Shiruru Hill Colapse: ಹೆದ್ದಾರಿಯ ಒಂದು ಬದಿ ಮಣ್ಣು ತೆರವು ಕಾರ್ಯ ಪೂರ್ಣ
ಸಂಪೂರ್ಣ ಮಣ್ಣು ತೆರವು ಬಳಿಕ ತಜ್ಞರಿಂದ ಪರಿಶೀಲಿಸಿ ವಾಹನ ಸಂಚಾರಕ್ಕೆ ಅನುಮತಿ
Team Udayavani, Jul 19, 2024, 9:04 PM IST
ಅಂಕೋಲಾ : ತಾಲೂಕಿನ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತ ಪ್ರದೇಶದಲ್ಲಿ ರಸ್ತೆಯ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ನಾಲ್ಕನೇ ದಿನವು ಬರದಿಂದ ಸಾಗಿದ್ದು ಹೆದ್ದಾರಿಯ ಒಂದು ಬದಿ ಸಂಪೂರ್ಣವಾಗಿ ಮಣ್ಣು ತೆರವು ಕಾರ್ಯ ಮುಕ್ತಾಯವಾಗಿದೆ.
ಒಂದು ಬದಿ ಹೆದ್ದಾರಿಯ ಮಣ್ಣು ತೆರವು ಪೂರ್ಣಗೊಂಡರು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ರಸ್ತೆಯಲ್ಲಿ ಬಿದ್ದಿರುವ ಸಂಪೂರ್ಣ ಮಣ್ಣು ತೆರವಾದ ಮೇಲೆಯೇ ತಜ್ಞರಿಂದ ಪರಿಶೀಲಿಸಿ ವಾಹನ ಸಂಚಾರ ಆರಂಭಿಸಲಾಗುವುದೆಂದು ಹೇಳಲಾಗುತ್ತಿದೆ.
ಮೆಟಲ್ ಡಿಟೆಕ್ಟರ್ನಿಂದ ತಪಾಸಣೆ:
ಗುಡ್ಡ ಕುಸಿತ ಪ್ರದೇಶದ ಮಣ್ಣಿನ ಅಡಿಯಲ್ಲಿ ಬೆಂಜ್ ಲಾರಿ ಮತ್ತು ಚಾಲಕ ಸಿಲುಕಿರುವ ಮಾಹಿತಿ ಆಧರಿಸಿ, ಈ ಬಗ್ಗೆ ಜಿಲ್ಲಾ ಬಾಂಬ್ ನಿಷ್ಕ್ರಿಯದಳ, ಮೆಟಲ್ ಡಿಟೆಕ್ಟರ್ ಮೂಲಕ ಶುಕ್ರವಾರ ತಪಾಸಣೆ ಕೈಗೊಂಡಿದ್ದಾರೆ. ಜೊತೆಗೆ ಗಂಗಾವಳಿ ನದಿಯಲ್ಲಿ ಕಣ್ಮರೆಯಾದವರ ಶೋಧ ಕಾರ್ಯ ನೌಕಾನೆಲೆ , ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಿಂದ ನಿರಂತರ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.