ಎ.1ರಿಂದ ಸರಳೀಕೃತ ರಿಟರ್ನ್ಸ್ ನಮೂನೆ ಬಳಕೆ ಜಾರಿ
Team Udayavani, Dec 24, 2019, 7:20 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಸರಳೀಕೃತ ರಿಟರ್ನ್ಸ್ ನಮೂನೆಗಳು (ಸಹಜ್, ಸುಗಮ್, ನಾರ್ಮಲ್) ಬಳಕೆ ವ್ಯವಸ್ಥೆ ಮುಂದಿನ ಎ.1ರಿಂದ ಜಾರಿಯಾಗಲಿದೆ. ಎ.1ರಿಂದ 100 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ವ್ಯಾಪಾರಿಗಳು, ಉದ್ಯಮಿಗಳಿಗೆ “ಎಲೆಕ್ಟ್ರಾನಿಕ್- ಇನ್‌ವಾಯ್ಸ’ ವ್ಯವಸ್ಥೆ ಐಚ್ಛಿಕ ಮತ್ತು ಪ್ರಯೋಗಾರ್ಥ ಅಳವಡಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಜಿಎಸ್‌ಟಿ ನೆಟ್‌ವರ್ಕ್ ಸಚಿವರ ತಂಡದ ಮುಖ್ಯಸ್ಥ, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದರು.
ಸೋಮವಾರ ಇಲ್ಲಿ ನಡೆದ ಜಿಎಸ್‌ಟಿ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರಿಗಳ ಅನುಕೂಲಕ್ಕಾಗಿ ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸುವ ಪ್ರಯತ್ನ ನಡೆದಿದೆ. ಅದಕ್ಕೆ ಪೂರಕವಾಗಿ ಸಹಜ್, ಸುಗಮ್, ನಾರ್ಮಲ್ ರಿಟರ್ನ್ಸ್ ನಮೂನೆ ಬಳಕೆ ಎ.1ರಿಂದ ಜಾರಿಯಾಗಲಿದೆ.
ಹೊಸ ವ್ಯವಸ್ಥೆ ಅಳವಡಿಕೆ ಬಗ್ಗೆ ಈಗಾಗಲೇ ಒಂದು ಲಕ್ಷ ಮಂದಿ ವ್ಯಾಪಾರ- ವ್ಯವಹಾರಸ್ಥರಿಗೆ ಜಾಗೃತಿ ಮೂಡಿಸಲಾಗಿದ್ದು, ಮಾರ್ಚ್ ವೇಳೆಗೆ 10 ಲಕ್ಷ ಮಂದಿಗೆ ಅರಿವು ಮೂಡಿಸುವ ಉದ್ದೇಶವಿದೆ. ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಸುಗಮಗೊಳಿಸಲು ಪೂರಕವಾಗಿ 600 ಸಲಹೆಗಳನ್ನು ಸ್ವೀಕರಿಸಲಾಗಿದೆ.
ಇ- ಇನ್‌ವಾಯ್ಸ
ನೂತನ ಇ- ಇನ್‌ವಾಯ್ಸ ವ್ಯವಸ್ಥೆಯನ್ನು ಜನವರಿಯಿಂದ ಜಾರಿಗೊಳಿಸಲಾಗುತ್ತಿದೆ. ವಾರ್ಷಿಕ 500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವವರು ಜ.1ರಿಂದ ಇ-ಇನ್‌ವಾಯ್ಸ ವ್ಯವಸ್ಥೆಯನ್ನು ಐಚ್ಛಿಕ ಮತ್ತು ಪ್ರಯೋಗಾರ್ಥ ಜಾರಿ ಮಾಡಬಹುದು. ಈ ವ್ಯವಸ್ಥೆಯಿಂದ ಮಾಸಿಕ 3ಬಿ ರಿಟರ್ನ್ಸ್ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.
ಆಧಾರ್ ಕಡ್ಡಾಯ
ನಕಲಿ ಇನ್‌ವಾಯ್ಸ ಸೃಷ್ಟಿಸಿ ವಂಚಿಸುವುದನ್ನು ತಪ್ಪಿಸಲು ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗುತ್ತಿದೆ. ಜ. 1ರಿಂದ ಆಧಾರ್ ಜೋಡಣೆ ವ್ಯವಸ್ಥೆ ಜಾರಿಯಾಗಲಿದೆ. ಹೊಸದಾಗಿ ಜಿಎಸ್‌ಟಿ ನೋಂದಣಿ ಪಡೆಯುವವರು ಆಧಾರ್ ವಿವರ ಸಲ್ಲಿಸುವುದು ಕಡ್ಡಾಯ ಎಂದರು.
ಕೇಂದ್ರ ಸರಕಾರವು ರಾಜ್ಯಕ್ಕೆ ಅಕ್ಟೋಬರ್, ನವೆಂಬರ್ ತಿಂಗಳ ಜಿಎಸ್‌ಟಿ ಪರಿಹಾರ ಮೊತ್ತವನ್ನಷ್ಟೇ ಪಾವತಿಸಬೇಕಿದ್ದು, ಮಾಸಾಂತ್ಯದೊಳಗೆ ಬಾಕಿ ಪರಿಹಾರವು ಬಿಡುಗಡೆಯಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.