ಅದೊಂದು ಬಣ್ಣಿಸಲಾಗದ ಅನುಭೂತಿ : ಬಾಹ್ಯಾಕಾಶ ಪಯಣದ ಬಗ್ಗೆ ಶಿರಿಷಾ ಮಾತು
Team Udayavani, Jul 12, 2021, 8:31 PM IST
ಹೂಸ್ಟನ್: “ಅದೊಂದು ಬಣ್ಣಿಸಲು ಅಸಾಧ್ಯವಾದ ಅನುಭೂತಿ… ಜೀವನದ ಚಿಂತನೆಯನ್ನೇ ಬದಲಿಸುವಂಥ ಅನುಭವ…”
ವರ್ಜಿನ್ ಗ್ಯಾಲಾಕ್ಟಿಕ್‌ನ ಟು ಯೂನಿಟಿಯಲ್ಲಿ ಭಾನುವಾರ, ಬಾಹ್ಯಾಕಾಶದಲ್ಲಿ ತಿರುಗಾಡಿ ಹಿಂದಿರುಗಿದ ಭಾರತ ಮೂಲದ ಶಿರಿಷಾ ಬಾಂದ್ಲಾ ತಮ್ಮ ಪಯಣವನ್ನು ಬಣ್ಣಿಸಿದ ರೀತಿಯಿದು.
34 ವರ್ಷದ ಶಿರಿಷಾ, ವರ್ಜಿನ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಹಾಗೂ ಇತರ ನಾಲ್ವರೊಂದಿಗೆ ಯೂನಿಟಿ ರಾಕೆಟ್-ಏರೋಪ್ಲೇನ್‌ನಲ್ಲಿ ನ್ಯೂಮೆಕ್ಸಿಕೋದ ಸ್ಪೇಸ್ ಪೋರ್ಟ್ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು. ಅಲ್ಲಿ, 90 ನಿಮಿಷಗಳ ಕಾಲ ಗಗನಯಾತ್ರೆ ನಡೆಸಿ ವಾಪಸಾಗಿದ್ದರು.
ಮರುಭೂಮಿಯ ಮೇಲೆ, ಭೂಮಿಯಿಂದ ಸುಮಾರು 88 ಕಿ.ಮೀ. ಎತ್ತರದಲ್ಲಿ ಬಾಹ್ಯಾಕಾಶಕ್ಕೆ ಕಾಲಿಟ್ಟ ಕೂಡಲೇ ಯೂನಿಟಿ ಕ್ಯಾಪ್ಸೂಲ್‌ನಲ್ಲಿದ್ದ ಶಿರಿಷಾ ಮತ್ತವರ ಸಂಗಡಿಗರಿಗೆ ತಮ್ಮ ದೇಹದ ತೂಕ ಏಕಾಏಕಿ ಕಡಿಮೆಯಾದಂತೆ ಭಾಸವಾಯಿತಂತೆ.
ಗುರುತ್ವಾಕರ್ಷಕ ಪರಿಧಿ ದಾಟಿದ ಕಾರಣಕ್ಕಾಗಿ ಇಂಥ ಅನುಭವ ಉಂಟಾಗಿದ್ದು ಕೆಲವೇ ಸೆಕೆಂಡ್‌ಗಳಲ್ಲಿ ಆ ಸ್ಥಿತಿಗೆ ಮನಸ್ಸು ಹೊಂದಿಕೊಂಡಿತು ಎಂದು ಶಿರಿಷಾ ತಿಳಿಸಿದ್ದಾರೆ. ಅಲ್ಲದೆ, ತಾವು ಹಾರಾಡುವಾಗ, ಭೂಮಧ್ಯ ರೇಖೆಯನ್ನು ನಿಚ್ಚಳವಾಗಿ ಗಮನಿಸಿದ್ದಾಗಿಯೂ ಅವರು ತಿಳಿಸಿದ್ದಾರೆ. ಆ ಗಗನ ಸೌಂದರ್ಯವನ್ನು ಬಣ್ಣಿಸಲು ಹೊಸ ಪದಗಳನ್ನು ಹುಡುಕಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಝೀಕಾ ವೈರಸ್ ಬಗ್ಗೆ ಎಚ್ಚರವಹಿಸಿ : ಸಾರ್ವಜನಿಕರಲ್ಲಿ ಉಡುಪಿ ಜಿಲ್ಲಾಧಿಕಾರಿ ಮನವಿ
ಟಿಕೆಟ್ ಬುಕ್ ಮಾಡಿದ ಮಸ್ಕ್!
