ಸಚಿವರಾಗಿದ್ದಾಗ ನೇಕಾರರಿಗೆ ನೀವೇನು ಮಾಡಿದ್ದೀರಿ ? ಉಮಾಶ್ರೀ ವಿರುದ್ಧ ಹರಿಹಾಯ್ದ ಶಾಸಕ ಸವದಿ
Team Udayavani, Jun 4, 2021, 6:34 PM IST
ಬನಹಟ್ಟಿ : ಕೊರೊನಾಗೆ ಹೆದರಿ ಬೆಂಗಳೂರಿನ ಮನೆಯಲ್ಲಿ ಕುಳಿತು ಅದ್ಹೇಗೆ ನೇಕಾರರ ಪರ ಕಾಳಜಿ ವಹಿಸಿದ್ದೀರಿ? ನೇಕಾರರ ಕಾರ್ಯ ಮಾಡಿದ್ದೀರಿ? ಸಚಿವರಿದ್ದಾಗಲೇ ಏನು ಮಾಡದ ನೀವು, ಈಗ ಹೇಗೆ ಮಾಡುತ್ತೀರಿ, ಇಂತಹ ತೀವ್ರ ಸಂಕಷ್ಟದ ಸಮಯದಲ್ಲಿ ಮಾಡಿದ್ದಾದರೂ ಏನು? ನಿಮ್ಮ ಹಣೆಬರಹ ಜನತೆಗೆ ಗೊತ್ತಿದೆ ಎಂದು ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಹರಿಹಾಯ್ದಿದ್ದಾರೆ.
ಶುಕ್ರವಾರ ಬನಹಟ್ಟಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು. ಅಧಿವೇಶನದಲ್ಲಿಯೂ ಆಡಳಿತ ಸರ್ಕಾರವಿದ್ದರೂ ನೇಕಾರರಿಗೆ ಅನ್ಯಾಯವಾದ ಸಂದರ್ಭದಲ್ಲಿ ನಮ್ಮದೇ ಸರಕಾರವಿದ್ದರೂ ಸರಕಾರದ ನಿರ್ಲಕ್ಷತನವನ್ನು ಖಂಡಿಸಿ ಸಭೆಯ ಗಮನ ಸೆಳೆದಿದ್ದೇನೆ. ಸಮುದಾಯಕ್ಕೆ ಅನ್ಯಾಯವಾದರೆ ಸಹಿಸೋಲ್ಲ. ಇದೀಗ ಮುಖ್ಯಮಂತ್ರಿಯವರೊಂದಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡು ಡಿಸಿಎಂ ಗೋವಿಂದ ಕಾರಜೋಳರೊಂದಿಗೆ ಮಾತುಕತೆ ಮೂಲಕ ಪ್ರತಿ ನೇಕಾರನಿಗೆ 3 ಸಾವಿರ ರೂ. ಸಹಾಯ ಧನ ಒದಗಿಸಿದ್ದೇನೆ. ಅದರೆ ಅದನ್ನು ನಾವೇ ಮಾಡಿಸಿದ್ದು ಎಂದು ಪೊಳ್ಳು ಹೇಳಿಕೆ ನೀಡುತ್ತಿರುವ ಉಮಾಶ್ರೀಯವರ ಕ್ರಮ ಖಂಡನೆ ಎಂದರು.
