ಆಟೋ ಡ್ರೈವರ್…ಏಕನಾಥ ಶಿಂಧೆ ಬೆಳಗಾವಿ ಗಡಿ ಗಲಾಟೆಯಲ್ಲಿ 40 ದಿನ ಜೈಲಿನಲ್ಲಿದ್ದ ಶಿವಸೈನಿಕ
ಗುರು ಎಂದೇ ಹೇಳಿಕೊಳ್ಳುವ ಆನಂದ್ ಡಿಘೆ ಸಾಹೇಬ್ ಅವರ ಕಣ್ಣಿಗೆ ಬಿದ್ದರು.
Team Udayavani, Jun 23, 2022, 10:10 AM IST
ಮಹಾರಾಷ್ಟ್ರದ ಮಹಾ ಆಘಾಡಿ ಸರ್ಕಾರ ಪತನ ಅಂಚಿಗೆ ತಲುಪಿರುವಂತೆ ಈಗ ಎಲ್ಲೆಡೆ ಕೇಳಿಬರುತ್ತಿರುವ ಹೆಸರೇ ಏಕನಾಥ ಶಿಂಧೆ. ಒಂದು ಕಾಲದ ಹಾರ್ಡ್‌ಕೋರ್ ಶಿವಸೈನಿಕ, ಬಾಳಾ ಸಾಹೇಬ್ ಠಾಕ್ರೆ ಅವರ ಕಟ್ಟಾ ಬೆಂಬಲಿಗ, ನಾಲ್ಕು ಅವಧಿಯ ಶಾಸಕ, ಕಾರ್ಪೊರೇಟರ್, ಸ್ಥಳೀಯ ಮಟ್ಟದಲ್ಲಿ ಅತ್ಯಂತ ಜನಪ್ರಿಯ ನಾಯಕ…
ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆ ಸರ್ಕಾರ ಮಾಡಿದಾಗಲಿಂದಲೂ, ತೀರಾ ಅಸಹನೆಯಲ್ಲಿದ್ದ ಶಿವಸೇನೆಯ ಹಿರಿಯ ನಾಯಕ, ಸದ್ಯ ಪಕ್ಷದ ವಿರುದ್ಧವೇ ಸಿಡಿದು ನಿಂತಿದ್ದಾರೆ. ಅಷ್ಟೇ ಅಲ್ಲ, ಉದ್ಧವ್ ಠಾಕ್ರೆಯ ಅತ್ಯಂತ ನಿಕಟವರ್ತಿಯಾಗಿದ್ದರೂ, ಎಲ್ಲೋ ಒಂದು ಕಡೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅರಿತ ಕೂಡಲೇ ತಮ್ಮ ಪ್ರಭಾವ ತೋರಿಸಿದ್ದಾರೆ.
1980ರ ದಶಕದಲ್ಲಿ ರಾಜಕೀಯವಾಗಿ ಮುನ್ನೆ ಲೆಗೆ ಬಂದ ಏಕನಾಥ್ ಶಿಂಧೆ, ಶಿವಸೇನೆಯ ಮತ್ತೂಬ್ಬ ನಾಯಕ, ಥಾಣೆಯ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಡಿಘೆ ಸಾಹೇಬ್ ಗರಡಿಯಲ್ಲಿ ಬೆಳೆದವರು. ಆರಂಭದಲ್ಲಿ ಕಿಸಾನ್ ನಗರ ಪ್ರದೇಶದ ಶಿವಸೇನೆಯ ಶಾಖಾ ಹೋರಾಟಗಾರನಾಗಿದ್ದ ಏಕನಾಥ್, ಮುಂದೆ ಕಾರ್ಪೊರೇಟರ್ ಆಗಿ, ಶಾಸಕನಾಗಿ ಬೆಳೆದು ನಿಂತರು.
58 ವರ್ಷದ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಸತಾರಾ ಮೂಲದವರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಆರಂಭಿಸಿ, ಬಳಿಕ ಆಟೋ ಡ್ರೈವರ್ ಆದ ಇವರು, 1980ರಲ್ಲಿ ತಮ್ಮ ಗುರು ಎಂದೇ ಹೇಳಿಕೊಳ್ಳುವ ಆನಂದ್ ಡಿಘೆ ಸಾಹೇಬ್ ಅವರ ಕಣ್ಣಿಗೆಬಿದ್ದರು. ಶಿಂಧೆಯ ಪ್ರಮುಖ ಸಾಮರ್ಥ್ಯವೇ ಜನರನ್ನು ಸೇರಿಸುವುದಾಗಿತ್ತು. ಶಿವಸೇನೆಯ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದ ಇವರು, ಡಿಘೆ ಅವರ ಸಮಾಜ ಕಲ್ಯಾಣ ಕೆಲಸದಲ್ಲಿ ಭಾಗಿಯಾಗುತ್ತಿದ್ದರು.
ಅಷ್ಟೆ ಅಲ್ಲ, ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದಲ್ಲಿ ನಡೆ ಯುತ್ತಿದ್ದ ಪ್ರತಿಭಟನೆಯಲ್ಲೂ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಇದಕ್ಕಾಗಿ ಬಂಧಿತ ರಾಗಿ ಬಳ್ಳಾರಿ ಜೈಲಿನಲ್ಲಿ 40 ದಿನ ಕಳೆದಿದ್ದರು. 2014ರಲ್ಲಿ ಬಿಜೆಪಿ- ಶಿವಸೇನೆ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿದರು. ಈಗ ಉದ್ಧವ್ ಠಾಕ್ರೆ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ವಿಚಿತ್ರವೆಂದರೆ, ಈಗ ಶಿವಸೇನೆ ವಿರುದ್ಧ ಬಂಡೇಳುವವರೆಗೂ ಪಕ್ಷದಲ್ಲಿ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದವರು ಶಿಂಧೆ. ಆದರೆ, 2019ರ ನಂತರ ಕಾಂಗ್ರೆಸ್ -ಎಸ್‌ಸಿಪಿ ಜತೆ ಸರ್ಕಾರ ರಚನೆ ಮಾಡಿದ ಮೇಲೆ ಒಂದಷ್ಟು ಅಸಮಾಧಾನ ಗೊಂಡಿದ್ದರು. ಬಿಜೆಪಿ ನಾಯಕರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿಯೇ, ಬಿಜೆಪಿ ಸರ್ಕಾರದ ಮೇಲೆ ಎಷ್ಟೇ ಟೀಕೆ ಮಾಡಿದರೂ, ಶಿಂಧೆ ಅವರನ್ನು ಗುರಿಯಾಗಿಸಿ ಯಾವುದೇ ಟೀಕೆ ಮಾಡುತ್ತಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.