ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್ ಟಿಕೆಟ್
ವರ್ಲ್ಡ್ ಒಲಿಂಪಿಕ್ ಕ್ವಾಲಿಫೈಯರ್ ರೆಸ್ಲಿಂಗ್
Team Udayavani, May 8, 2021, 11:46 PM IST
ಸೋಫಿಯಾ (ಬಲ್ಗೇರಿಯಾ): ವರ್ಲ್ಡ್ ಒಲಿಂಪಿಕ್ ಕ್ವಾಲಿಫೈಯರ್ ರೆಸ್ಲಿಂಗ್ ಟೂರ್ನಿಯ 50 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸೀಮಾ ಬಿಸ್ಲಾ ಒಲಿಂಪಿಕ್ಸ್ ಅರ್ಹತೆಗೆ ಮೆರುಗು ತಂದಿದ್ದಾರೆ. ಅವರು ಟೋಕಿಯೊ ಟಿಕೆಟ್ ಪಡೆದ ಭಾರತದ 4ನೇ ವನಿತಾ ಕುಸ್ತಿಪಟು.
ಸೀಮಾ ಬಿಸ್ಲಾ ಫೈನಲ್ನಲ್ಲಿ ಈಕ್ವಡಾರ್ನ ಲೂಸಿಯಾ ಯಮಿಲೆತ್ ಯೆಪೆಜ್ ಗುಜ್ಮಾನ್ ವಿರುದ್ಧ ಸೆಣಸಬೇಕಿತ್ತು. ಆದರೆ ಅವರು ಗಾಯಾಳಾಗಿ ಹಿಂದೆ ಸರಿದರು. ಯುರೋಪಿಯನ್ ಚಾಂಪಿಯನ್ಶಿಪ್ ಕಂಚಿತ ಪದಕ ವಿಜೇತೆ, ಪೋಲೆಂಡ್ನ ಅನ್ನಾ ಲ್ಯುಕಾಸಿಯಾಕ್ ಅವರನ್ನು ಸೆಮಿಫೈನಲ್ನಲ್ಲಿ ಮಣಿಸಿದಾಗಲೇ ಸೀಮಾಗೆ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಲಭಿಸಿತ್ತು.
ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ ಉಳಿದ ಮೂರು ಭಾರತೀಯ ವನಿತಾ ಕುಸ್ತಿಪಟುಗಳೆಂದರೆ ವಿನೇಶ್ ಫೋಗಾಟ್ (53 ಕೆ.ಜಿ.), ಅಂಶು ಮಲಿಕ್ (57 ಕೆ.ಜಿ.) ಮತ್ತು ಸೋನಮ್ ಮಲಿಕ್ (62 ಕೆ.ಜಿ.).
ಒಲಿಂಪಿಕ್ಸ್ ಇತಿಹಾಸದ ಕುಸ್ತಿಯಲ್ಲಿ ಭಾರತದ ನಾಲ್ವರು ಮಹಿಳೆಯರು ಸೆಣ ಸುವುದು ಇದೇ ಮೊದಲು. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಮೂವರು ಸ್ಪರ್ಧಿಸಿದ್ದು ದಾಖಲೆಯಾಗಿತ್ತು.
ಗ್ರೀಕೊ ರೋಮನ್ ವೈಫಲ್ಯ
ಗ್ರೀಕೊ ರೋಮನ್ ವಿಭಾಗದ ಸ್ಪರ್ಧೆಯಲ್ಲಿ ಭಾರತ ನಿರಾಶಾದಾಯಕ ಪ್ರದರ್ಶನ ನೀಡಿತು. ಇಲ್ಲಿ ಯಾರಿಗೂ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಲು ಸಾಧ್ಯವಾಗಲಿಲ್ಲ.
ಗುರುಪ್ರೀತ್ ಸಿಂಗ್ ಮೇಲೆ ವಿಶ್ವಾಸ ಇರಿಸಲಾಗಿತ್ತು. ಆದರೆ 77 ಕೆ.ಜಿ. ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಅವರು ಪರಾಭವಗೊಂಡರು.
ಹಿಂದೆ ಸರಿದ ಸುಮಿತ್
ಪುರುಷರ 125 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯ ಫೈನಲ್ ಪ್ರವೇಶಿಸಿ ಟೋಕಿಯೊ ಅರ್ಹತೆ ಪಡೆದಿದ್ದ ಸುಮಿತ್ ಮಲಿಕ್ ಗಾಯಾಳಾಗಿ ಹಿಂದೆ ಸರಿದರು. ಇಲ್ಲಿ ಅವರು 2018ರ ಯುತ್ ಒಲಿಂಪಿಕ್ ಚಾಂಪಿಯನ್, ರಶ್ಯದ ಸಗೇìಯಿ ಕೊಝಿರೇವ್ ವಿರುದ್ಧ ಸೆಣಸಬೇಕಿತ್ತು. ಕೊಝಿಕೋವ್ ಚಿನ್ನ, ಮಲಿಕ್ ಬೆಳ್ಳಿ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ
Video: ಆಸ್ಪತ್ರೆಯಲ್ಲಿ ‘ಚಕ್ ದೇ ಇಂಡಿಯಾ’ ಹಾಡಿಗೆ ವಿನೋದ್ ಕಾಂಬ್ಳಿ ನೃತ್ಯ.. ವಿಡಿಯೋ ವೈರಲ್
Blitz Chess: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.