ಕ್ಷೇತ್ರದಲ್ಲಿ ನೇಕಾರರ ಸೇವಾ ಕಾರ್ಯ ಮಾಡುತ್ತೇವೆ. ಮಾನವೀಯತೆ ದೃಷ್ಠಿಯಿಂದ ದೇವರು ಮೆಚ್ಚುವಂತಹ ಕೆಲಸ ಮಾಡುತ್ತೇವೆ. ಕೈಮಗ್ಗ ನೇಕಾರ ಪರಸ್ಥಿತಿ ಗಂಭಿರವಾಗಿದೆ ಅವರಿಗೆ 2 ಸಾವಿರ ಕೊಟ್ಟಿದ್ದು ನಮಗೆ ಸಮಾಧಾನವಿಲ್ಲ. ಆದರೆ ಕೋವಿಡ್ ಸಂಕಷ್ಟದಲ್ಲಿ ಸರಕಾರದ ಸ್ಥಿತಿ ಗಂಭಿರವಾಗಿದೆ. ಆ ನಿಟ್ಟಿನಲ್ಲಿ ಸುಮ್ಮನಿದ್ದೇವೆ. ಎಲ್ಲ ನೇಕಾರರಿಗೆ ಕನಿಷ್ಠ 5 ಸಾವಿರ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಬಹುದಿನಗಳಿಂದ ಇದೆ ಎಂದರು.
ಇದನ್ನೂ ಓದಿ :ಗೋವಾ : ಜುಲೈ 31ರೊಳಗೆ ರಾಜ್ಯದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆ : ಸಾವಂತ್
ಸಾಲಮನ್ನಾಕ್ಕೆ ನೇಕಾರರ ಮುಂಗಡ ಸಾಲ(ಕ್ಯಾಶ್ ಕ್ರೆಡಿಟ್)ದವರಿಗೂ ಶೀಘ್ರವೇ 1 ಲಕ್ಷ ರೂ.ದಷ್ಟು ಸಾಲ ಮನ್ನಾ ಕಾರ್ಯ ನಡೆಯುತ್ತಿದೆ. ನೇಕಾರರಲ್ಲಿ ಯಾವದೇ ಅನುಮಾನಬೇಡ ಈ ಕುರಿತು ಶೀಘ್ರವಾಗಿ ಬೆಂಗಳೂರಿಗೆ ತೆರಳಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಹಾಗೂ ಇಲಾಖೆಯ ಕಾರ್ಯದರ್ಶಿಯವರ ಜೊತೆ ಮಾತನಾಡಿ ಆದಷ್ಟು ಬೇಗನೆ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು.
ಶಾಸಕರ ನಿಧಿ ಆರೋಗ್ಯ ಕ್ಷೇತ್ರಕ್ಕೆ ಮೀಸಲು : ನಮಗೆ ಬಂದಿರುವ 50 ಲಕ್ಷ ಶಾಸಕರ ನಿಧಿ ಕ್ಷೇತ್ರದ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿದ್ದು, ಕ್ಷೇತ್ರದಲ್ಲಿನ ರಬಕವಿ-ಬನಹಟ್ಟಿ, ಮಹಾಳಿಂಗಪೂರ, ತೇರದಾಳದಲ್ಲಿನ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಲಭ್ಯ ಅಭಿವೃದ್ಧಿ ಪಡಿಸಲು ಹಣ ಬಳಸುವುದಾಗಿ ಶಾಸಕ ಸವದಿ ತಿಳಿಸಿದರು.
ರಬಕವಿ-ಬನಹಟ್ಟಿ ನಗರಾಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿ, ನೀಚ ಹಾಗೂ ನಾಲಾಯಕ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಾದರೂ ಪ್ರಾಮಾಣಿಕವಾಗಿ ಸಾರ್ವಜನಿಕರ ಸಹಾಯಕ್ಕೆ ಬರಲಿ ಬದಲಾಗಿ ಅಪಪ್ರಚಾರ ನಡೆಸುತ್ತಿರುವದು ನಿಜಕ್ಕೂ ಬೇಸರ ತರುವಂಥದ್ದು ಎಂದರು.
ಈ ಸಂದರ್ಭ ಶ್ರೀಶೈಲ ದಭಾಡಿ, ಸಿದ್ಧನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ, ಗೋವಿಂದ ಡಾಗಾ, ಸೋಮನಾಥ ಗೊಂಬಿ, ರಮೇಶ ಕೊಣ್ಣೂರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಹೊಸೂರ, ಸುವರ್ಣಾ ಕೊಪ್ಪದ, ಪ್ರವೀಣ ಕೋಲಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.