ನನಸಾದ ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಕನಸು
Team Udayavani, Jul 6, 2021, 6:40 AM IST
ಶ್ಯಾಮ ಪ್ರಸಾದ್ ಮುಖರ್ಜಿ ಎಂದೊಡನೆ ಬಹು ತೇಕ ಜನಸಾಮಾನ್ಯರಿಗೆ ನೆನಪಾಗುವುದು ಅವರಿಂದ ಸ್ಥಾಪಿತ ವಾದ “ಭಾರತೀಯ ಜನಸಂಘ’ ಎನ್ನುವ ಪಕ್ಷ ಮತ್ತು ಆ ಮೂಲಕ ಇದೀಗ ಪ್ರಪಂಚದ ಅತೀ ದೊಡ್ಡ ಮತ್ತು ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷವೆನ್ನುವ ಹೆಗ್ಗಳಿಕೆ ಹೊಂದಿರುವ ಭಾರತೀಯ ಜನತಾ ಪಕ್ಷದ ಬಗ್ಗೆ. ಆದರೆ ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಅವರು ಜನಸಂಘದ ಸ್ಥಾಪನೆಗೂ ಮುಂಚಿನ ಹೋರಾಟ ಗಳು, ದೃಢ ಸಂಕಲ್ಪಗಳು, ಯಾವುದೇ ಸಂದರ್ಭದಲ್ಲೂ ಒಂದಿನಿತೂ ಅಲ್ಲಾಡದೆ ಅಚಲವಾಗಿ ನಿಂತ ಅವರ ಸಿದ್ಧಾಂತ, ರಾಷ್ಟ್ರೀಯತೆಯ ಪರವಾದ ಹೋರಾಟದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದ ಅವರ ಆ ಮನೋಸ್ಥೈರ್ಯ ಹಾಗೂ ಅಂತಿಮವಾಗಿ ಅವರ ತ್ಯಾಗದ ಕುರಿತ ಇತಿ ಹಾಸವನ್ನು ಸಮಸ್ತ ಭಾರತೀಯರೂ ಅರಿತುಕೊಳ್ಳ ಬೇಕಾಗಿದ್ದು ಇಂದಿನ ಅಗತ್ಯ.
ನಮ್ಮದೇ ಆಗಿದ್ದರೂ ನಮ್ಮದಾಗಿರದಿದ್ದ ಕಾಶ್ಮೀರದಲ್ಲಿ ಇಂದು ತ್ರಿವರ್ಣ ಧ್ವಜ ಸ್ವತ್ಛಂದವಾಗಿ ಹಾರಾಡುತ್ತಿದೆ ಯೆಂದರೆ ಅದರ ಹಿಂದಿನ ಶಕ್ತಿ ಡಾ| ಶ್ಯಾಮ ಪ್ರಸಾದರು ಎಂದರೆ ಅತಿಶಯೋಕ್ತಿ ಯೇನೂ ಆಗಲಾರದು. ಏಕೆಂದರೆ ಸ್ವಾತಂತ್ರಾéಅನಂತರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜತೆ ಮಾತು ಕತೆಗಳು ಆರಂಭಗೊಂಡು, ದೇಶದ ರಾಷ್ಟ್ರ ಧ್ವಜದ ಜತೆಗೆ ಜಮ್ಮು- ಕಾಶ್ಮೀರದ ರಾಷ್ಟ್ರಧ್ವಜವನ್ನೂ ಸಮಾನಾಂತರವಾಗಿ ಹಾರಿ ಸಲು ಸಾರ್ವಭೌಮ ರಾಷ್ಟ್ರವಾದ ಭಾರತವು ಒಪ್ಪಿ ಕೊಂಡಾಗ, ಭಾರತದೊಳಗಿನ ರಾಜ್ಯವೊಂದರಲ್ಲಿ ಭಾರ ತೀಯರಿಗೆ ಆಸ್ತಿ ಖರೀದಿಸಲು ನಿರ್ಬಂಧ ಹೇರಿದಾಗ, ಆ ರಾಜ್ಯಕ್ಕೆ ಸ್ವಾಯತ್ತೆ ನೀಡುವ ಕರಡು ಸಿದ್ಧವಾದಾಗ ಮೊದಲ ದೊಡ್ಡ ವಿರೋಧ ವ್ಯಕ್ತವಾಗಿದ್ದು ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಅವರಿಂದ. ಕಾಶ್ಮೀರವನ್ನು ಪೂರ್ಣವಾಗಿ ಭಾರತದಲ್ಲಿ ಸೇರಿಸಲು ಹೋರಾಡಿ, ಅದೇ ಹೋರಾಟಕ್ಕೆ ಪ್ರಾಣವನ್ನೇ ಅರ್ಪಿಸಿದ ಮೊದಲಿಗರು ಪೂಜನೀಯ ಮುಖರ್ಜಿಯವರು.
ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶ ವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಹೊಂದಿದ್ದ ಮುಖರ್ಜಿಯವರ ಆ ಕನಸುಗಳು ಇದೀಗ ಒಂದೊಂದಾಗಿ ನನಸಾಗುತ್ತಾ ಸಾಗುತ್ತಿವೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಪುನಃ ವಶಪಡಿಸಿಕೊಂಡು ಅದನ್ನು ಭಾರತದ ಭಾಗವನ್ನಾಗಿ ಘೋಷಿಸಬೇಕು ಎಂದು ನೆಹರೂ ಅವರನ್ನು ಒತ್ತಾಯಿಸಿದ್ದ ಮುಖರ್ಜಿಯವರು, ಒಂದು ವೇಳೆ ಭಾರತ ತನ್ನ ಪ್ರದೇಶವನ್ನು ವಶಪಡಿಸಿಕೊಳ್ಳಲು ವಿಫಲವಾದರೆ ಅದೊಂದು ರಾಷ್ಟ್ರೀಯ ಅವಮಾನ ಎಂದು ಹೇಳಿದ್ದರು. “ಏಕ್ ದೇಶ್ ಮೆ ದೋ ವಿಧಾನ್, ದೋ ಪ್ರಧಾನ್ ಔರ್ ದೋ ನಿಶಾನ್ ನಹಿ ಚಲೇಂಗೆ ನಹಿ ಚಲೇಂಗೆ’ ಎನ್ನುವ ಘೋಷಣೆಯ ಮೂಲಕ ಒಂದೇ ದೇಶದ ಎರಡು ಸಂವಿಧಾನ, ಎರಡು ಗುರಿ, ಎರಡು ಬಾವುಟಗಳನ್ನು ಗಟ್ಟಿ ದನಿಯಲ್ಲಿ ವಿರೋಧಿಸಿದ ಅವರು, 1951ರ ಅ. 21ರಂದು ಭಾರತೀಯ ಜನಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಹೊಸ ಪಕ್ಷ 1952ರ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 3 ಸ್ಥಾನಗಳನ್ನು ಮಾತ್ರ ಗಳಿಸಿಕೊಳ್ಳಲು ಶಕ್ತ ವಾಯಿತು. ಆದರೆ ಮುಖರ್ಜಿಯ ವರು ಅಂದು ನೆಟ್ಟ ಜನಸಂಘವೆನ್ನುವ ಗಿಡವು ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ. ಆಡ್ವಾಣಿ ಮುಂತಾದ ಹಿರಿಯರಿಂದ ನೀರೆರೆಸಿಕೊಂಡು ಮುನ್ನೂರಾ ಮೂರಕ್ಕೆ ಏರಿಕೆಯಾಗಿದೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಮೂಲಕ ಭಾರತದ ಸಮಗ್ರತೆಯನ್ನು ಎತ್ತಿ ಹಿಡಿಯುವ ಸಾಹಸದಲ್ಲಿ ಯಶಸ್ಸನ್ನು ಕಂಡಿದೆ. ಪ್ರಬಲ ಇಚ್ಛಾಶಕ್ತಿ ಯೊಂದಿಗೆ ಕಾಣುವ ಯಾವ ಕನಸುಗಳೂ ನನಸಾಗದೇ ಉಳಿಯಲಾರವು ಎನ್ನುವುದಕ್ಕೆ ಶ್ಯಾಮ ಪ್ರಕಾಶ ಮುಖರ್ಜಿಯವರ ಕನಸುಗಳೇ ಸಾಕ್ಷಿ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಭಾರತದ ರಾಷ್ಟ್ರ ಧ್ವಜವು ಎಲ್ಲೆಡೆ ಹಾರಾಡುತ್ತಿದೆ. ಅಲ್ಲಿ ನಡೆಯುತ್ತಿದ್ದ ಉಗ್ರ ಚಟುವಟಿಕೆಗಳಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಸ್ಥಳೀಯ ಚುನಾವಣೆಗಳು ಮುಕ್ತವಾಗಿ ನಡೆ ಯುತ್ತಿವೆ. ನೆಲೆ ಕಳೆದುಕೊಂಡಿದ್ದ ಕಾಶ್ಮೀರೀ ಪಂಡಿತರು ತಮ್ಮ ತಾಯ್ನಾಡಿಗೆ ಮರಳಲು ಉತ್ಸುಕರಾಗಿ ನಿಂತಿದ್ದಾರೆ. ಇದೀಗ ಅವರು ಅನ್ಯ ರಾಜ್ಯದವರನ್ನು ವಿವಾಹವಾಗಿಯೂ ತಮ್ಮ ತವರು ನೆಲದಲ್ಲಿ ಭೂಮಿಯ ಒಡೆತನ ಹೊಂದುವ, ಅದನ್ನು ತಮ್ಮ ಮಕ್ಕಳಿಗೆ ಹಸ್ತಾಂತರಿಸುವ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.
