ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ಮಹಿಳೆ :ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
Team Udayavani, Nov 10, 2021, 11:36 AM IST
ಶಿವಮೊಗ್ಗ : ರೈಲ್ವೆ ನಿಲ್ದಾಣದಲ್ಲಿ ಭಾರಿ ಅನಾಹುತ ತಪ್ಪಿದೆ. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯಾತಪ್ಪಿ ಬಿದ್ದ ಮಹಿಳೆಯನ್ನು ರೈಲ್ವೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಪ್ರಾಣದ ಹಂಗು ತೊರೆದು ಪೊಲೀಸರು ಮಹಿಳೆಯ ರಕ್ಷಣೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಾಗ ಘಟನೆ ಸಂಭವಿಸಿದೆ. ಬೆಳಗ್ಗೆ 6.55ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ಬರುವ ರೈಲು 7.05ಕ್ಕೆ ನಿಲ್ದಾಣದಿಂದ ಹೊರಡಲಿದೆ. ಮಂಗಳವಾರ ಬೆಳಗ್ಗೆ ರೈಲು ಹೊರಟಾಗ ಘಟನೆ ಸಂಭವಿಸಿದೆ.
ಹೇಗಾಯ್ತು ಘಟನೆ?
ಸಂಬಂಧಿಕರನ್ನು ರೈಲು ಹತ್ತಿಸಲು ಬಂದಿದ್ದ ಮಹಿಳೆ ರೈಲು ಏರಿದ್ದರು. ರೈಲು ಹೊರಡುತ್ತಿದ್ದಂತೆ ಗಾಬರಿಯಿಂದ ಕೆಳಗಿಳಿಯಲು ಮುಂದಾಗಿದ್ದಾರೆ. ವ್ಯಕ್ತಿಯೊಬ್ಬರು ಮಹಿಳೆಯ ಕೈ ಹಿಡಿದು ಕೆಳಗಿಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲು ಚಲಿಸುತ್ತಿದ್ದ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು ಮಹಿಳೆ ಪ್ಲಾಟ್’ಫಾರಂಗೆ ಕಾಲಿಟಿದ್ದಾರೆ. ವಿರುದ್ಧ ದಿಕ್ಕಿಗೆ ಮುಖ ಮಾಡಿದ್ದು ಮತ್ತು ಸೀರೆ ಧರಿಸಿದ್ದರಿಂದ ಮಹಿಳೆ ಪ್ಲಾಟ್’ಫಾರಂ ಮೇಲೆ ಬಿದ್ದಿದ್ದಾರೆ.
ಪ್ರಾಣದ ಹಂಗು ತೊರೆದ ರೈಲ್ವೆ ಪೊಲೀಸ್
ಪ್ಲಾಟ್’ಫಾರಂ ಮೇಲೆ ನಿಂತಿದ್ದ ರೈಲ್ವೆ ಪೊಲೀಸರು ಪ್ರಾಣದ ಹಂಗು ತೊರೆದು ಮಹಿಳೆಯ ರಕ್ಷಣೆ ಮಾಡಿದ್ದಾರೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF)ನ ಸಿಬ್ಬಂದಿ ಜಗದೀಶ್, ರೈಲ್ವೆ ಪೊಲೀಸರಾದ ಅಣ್ಣಪ್ಪ ಎ.ಎಸ್ ಮತ್ತು ಬಿ.ಎಸ್.ಸಂತೋಷ್ ಅವರು ಕೂಡಲೆ ಮಹಿಳೆಯ ನೆರವಿಗೆ ಬಂದಿದ್ದಾರೆ. ಮಹಿಳೆ ರೈಲಿಗೆ ಸಿಲುಕದಂತೆ ನೋಡಕೊಂಡಿದ್ದಾರೆ.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ರೈಲ್ವೆ ಪೊಲೀಸರ ಕಾರ್ಯಕ್ಕೆ ಸ್ಥಳದಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು, ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಈ ದೃಶ್ಯ ಗಮನಿಸಿ ರೈಲ್ವೆ ಪೊಲೀಸರ ಕಾರ್ಯಕ್ಕೆ ಶಹಬ್ಬಾಸ್ ತಿಳಿಸಿದ್ದಾರೆ. ರೈಲ್ವೆ ಇಲಾಖೆ ಮೈಸೂರು ವಿಭಾಗದ ಡಿವಿಷನಲ್ ಮ್ಯಾನೇಜರ್ ರಾಹುಲ್ ಅಗರ್’ವಾಲ್ ಅವರು ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಟ್ವಿಟ್ಟರ್ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿಗೆ 2ನೇ ಸ್ಥಾನ : ಮೊದಲ ಸ್ಥಾನದಲ್ಲಿ ಆ ಗಾಯಕಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.