ಜಗತ್ತಿನ ಅತಿ ಶ್ರೀಮಂತ ಉದ್ಯಮಿ, ಸ್ನೇಹಿತ ರಿಚರ್ಡ್ ಬ್ರಾನ್ಸನ್, ಭಾನುವಾರವಷ್ಟೇ ತಮ್ಮ ವರ್ಜಿನ್ ಗ್ಯಾಲಾಕ್ಟಿಕ್‌ನ ಯೂನಿಟಿ 22 ಕ್ಯಾಪ್ಸೂಲ್‌ನಲ್ಲಿ 90 ನಿಮಿಷಗಳವರೆಗೆ ಬಾಹ್ಯಾಕಾಶದಲ್ಲಿ ಸುತ್ತಾಡಿ ಬಂದಿದ್ದಾರೆ. ಇದೇ ಸೆಪ್ಟೆಂಬರ್‌ನಲ್ಲಿ ರಿಚರ್ಡ್‌ರವರ ಆಪ್ತಮಿತ್ರ ಹಾಗೂ ಜಗತ್ತಿನ ಮತ್ತೂಬ್ಬ ದೈತ್ಯ ಉದ್ಯಮಿ ಎಲಾನ್ ಮಸ್ಕ್ ಕೂಡ ತಮ್ಮ “ಸ್ಪೇಸ್ ಎಕ್ಸ್’ ರಾಕೆಟ್ ಮೂಲಕ ಬಾಹ್ಯಾಕಾಶ ಪರ್ಯಟನೆ ಮಾಡಲಿದ್ದಾರೆ.
ಒಬ್ಬರ ಸಾಧನೆ ಮೇಲೆ ಮತ್ತೂಬ್ಬರಿಗೆ ಹೊಟ್ಟೆಕಿಚ್ಚಿಲ್ಲ, ಇಬ್ಬರ ನಡುವೆ ಸ್ಪರ್ಧೆಯಿಲ್ಲ. ಬದಲಿಗೆ, ಪರಸ್ಪರ ಗೌರವವಿದೆ. ಹಾಗಾಗಿಯೇ, ಮಸ್ಕ್ ಅವರು ಗ್ಯಾಲಾಕ್ಟಿಕ್‌ನ ಮುಂದಿನ ಬಾಹ್ಯಾಕಾಶ ಪಯಣಕ್ಕೆ 7.4 ಲಕ್ಷ ರೂ. ನೀಡಿ ಮುಂಗಡ ಟಿಕೆಟ್ ಬುಕ್ ಮಾಡಿದ್ದಾರೆ. ಇದನ್ನು ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ರಿಚರ್ಡ್, “”ನನ್ನ ಸ್ನೇಹಿತ ನನ್ನ ಕಂಪನಿಯ ಬಾಹ್ಯಾಕಾಶ ನೌಕೆಯಲ್ಲಿ ಪಯಣಿಸಲು ಸಿದ್ಧರಾಗಿದ್ದಾರೆ. ಮುಂದೊಂದು ದಿನ, ನಾನು ಮಸ್ಕ್ ಅವರ ನೌಕೆಯಲ್ಲಿ ಪಯಣಿಸುವ ಸಂದರ್ಭ ಬರಬಹುದು” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.