ಶಿರಾಡಿ ಘಾಟ್‌ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು


Team Udayavani, Feb 5, 2022, 7:20 AM IST

 ಶಿರಾಡಿ ಘಾಟ್‌ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು

ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ ಹೆದ್ದಾರಿಯ ಅಭಿವೃದ್ಧಿ ಕುರಿತು ವಿವಿಧ ಮಜಲುಗಳಲ್ಲಿ ಉದಯವಾಣಿ ಸರಣಿ ವರದಿಯನ್ನು ಪ್ರಕಟಿಸಿದೆ. ಈ ರಸ್ತೆಯ ಸದ್ಯದ ಸ್ಥಿತಿ, ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ವಿವಿಧ ತಜ್ಞರು ಈ ವರದಿಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಈ ರಸ್ತೆಯಲ್ಲಿ ಓಡಾಡುವ ಜನರು ಏನು ಹೇಳುತ್ತಾರೆ? ಉದಯವಾಣಿ ಸಾಮಾಜಿಕ ಜಾಲ ತಾಣದ ಮೂಲಕ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ ವ್ಯಕ್ತವಾದ ಕೆಲವು ಸಲಹೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಸುರಂಗ ಮಾರ್ಗ ಬೇಕು
ಶಿರಾಡಿ ಘಾಟ್‌ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಿಸುವುದರಿಂದ ಅನೇಕ ಪ್ರಯೋಜನಗಳಿದ್ದು, ಸಮಯದ ಉಳಿತಾಯ, ಚಾಲಕನಿಗೆ ಕಡಿಮೆ ಶ್ರಮ, ಇಂಧನ ಉಳಿತಾಯ, ಅನಾವಶ್ಯಕ ಗಿಡ ಮರಗಳ ನಾಶ, ಕಡಿಮೆ ಪ್ರಮೇಯದ ರಸ್ತೆ ಅಪಘಾತ, ರಸ್ತೆ ಹದಗೆಡುವುದು ನಿಲ್ಲುತ್ತದೆ. ಆದ್ದರಿಂದ ಸುರಂಗ ಮಾರ್ಗ ಶಾಶ್ವತ ಪರಿಹಾರ.
-ಸದಾಶಿವ

ಗೂಡ್ಸ್ ರೈಲು ವ್ಯವಸ್ಥೆ ಮಾಡಲಿ
ಗೂಡ್ಸ್ ವಾಹನಗಳಿಗೆ ಪರ್ಯಾಯವಾಗಿ ಗೂಡ್ಸ್ ರೈಲು ವ್ಯವಸ್ಥೆ ಮಾಡಲಿ. ಮಾರನಹಳ್ಳಿಯಿಂದ ಸಕಲೇಶಪುರ ವರೆಗಿನ ರಸ್ತೆ ಸರಿಪಡಿಸಿ, ಶಿರಾಡಿ ಘಾಟ್‌ನ ಪ್ರಕೃತಿಗೆ ಕೈ ಹಾಕುವುದು ಬೇಡ. ದಯಮಾಡಿ ಸರಕಾರ ಪ್ರಕೃತಿ ಸಂರಕ್ಷಣೆಗೆ ಗಮನ ಹರಿಸಲಿ.
-ಸಂತೋಷ ಕುಮಾರ್‌ (ಸಿಎನ್‌)

ನಿಸರ್ಗಕ್ಕೆ ಹೊಡೆತ ಬೇಡ
ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದರೂ ಅದರ ನೇರ ಪರಿಣಾಮ ನಿಸರ್ಗದ ಮೇಲೆ ಬೀಳುತ್ತದೆ. ಜೀವ ವೈವಿಧ್ಯ ಇರುವ ಮಳೆ ಕಾಡುಗಳು ಕ್ಷೀಣಿಸಿ ಪ್ರಕೃತಿ ಸಮತೋಲನ ಕಳೆದುಕೊಳ್ಳುತ್ತದೆ. ಎತ್ತಿನ ಹೊಳೆ ಯೋಜನೆಯ ಪರಿಣಾಮ ಆನೆಗಳ ವಾಸ ಸ್ಥಳ ಬದಲಾವಣೆಗೊಂಡು ಇದೀಗ ಪಶ್ಚಿಮ ಘಟ್ಟದ ಕೆಳ ಭಾಗಗಳಾದ ಶಿರಾಡಿ, ಶಿರಿಬಾಗಿಲು, ಕೊಣಾಜೆ, ಕೊಂಬಾರು, ರೆಖ್ಯ, ಶಿಬಾಜೆ ಗ್ರಾಮಗಳು ಆನೆಗಳ ಕೃಷಿ ದಾಳಿಯಿಂದ ತತ್ತರಿಸಿ ಹೋಗುತ್ತಿವೆೆ.
-ಶಿವಕುಮಾರ ಕೆ.ಎಸ್‌.

