Singapore: ವಿಶ್ವ ಚೆಸ್ ಚಾಂಪಿಯನ್‌ಶಿಪ್: ಮೂರನೇ ಪಂದ್ಯದಲ್ಲಿ ಗುಕೇಶ್ ಗೆಲುವು
Team Udayavani, Nov 28, 2024, 3:02 AM IST
ಸಿಂಗಾಪುರ: ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 3ನೇ ಸುತ್ತಿನ ಸ್ಪರ್ಧೆಯಲ್ಲಿ ಚೀನದ ಜಿಎಂ ಡಿಂಗ್ ಲಿರೆನ್ ವಿರುದ್ಧ ಡಿ. ಗುಕೇಶ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ 14 ಪಂದ್ಯಗಳ ಸರಣಿಯಲ್ಲಿ ಇಬ್ಬರೂ 1.5-1.5 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದು, ಪಂದ್ಯಾವಳಿ ಕುತೂಹಲ ಕೆರಳಿಸಿದೆ.
ಬುಧವಾರದ 3ನೇ ಸುತ್ತಿನ ಸ್ಪರ್ಧೆಯಲ್ಲಿ ಬಿಳಿ ಕಾಯಿಯೊಂದಿಗೆ ಆಡಿದ ಡಿ. ಗುಕೇಶ್, ಕೇವಲ 37 ನಡೆಗಳಲ್ಲೇ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿದರು. ಆರಂಭಿಕ ಪಂದ್ಯದಲ್ಲಿ ಲಿರೆನ್ ಗೆದ್ದರೆ, 2ನೇ ಪಂದ್ಯ ಡ್ರಾಗೊಂಡಿತ್ತು. ಇನ್ನೂ 11 ಪಂದ್ಯಗಳು ನಡೆಯಲಿವೆ.
31ನೇ ನಡೆಯ ವೇಳೆ ಲಿರೆನ್‌ಗೆ ಸಂಕಷ್ಟ!
ಟೈಮ್ ಕಂಟ್ರೋಲ್ ವಿಭಾಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಲಿರೆನ್ ತನ್ನ 31ನೇ ನಡೆಯ ವೇಳೆ ಇಕ್ಕಟ್ಟಿಗೆ ಸಿಲುಕಿದ್ದರು. ಇದೊಂದೇ ನಡೆಗಾಗಿ ಅವರು 4 ನಿಮಿಷ ತೆಗೆದುಕೊಂಡರು. ಉಳಿದ ಕೇವಲ 2 ನಿಮಿಷಗಳಲ್ಲಿ ಅವರು 9 ನಡೆಗಳ ಮೂಲಕ, 40 ನಡೆಗಳ ಗಡಿಯನ್ನು ದಾಟಬೇಕಾದ್ದರಿಂದ ಒತ್ತಡ ಹೆಚ್ಚಾಯಿತು. 37ನೇ ನಡೆಯ ವೇಳೆ ಡಿಂಗ್‌ಗೆ ನೀಡಿದ್ದ 120 ನಿಮಿಷಗಳ ಕಾಲಾವಧಿ ಮುಗಿದೇ ಹೋಯಿತು. ಹೀಗಾಗಿ ಅವರು ಸೋಲಬೇಕಾಯಿತು.
ಏನಿದು ಟೈಮ್ ಕಂಟ್ರೋಲ್?
ಈ ವಿಭಾಗದಲ್ಲಿ ಮೊದಲ 40 ನಡೆಗಳಿಗೆ 120 ನಿಮಿಷಗಳ ಕಾಲಾವಕಾಶವಿರುತ್ತದೆ. ಈ ಅವಧಿ ಯೊಳಗೆ 40 ನಡೆಗಳನ್ನು ಪೂರ್ಣ ಗೊಳಿಸಿದರೆ ಮಾತ್ರ ಆಟ ಮುಂದು ವರಿಸಲು ಹೆಚ್ಚುವರಿ 60 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಇಲ್ಲಿ ಲಿರೆನ್ ವಿಫಲವಾಗಿದ್ದಾರೆ. 14 ಸುತ್ತಿನ ಈ ಸ್ಪರ್ಧೆ ಮುಕ್ತಾಯ ಗೊಳ್ಳುವುದರೊಳಗೆ ಮೊದಲು 7.5 ಅಂಕ ಗಳಿಸುವ ಸ್ಪರ್ಧಿ ವಿಜೇತರಾಗುತ್ತಾರೆ. ಒಂದು ವೇಳೆ 14 ಸುತ್ತಿನ ಬಳಿಕವೂ ಇಬ್ಬರ ಅಂಕ ಟೈ ಆದರೆ, ಆಗ ಟೈಬ್ರೇಕರ್ ನಡೆಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಡ್ರೆಸ್ಸಿಂಗ್ ರೂಂ ರಹಸ್ಯ: ಕೋಚ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗರ ಅಸಮಾಧಾನ
Rohit Sharma; ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ವಿದಾಯ?
Team India; 2025 ಭಾರತ ಆಡುವುದು ಹತ್ತೇ ಟೆಸ್ಟ್
Women’s ODI rankings; 5ನೇ ಸ್ಥಾನಕ್ಕೆ ಏರಿದ ದೀಪ್ತಿ ಶರ್ಮ
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.