ತಾಯಿಯಾಗುವ ಖುಷಿಯಲ್ಲಿ ಗಾಯಕಿ ಶ್ರೇಯಾ ಘೋಷಾಲ್
ಘೋಷಾಲ್ ತಾವು ತಾಯಿಯಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.
Team Udayavani, Mar 4, 2021, 1:31 PM IST
ನವದೆಹಲಿ : ಭಾರತದ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಶ್ರೇಯಾ ಘೋಷಾಲ್ ತಾವು ತಾಯಿಯಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಾಕಿರುವ ಗಾಯಕಿ, ಬೇಬಿ ಶ್ರೇಯಾದಿತ್ಯ ಆಗಮನವಾಗುತ್ತಿದೆ. ನಿಮ್ಮ ಪ್ರೀತಿ, ಆಶೀರ್ವಾದ ಮಗುವಿನ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ.
Baby #Shreyaditya is on its way!@shiladitya and me are thrilled to share this news with you all. Need all your love and blessings as we prepare ourselves for this new chapter in our lives. pic.twitter.com/oZ6c6fnR6Z
— Shreya Ghoshal (@shreyaghoshal) March 4, 2021
ಶ್ರೇಯಾ ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡಿದ್ದು, ನೀಲಿ ಬಣ್ಣದ ಉಡುಪು ತೊಟ್ಟು ಮುಗುಳುನಗೆ ಬೀರಿದ್ದಾರೆ. 2015ರಲ್ಲಿ ಶ್ರೇಯಾ ಘೋಷಾಲ್ ಉದ್ಯಮಿ ಶಿಲಾದಿತ್ಯ ಮುಖೋಪಾಧ್ಯಾಯ ಜೊತೆ ವಿವಾಹವಾಗಿದ್ದರು.
ಶ್ರೇಯಾ 2002ರಲ್ಲಿ ತೆರೆ ಕಂಡ ದೇವದಾಸ್ ಸಿನಿಮಾದಿಂದ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡರು. ಈ ಚಿತ್ರದಲ್ಲಿ ಹಾಡಿದ್ದಕ್ಕೆ ಇವರಿಗೆ ಉತ್ತಮ ಹಿನ್ನೆಲೆ ಗಾಯಕಿ ಎಂಬ ಪ್ರಶಸ್ತಿ ಕೂಡ ಸಿಕ್ಕಿದೆ. ಇಷ್ಟೇ ಅಲ್ಲದೆ ಶ್ರೇಯಾ ಹಿನ್ನೆಲೆ ಗಾಯನದಿಂದ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇನ್ನು ಕನ್ನಡದ ನೂರಾರು ಹಾಡುಗಳಿಗೆ ಶ್ರೇಯಾ ದನಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBT8: ಬಿಗ್ ಬಾಸ್ ತಮಿಳು ಟ್ರೋಫಿ ಗೆದ್ದ ಮುತ್ತುಕುಮಾರನ್; ವೀಕ್ಷಕರು ಫುಲ್ ಖುಷ್
Saif Ali Khan Case: ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಆರೋಪಿ; ಮುಂಬೈ ಡಿಸಿಪಿ ಹೇಳಿದ್ದೇನು?
Saif Ali Khan: ಸೈಫ್ ಅಲಿಖಾನ್‌ಗೆ ಚಾಕು ಇರಿತ; ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು
Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…
Saif Ali Khan ಇರಿತ: 2 ದಿನ ಕಳೆದರೂ ಸಿಗದ ಆರೋಪಿ!
MUST WATCH
ಹೊಸ ಸೇರ್ಪಡೆ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.