ಟ್ಯಾಂಕರ್‌ಗಳನ್ನು ಪ್ರತ್ಯೇಕಿಸಿ
ತಿರುವುಗಳ ಸಂಖ್ಯೆ ಜಾಸ್ತಿಯಾದಾಗ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ದೊಡ್ಡ ದೊಡ್ಡ ಟ್ಯಾಂಕರ್‌ಗಳಿಗೆ ಪ್ರತ್ಯೇಕ ರಸ್ತೆ ಮಾಡಿ, ಬೇರೆ ಎಲ್ಲಾ ಘನ ವಾಹನಗಳು ಸುರಂಗದಿಂದ ಸಂಚರಿಸಿದರೆ ಯಾವುದೇ ಸಮಸ್ಯೆ ಉಂಟಾಗದು.
-ಪ್ರವೀಣ್‌ ಶೆಟ್ಟಿ

ಮಾರಣಹೋಮ ಬೇಡ
ಈ ರಸ್ತೆ ಮೊದಲೇ ಅಲ್ಲಿನ ಪರಿಸರಕ್ಕೆ ಮಾರಕ. ಇದನ್ನು ಚತುಷ್ಪಥ ಮಾಡುವುದು ಹಾಗೂ ಸುರಂಗ ತೋಡುವುದು ಇನ್ನೂ ಮಾರಕ. ಇದ್ದ ರಸ್ತೆಯನ್ನು ರಿಪೇರಿ ಮಾಡಿ ನಿರ್ವಹಣೆ ಮಾಡಿದರೆ ಸಾಕು. ಸುರಂಗ ಮಾರ್ಗದಿಂದ ಜಲಮೂಲಗಳು ಬತ್ತಿಹೋಗುತ್ತವೆ. ಲಕ್ಷಾಂತರ ಜೀವಜಂತುಗಳಿಗೆ ಹಾನಿಯಾಗುತ್ತದೆ. ರಸ್ತೆಯ ಹೆಸರಿನಲ್ಲಿ ಪ್ರಕೃತಿಯ ಮಾರಣಹೋಮ ಒಳ್ಳೆಯದಲ್ಲ.
-ಸಂಪತ್‌ ಕುಮಾರ್‌

ಚತುಷ್ಪಥ ಮಾರ್ಗ ಸೂಕ್ತ
ಪ್ರಕೃತಿಯ ಸೌಂದರ್ಯ ಮೈವೆತ್ತು ನಿಂತಿರುವ ರಸ್ತೆ ಶಿರಾಡಿ ಘಾಟ್‌.ಆ ಅಂದವನ್ನು ತುಂಬಿಕೊಳ್ಳಲು ಎರಡು ಕಣ್ಣುಗಳೂ ಸಾಲದು, ಸುರಂಗ ಮಾರ್ಗ ತೋಡಿದರೆ ಪ್ರಕೃತಿಯ ಮಡಿಲಿಗೂ ಹೆಚ್ಚು ಪೆಟ್ಟು, ಮಾತ್ರವಲ್ಲ ಪ್ರಕೃತಿಯ ಸೌಂದರ್ಯ ವೀಕ್ಷಿಸುವ ಅಪೂರ್ವ ಅವಕಾಶದಿಂದಲೂ ವಂಚಿತರಾಗುತ್ತೇವೆ, ಚತುಷ್ಪಥ ಮಾರ್ಗವೇ ಹೆಚ್ಚು ಸೂಕ್ತ.
-ಅಬ್ದುಲ್‌ ರಹಮಾನ್‌ ಪಿ.ಟಿ.

ಅಪಾಯ ತಂದೊಡ್ಡಬೇಡಿ
ಕಾಂಕ್ರೀಟೀಕರಣ ಆಗದ ರಸ್ತೆಗೆ ಕಾಂಕ್ರೀಟ್‌ ಹಾಕಿದರೆ ಸಾಕು. ಪ್ರಕೃತಿ ಸೌಂದರ್ಯ ಸವಿಯುತ್ತಾ ಘಾಟಿಯಲ್ಲಿ ಸಂಚರಿಸೋಣ. ರಸ್ತೆ ಅಗಲ ಮಾಡಿ ಗುಡ್ಡ ಜರಿದು ಇನ್ನೇನೋ ಅಪಾಯ ತಂದೊಡ್ಡುವುದು ಬೇಡ. ಎಲ್‌.ಪಿ.ಜಿ. ಟ್ಯಾಂಕರ್‌ ಟ್ರಕ್‌ಗಳಿಗೆ ಬೇರೆ ಪರ್ಯಾಯ ಮಾರ್ಗ ಇರಲಿ.
-ಉಲ್ಲಾಸ್‌ ಕೆ.

