ಸೌಮ್ಯ ಪ್ರಮಾಣದ ಕೋವಿಡ್ ಸೋಂಕಿತರಲ್ಲಿ ಏಳು ರೋಗ ಲಕ್ಷಣ ಪತ್ತೆ: ವಿಜ್ಞಾನಿಗಳ ಮಾಹಿತಿ
ರೋಗ ವಾಸಿಯಾದ 10 ವಾರದ ನಂತರದವರೆಗೂ ಈ ಸಮಸ್ಯೆಗಳು ಕಾಡಬಹುದು ಎನ್ನುತ್ತದೆ ಈ ಸಂಶೋಧನೆ.
Team Udayavani, Nov 4, 2020, 10:51 AM IST
ಲಂಡನ್:ಕೋವಿಡ್-19ನ ಸೌಮ್ಯ ಪ್ರಮಾಣದ ಸೋಂಕಿಗೆ ಒಳಗಾದವರಲ್ಲೂ ಏಳು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಹಾಗೂ 2 ತಿಂಗಳ ನಂತರವೂ ವ್ಯಕ್ತಿಗಳ ರೋಗನಿರೋಧಕ ಶಕ್ತಿಯ ಮೇಲೆ ಈ ವೈರಸ್ ಗಮನಾರ್ಹ ಪರಿಣಾಮವುಂಟು ಮಾಡಬಲ್ಲದು ಎನ್ನುವುದನ್ನು ಮೆಡಿಕಲ್ ಯೂನಿವರ್ಸಿಟಿ ಆಫ್ ವಿಯೆನ್ನಾದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಜ್ವರ ರೀತಿಯ ಲಕ್ಷಣಗಳು (ತಾಪಮಾನ ಏರಿಕೆ, ಆಯಾಸ, ಕೆಮ್ಮು, ತಲೆ ಸುತ್ತುವಿಕೆ), ಸಾಮಾನ್ಯ ಶೀತದಂಥ ಲಕ್ಷಣಗಳು (ಮೂಗು ಸೋರುವುದು,
ಸೀನುವಿಕೆ, ಒಣ ಗಂಟಲು), ಕೀಲು ಮತ್ತು ಸ್ನಾಯು ನೋವು, ಕಣ್ಣು ಮತ್ತು ಮೂಗಿನ ಉರಿಯೂತ, ಶ್ವಾಸಕೋಶ ತೊಂದರೆಗಳು (ನ್ಯೂಮೋನಿಯಾ ಮತ್ತು ಉಸಿರಾಟದ ಸಮಸ್ಯೆ), ಜಠರದ ಸಮಸ್ಯೆಗಳು (ಅತಿಸಾರ, ವಾಕರಿ ಕೆ), ವಾಸನೆ ಮತ್ತು ರುಚಿ ನಷ್ಟ. ಸೌಮ್ಯ ಪ್ರಮಾಣದಲ್ಲಿ ಸೋಂಕು ಇರುವವರಲ್ಲೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಹಾಗೂ ರೋಗ ವಾಸಿಯಾದ 10 ವಾರದ ನಂತರದವರೆಗೂ ಈ ಸಮಸ್ಯೆಗಳು ಕಾಡಬಹುದು ಎನ್ನುತ್ತದೆ ಈ ಸಂಶೋಧನೆ.
ಕೇರಳದಲ್ಲಿ ಏರಿಕೆ, ಕರ್ನಾಟಕದಲ್ಲಿ ಇಳಿಕೆ:
ಅ.3ರಿಂದ ನ.3ರ ಅವಧಿಯಲ್ಲಿ ಕೇರಳ, ದೆಹಲಿ, ಪ.ಬಂಗಾಳ ಮತ್ತು ಮಣಿಪುರದಲ್ಲಿ ಕೊರೊನಾ ಸಕ್ರಿಯ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ಈ ಸಂಖ್ಯೆ ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಕಳೆದ 7 ವಾರಗಳಲ್ಲಿ ದೇಶಾದ್ಯಂತದ ಸೋಂಕಿತರ ಸಂಖ್ಯೆ ಇಳಿಮುಖವಾದ ಕಾರಣ, ಆಸ್ಪತ್ರೆಗಳ ಮೇಲಿನ ಹೊರೆ ಸ್ವಲ್ಪಮಟ್ಟಿಗೆ ತಗ್ಗಿದೆ ಎಂದೂ ಹೇಳಿದೆ. ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆಗಳಲ್ಲಿ 38,310 ಪ್ರಕರಣ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.