Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಪ್ರಿಯಾಂಕಾ ಸೇರಿ ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆ
Team Udayavani, Dec 17, 2024, 6:04 PM IST
ಹೊಸದಿಲ್ಲಿ: ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರವಷ್ಟೇ “ಪ್ಯಾಲೆಸ್ತೀನ್” ಎಂದು ಬರೆದಿರುವ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ್ದು ವಿವಾದ ಸೃಷ್ಟಿಯಾಗುವುದರ ಜೊತೆಗೆ ಬಿಜೆಪಿಯೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಮಂಗಳವಾರ (ಡಿ.17 ) ಮತ್ತೊಂದು ವಿಶೇಷ ಬರಹವಿರುವ ಬ್ಯಾಗ್ ಹಿಡಿದು ಪ್ರಿಯಾಂಕಾ ಸಂಸತ್ ಪ್ರವೇಶಿಸಿದರು.
ಮಂಗಳವಾರ ‘ಸ್ಟ್ಯಾಂಡ್ ವಿತ್ ಮೈನಾರಿಟೀಸ್ ಬಾಂಗ್ಲಾದೇಶ’ ಎಂದು ಬರೆದಿರುವ ಕೈ ಚೀಲಗಳೊಂದಿಗೆ ಸಂಸತ್ತಿಗೆ ಬಂದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬಾಂಗ್ಲಾದೇಶದಲ್ಲಿ ದೌರ್ಜನ್ಯ ಎದುರಿಸುತ್ತಿರುವ ಹಿಂದೂಗಳು ಮತ್ತು ಕ್ರಿಶ್ಚಿಯನ್ನರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಪ್ರಿಯಾಂಕಾರೊಂದಿಗೆ ಹಲವು ಕಾಂಗ್ರೆಸ್ ಸಂಸದರು ಕೂಡ ಸಂಸತ್ ಆವರಣದಲ್ಲಿ ಕೈ ಚೀಲಗಳ ಹಿಡಿದು ಪ್ರತಿಭಟನೆ ನಡೆಸಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಘೋಷಣೆಗಳ ಕೂಗಿದರು.
ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಶೂನ್ಯವೇಳೆಯಲ್ಲೂ ಪ್ರಸ್ತಾಪ:
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಸಂಸತ್ತಿಗೆ ಹಿಡಿದುಕೊಂಡು ಆಗಮಿಸಿದ್ದ ಕೈ ಚೀಲದಲ್ಲಿ “ಬಾಂಗ್ಲಾದೇಶ ಕೆ ಹಿಂದೂ ಔರ್ ಇಸೈಯೋಂ ಕೆ ಸಾಥ್ ಖಡೇ ಹೋ” (ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರಿಶ್ಚಿಯನ್ನರೊಂದಿಗೆ ನಿಂತುಕೊಳ್ಳಿ) ಎಂದು ಬರೆಯಲಾಗಿದೆ. ಬಾಂಗ್ಲಾದೇಶದಲ್ಲಿ ದೌರ್ಜನ್ಯ ಎದುರಿಸುತ್ತಿರುವ ಹಿಂದೂಗಳು ಮತ್ತು ಕ್ರೈಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಪ್ರಿಯಾಂಕಾ ಗಾಂಧಿ ಸೋಮವಾರ ಶೂನ್ಯವೇಳೆಯಲ್ಲಿ ಲೋಕಸಭೆಯಲ್ಲಿ ಮಾತನಾಡಿ ಸರ್ಕಾರವು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯದ ವಿಷಯವನ್ನು ಎತ್ತಬೇಕು. ಅದು ಬಾಂಗ್ಲಾದೇಶ ಸರ್ಕಾರದೊಂದಿಗೆ ಚರ್ಚಿಸಿ ನೋವಿನಲ್ಲಿರುವವರಿಗೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದರು.
ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಆಡಳಿತದ ಪತನದ ನಂತರ ಉಂಟಾದ ಗೊಂದಲದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರು ಉದ್ದೇಶಿತ ದಾಳಿಗಳು ಮತ್ತು ಅವರ ಪೂಜಾ ಸ್ಥಳಗಳ ಹಾನಿಗೊಳಿಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಘಟನೆಗಳು, ಹಾಗೆಯೇ ಬಾಂಗ್ಲಾದೇಶದ ದೇವಾಲಯಗಳ ಮೇಲಿನ ದಾಳಿಗಳು ಕಳವಳವನ್ನು ಉಂಟುಮಾಡಿವೆ. ಬಾಂಗ್ಲಾದೇಶದಲ್ಲಿ ಮಂಗಳವಾರದವರೆಗೆ 88 ಧರ್ಮಾಧರಿತ ಹಿಂಸೆಗಳು ನಡೆದಿವೆ. ಅದರಲ್ಲಿ ಹೆಚ್ಚಾಗಿ ಹಿಂದೂಗಳ ಮೇಲೆ ನಡೆದಿದೆ ಎಂದು ಅಲ್ಲಿನ ಸರಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಂಚನೆಗೀಡಾಗಿ ಪಾಕ್ ಸೇರಿದ್ದ ಭಾರತದ ಮಹಿಳೆ 22 ವರ್ಷ ಬಳಿಕ ಸ್ವದೇಶಕ್ಕೆ
PM Modi: ಕಾಂಗ್ರೆಸ್ ರೈತರಿಗೆ ತಾನೂ ಒಳಿತು ಮಾಡದು ಬೇರೆ ಅವರಿಗೂ ಬಿಡದು
Coimbatore ಸರಣಿ ಸ್ಫೋಟದ ರೂವಾರಿ ಎಸ್.ಎ.ಬಾಷಾ ಸಾವು
Supreme Court: ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.