ಶಿವಮೊಗ್ಗ ರಸ್ತೆಗೆ ಉತ್ತೇಜಿಸಿ
ಭಾರಿ ಗಾತ್ರದ ವಾಹನಗಳಿಗೆ ಪರ್ಯಾಯ ಮಾರ್ಗ ಒದಗಿಸಿ. ಬೆಂಗಳೂರು – ಶಿವಮೊಗ್ಗ – ಕರಾವಳಿಯ ಸಂಪರ್ಕ ವನ್ನು ಉತ್ತೇಜಿಸಬಹುದು. ಬೆಂಗಳೂರು – ಕರಾವಳಿ ರೈಲ್ವೇ ಮಾರ್ಗವನ್ನು ಹೆಚ್ಚು ಪ್ರಚಲಿತ ಗೊಳಿಸುವುದು ಒಳ್ಳೆಯದು.
-ನಾಗರಾಜ ಡಿ. ಬೈಂದೂರು

ಹೀಗೆಯೇ ಇರಲಿ ಬಿಡಿ
ಶಿರಾಡಿಯಲ್ಲಿ ಚತುಷ್ಪಥವೂ ಬೇಡ, ಸುರಂಗ ಮಾರ್ಗವೂ ಬೇಡ. ಯಾಕೆಂದರೆ ಚತುಷ್ಪಥ ಮಾಡುವಷ್ಟು ಸ್ಥಳದ ಕೊರತೆ ಇದ್ದು, ಈಗಾಗಲೇ ಯೋಜನೆಗಳ ಹೆಸರಲ್ಲಿ ಸಾಕಷ್ಟು ಅರಣ್ಯ ನಾಶವಾಗಿದೆ. ಅಲ್ಲದೇ ಮೂರು ಕಡೆಗಳಲ್ಲಿ ಅಣೆಕಟ್ಟುಗಳನ್ನೂ ನಿರ್ಮಿಸಿದ್ದಾರೆ. ಅಲ್ಲಿ ಈಗಾಗಲೇ ಬೆಂಗಳೂರು ಮಂಗಳೂರು ರೈಲು ಸಂಚಾರವಿದ್ದು, ಅಲ್ಲಲ್ಲಿ ರೈಲ್ವೇ ಸುರಂಗಗಳೂ ಇವೆೆ. ಅಲ್ಲಿ ಮತ್ತೆ ಭೂಮಿಯನ್ನು ಕೊರೆದರೆ ಪರಿಣಾಮ ಊಹಿಸಬಹುದು.
-ಪುಷ್ಪರಾಜ್‌ ಗುಂಡ್ಯ

ತುರ್ತು ದುರಸಿ ಮಾಡಿ
ಹಾಸನದಿಂದ ಸಕಲೇಶಪುರದವರೆಗಿನ ಮಾರ್ಗಕ್ಕೆ ಮಾತ್ರ ದುರಸ್ತಿ ಕಾರ್ಯದ ಆವಶ್ಯಕತೆ ಇದ್ದು ಉಳಿದಂತೆ ಎಲ್ಲವೂ ಚೆನ್ನಾಗಿದೆ. ವಾಹನಗಳು ಸಂಚರಿಸಲು ಉಪಯೋಗ ವಾಗುವಷ್ಟು ರಸ್ತೆಯನ್ನು ರಿಪೇರಿ ಮಾಡುವುದು ಉತ್ತಮ. ಅನಂತರ ರಸ್ತೆ ಅಭಿವೃದ್ಧಿ ಕುರಿತು ಚಿಂತಿಸುವುದು ಒಳಿತು.
-ನಿತಿನ್‌ ಕೇಶವ್‌ ಭಂಡಾರಿ

ಉದಯವಾಣಿ ಸರಣಿ ವರದಿಗಳು
ಇದನ್ನೂ ಓದಿ:

ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?-  https://bit.ly/354VPOy

ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ –https://bit.ly/3qTX4Zp

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ-https://bit.ly/3fUDfed

ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ-https://bit.ly/34bJ5oO

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು-https://bit.ly/33YQCYz

ಶಿರಾಡಿ ಘಾಟಿ ಕಾಮಗಾರಿ: ರಾಜಕೀಯ ಹಸ್ತಕ್ಷೇಪ ನಿಂತರೆ ಕೆಲಸ ಸುಗಮ-https://bit.ly/3g55Opz

ಟೆಂಡರ್‌, ಡಿಪಿಆರ್‌ಗಳಲ್ಲೇ ಕಳೆದು ಹೋದ ಕಾಮಗಾರಿhttps://bit.ly/3LapUwP

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.