“ಸ್ಪಷ್ಟ ಮಾತು, ನೇರ ನಡೆ-ನುಡಿ, ದೃಢ ನಿಶ್ಚಯ’ ಇವು ಮುಖರ್ಜಿಯವರ ಹೆಗ್ಗುರುತಾಗಿದ್ದವು. ಅವರು ಯಾವುದೇ ಪಕ್ಷದಲ್ಲಿರಲಿ, ಯಾವುದೇ ಸಂಘಟನೆಯಲ್ಲಿ ರಲಿ, ಯಾವುದೇ ಹುದ್ದೆಯಲ್ಲಿರಲಿ, ಯಾವುದೇ ಪರಿಸ್ಥಿತಿ ಯಲ್ಲಿರಲಿ, ರಾಷ್ಟ್ರೀಯತೆ ಮತ್ತು ಸಮಗ್ರತೆಯ ವಿಚಾರವನ್ನು ಹೊರತುಪಡಿಸಿ ಇನ್ನೊಂದನ್ನು ಯೋಚಿಸಿದವರಲ್ಲ. ಮಧ್ಯಂತರ ಕೇಂದ್ರ ಸರಕಾರದಡಿಯಲ್ಲಿ ಪ್ರಥಮ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿ ಭಾರತದ ಕೈಗಾರಿಕಾ ನೀತಿಗೆ ಅಡಿಪಾಯ ಹಾಕಿಕೊಟ್ಟ ಮುಖರ್ಜಿ ಅವರು ಹಲವಾರು ಪ್ರಗತಿಪರ ಯೋಜನೆ ಹಾಗೂ ಸುಧಾರಣೆಗೆ ಕಾರಣರಾದರು. ಅದಾಗಿಯೂ ಪಾಕಿಸ್ಥಾನ ದಲ್ಲಿ ಹಿಂದೂ ಗಳ ಮೇಲಿನ ದೌರ್ಜನ್ಯ ತೀವ್ರಗೊಂಡಾಗ, ಸರಕಾರವು ರಾಷ್ಟ್ರೀಯತೆಯ ವಿರುದ್ಧ ಸಾಗುತ್ತಿದೆ ಎಂದೆನ್ನಿಸಿದಾಗ ಮತ್ತೇನನ್ನೂ ಯೋಚಿಸದೆ ಮಂತ್ರಿ ಮಂಡಲಕ್ಕೆ ರಾಜೀ ನಾಮೆ ನೀಡಿ ನೇರ ಹೋರಾಟಕ್ಕಿಳಿದರು. ತಾನು ನಂಬಿದ ತಣ್ತೀ, ಸಿದ್ಧಾಂತಗಳಿಗಾಗಿ ಮಂತ್ರಿ ಪದವಿ ತ್ಯಜಿಸಿದ ಮೊದಲಿ ಗರೆಂದರೆ ಅದು ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಅವರು.
