ಮಾಹಿತಿಗಳು ಸೋರಿಕೆ!
Team Udayavani, Apr 13, 2023, 7:24 AM IST
ಹೊಸದಿಲ್ಲಿ: ಇತ್ತೀಚೆಗೆ ಟ್ವಿಟರ್, ಟೆಲಿಗ್ರಾಮ್, ಡಿಸ್ಕಾರ್ಡ್‌ನಂತಹ ಸಾಮಾಜಿಕ ತಾಣಗಳಲ್ಲಿ ಅಮೆರಿಕದ ಅತ್ಯಂತ ರಹಸ್ಯ ಗುಪ್ತಚರ ದಾಖಲೆಗಳು ಬಹಿರಂಗವಾಗಿವೆ. ಸ್ವತಃ ಅಮೆರಿಕ ಸರಕಾರ ಇದರಿಂದ ವಿಚಲಿತಗೊಂಡಿದ್ದು, ಅವನ್ನೆಲ್ಲ ನಿರ್ಬಂಧಿಸಿದೆ. ಅಮೆರಿಕದ ಗುಪ್ತಚರ ಇಲಾಖೆಯ ಸೂಕ್ಷ್ಮಾತಿಸೂಕ್ಷ್ಮ ಸಂಗತಿ ಗಳು ಬಹಿರಂಗವಾಗಿರುವುದು ಆ ದೇಶದ ಭದ್ರತಾ ವೈಫಲ್ಯವೆಂದೇ ಬಿಂಬಿತವಾಗಿದೆ.
ಮುಖ್ಯವಾಗಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಹಲವು ಮಾಹಿತಿಗಳು ಬಹಿರಂಗವಾಗಿವೆ. ರಷ್ಯಾ ವಶಪಡಿಸಿಕೊಂಡ ತನ್ನ ನೆಲವನ್ನು ಮರಳಿ ಪಡೆಯಲು ಉಕ್ರೇನ್ ಹೊರಟಿದ್ದಾಗ, ನಿಮಗೆ ಅಗತ್ಯ ಶಸ್ತ್ರಾಸ್ತ್ರ-ಸೈನ್ಯಬಲ ಕೊರತೆಯಾಗುತ್ತದೆ, ಅಂತಿಮವಾಗಿ ಸಾವುನೋವಿನ ಸಂಖ್ಯೆ ಜಾಸ್ತಿಯಾಗಬಹುದು. ನಿಮ್ಮ ಸೇನಾ ತರಬೇತಿ ವ್ಯವಸ್ಥೆ ದುರ್ಬಲವಾಗಿದೆ. ಸೋವಿಯತ್ ಕಾಲದ ಯುದ್ಧವಿಮಾನ ನಿಗ್ರಹ ಕ್ಷಿಪಣಿಗಳು ನಿಮ್ಮ ಬಳಿ ಕಡಿಮೆಯಾಗಿವೆ, ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದೂ ಅಮೆರಿಕ ತಿಳಿಸಿತ್ತು. ಹಾಗೆಯೇ ಈಜಿಪ್ಟ್ ಗುಪ್ತವಾಗಿ 40,000 ರಾಕೆಟ್‌ಗಳನ್ನು ಸಿದ್ಧ ಪಡಿಸಿ, ಪಾಶ್ಚಾತ್ಯ ರಾಷ್ಟ್ರಗಳಿಗೆ ಗೊತ್ತಾಗದಂತೆ ರಷ್ಯಾಕ್ಕೆ ಕಳುಹಿಸಲು ತಿಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ
ಪ್ರಧಾನಿ ಮೋದಿಗೆ ಝೆಲೆನ್‌ಸ್ಕಿ ಪತ್ರ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.