Pakistan: ಶಿಯಾ-ಸುನ್ನಿ ನಡುವೆ ಭುಗಿಲೆದ್ದ ಹಿಂ*ಸಾಚಾರ, ಗುಂಡಿನ ದಾಳಿ; 124 ಮಂದಿ ಸಾವು
ನವೆಂಬರ್ 22ರಂದು ಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಘರ್ಷಣೆ ಆರಂಭವಾಗಿತ್ತು
Team Udayavani, Dec 1, 2024, 11:24 AM IST
ಇಸ್ಲಾಮಾಬಾದ್: ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಖೈಬರ್ ಪುಖ್ತುಂಖ್ವಾದಲ್ಲಿ ಕದನ ವಿರಾಮದ ಹೊರತಾಗಿಯೂ ಖುರ್ರಂ ಬುಡಕಟ್ಟು ಸಮುದಾಯದ ಭುಗಿಲೆದ್ದ ಹಿಂ*ಸಾಚಾರ ತೀವ್ರ ಸ್ವರೂಪ ಪಡೆದಿದ್ದು, ಸಾವನ್ನಪ್ಪಿದವರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.
ಕಳೆದ 10 ದಿನಗಳಿಂದ ಶಿಯಾ, ಸುನ್ನಿ ಸಮುದಾಯದ ನಡುವಿನ ಗುಂಡಿನ ಕಾಳಗ ಮುಂದುವರಿದಿದ್ದು, ಹಿಂಸಾಚಾರದಲ್ಲಿ 170ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಪ್ರಾಂತೀಯ ಗವರ್ನರ್ ಫೈಸಲ್ ಕರೀಂ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ನವೆಂಬರ್ 22ರಂದು ಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಘರ್ಷಣೆ ಆರಂಭವಾಗಿತ್ತು. ನಂತರ ಪರಾಚಿನರ್ ಸಮೀಪ ಪ್ರಯಾಣಿಕರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದು, ಸುಮಾರು 47 ಜನರು ಸಾವಿಗೀಡಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BRICS: ಭಾರತ ಸೇರಿ ಬ್ರಿಕ್ಸ್ ದೇಶಗಳಿಗೆ ಎಚ್ಚರಿಕೆ ನೀಡಿದ ಯುಎಸ್ ಅಧ್ಯಕ್ಷ ಟ್ರಂಪ್
Bangladesh; ನಿಲ್ಲದ ದೌರ್ಜನ್ಯ: ಮತ್ತೊಬ್ಬ ಅರ್ಚಕನ ಬಂಧನ
Bangladesh: ಚಿನ್ಮಯ್ ಕೃಷ್ಣ ದಾಸ್ ಸೇರಿ 17 ಮಂದಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಆದೇಶ
Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ
Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು
Bangla; ಭಾರತೀಯ ಬಸ್ ಮೇಲೆ ಬಾಂಗ್ಲಾದಲ್ಲಿ ದಾಳಿ; ಭಾರತ ವಿರೋಧಿ ಘೋಷಣೆ ಕೂಗಿದ ಸ್ಥಳೀಯರು
Udupi: 125ನೇ ಮನೆ ಪ್ರವೇಶಿಸಿದ ಗ್ರಂಥಾಲಯ ಅಭಿಯಾನ
Udupi: ಎಂಜಿಎಂ ಅಮೃತ ಮಹೋತ್ಸವ ಬೃಹತ್ ಶೋಭಾಯಾತ್ರೆ; 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.