ವಿಭಜನಾಕಾರರ ನಿದ್ದೆಗೆಡಿಸಿದ್ದ ಮುಖರ್ಜಿ ಅವರು ಅದೇ ಹೋರಾಟದಲ್ಲೇ ಬಂಧನಕ್ಕೊಳಪಟ್ಟು ನಿಗೂಢವಾಗಿ ಮೃತಪಟ್ಟರು. ಅವರ ಆ ಬಲಿದಾನಕ್ಕೆ ಸುಮಾರು ಅರವತ್ತಾರು ವರ್ಷಗಳ ಅಅನಂತರ ಪ್ರತಿಫಲವೊಂದು ದೊರೆತಿದೆ. ಎಪ್ಪತ್ತು ವರ್ಷಗಳಲ್ಲಿ ಸಮಗ್ರ ಭಾರತವೊಂದು ತಲೆ ಎತ್ತಿ ನಿಲ್ಲುವ ಉತ್ಸಾಹ ದಲ್ಲಿದೆ. ಆದರೆ ವಿಘಟನಾವಾದಿಗಳ ಆಟಾಟೋಪ ಇಂದಿಗೂ ನಿಂತಿಲ್ಲ. ಇತ್ತೀ ಚೆಗಷ್ಟೇ ಕ್ಲಬ್ಹೌಸ್ ಎನ್ನುವ ವಚ್ಯುìವ ಲ್ ವೇದಿಕೆಯ ಮೂಲಕ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ “ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಯನ್ನು ರದ್ದು ಮಾಡಿದ್ದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. 370ನೇ ವಿಧಿಯನ್ನು ರದ್ದು ಮಾಡಿದ್ದು ವಿಷಾದಕರ ಸಂಗತಿ. ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಈ ವಿಷಯವನ್ನು ಪುನರ್ಪರಶೀಲಿಸುತ್ತೇವೆ’ ಎನ್ನುವ ಭರವಸೆ ಯನ್ನು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಪಾಕಿ ಸ್ಥಾನದ ಪತ್ರಕರ್ತರಿಗೆ ನೀಡಿದ್ದು ಸಾಕಷ್ಟು ಸುದ್ದಿ ಯಾಗಿದೆ.
ಇದು ನೇರವಾಗಿ ರಾಷ್ಟ್ರೀಯತೆಯ, ರಾಷ್ಟ್ರದ ಏಕ ತೆಯ, ಅಖಂಡತೆಯ ವಿರುದ್ಧದ ಸಂಚು. ಎಲ್ಲಕ್ಕಿಂತಲೂ ಹೆಚ್ಚಾಗಿ ಡಾ| ಶ್ಯಾಮ ಪ್ರಸಾದ್ ಮುಖರ್ಜಿಯವರ ತ್ಯಾಗ, ಬಲಿದಾನಗಳಿಗೆ ಮಾಡುವ ಅಪಮಾನ. ರಾಷ್ಟ್ರ ವಿಭಜನ ಶಕ್ತಿಗಳು 1950ರ ಕಾಲಘಟ್ಟದಲ್ಲಿ ಇದ್ದಿದ್ದ ಕ್ಕಿಂತಲೂ ಹೆಚ್ಚು ಸಾಮರ್ಥ್ಯ ಮತ್ತು ಬೆಂಬಲದೊಂದಿಗೆ ಅಖಂಡ ಭಾರತದ ವಿರುದ್ಧ ನಿಂತಿರುವ ಈ ಸಂದರ್ಭದಲ್ಲಿ ಮುಖರ್ಜಿ ಯವರ ಬದುಕು, ಹೋರಾಟ ಮತ್ತು ತ್ಯಾಗಗಳು ರಾಷ್ಟ್ರ ರಕ್ಷಣೆಯ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ಪ್ರೇರಣೆ ಒದಗಿಸಲಿ ಎನ್ನುವ ಆಕಾಂಕ್ಷೆಯೊಂದಿಗೆ ಸಮಸ್ತ ರಾಷ್ಟ್ರಭಕ್ತರಿಗೂ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನದ ಶುಭಾಶಯಗಳನ್ನು ಕೋರುತ್ತಿದ್ದೇವೆ.
– ಗಣೇಶ್ ಕಾರ್ಣಿಕ್ , ಬಿಜೆಪಿ ಮುಖ್ಯ ವಕ್ತಾರರು, ಮಾಜಿ ವಿಧಾನ ಪರಿಷತ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.