Sirsi: ಪಾಶ್ಚಾತ್ಯ ಅಡಿಕೆ ಆಮದು ನಿರ್ಬಂಧಕ್ಕೆ ಸಂಸದರು ಧ್ವನಿ ಎತ್ತಲಿ: ಶಾಸಕ ಭೀಮಣ್ಣ‌

ಸಂಸದರು ಪ್ರಧಾನಿ, ವಾಣಿಜ್ಯ, ವಿದೇಶಾಂಗ, ಕೃಷಿ ಸಚಿವರ ಗಮನಕ್ಕೆ ತರಲಿ, ಅಡಿಕೆ ಬೆಳೆಗಾರರ ಸಂಕಷ್ಟ ದೂರ ಮಾಡುವ ಅಗತ್ಯವಿದೆ

Team Udayavani, Sep 27, 2024, 7:49 PM IST

Bheemanna-Naik

ಶಿರಸಿ: ಪಾಶ್ಚಾತ್ಯ ರಾಷ್ಟ್ರದಿಂದ ಆಮದಾಗುವ ಅಡಿಕೆ ನಿರ್ಬಂಧಿಸಲು ಸಂಸದರು ವಿಫಲರಾಗಿದ್ದಾರೆ. ಭಾರತದ ಅಡಿಕೆಗಳು ಇದ್ದಾಗ ಅದರ ಪರವಾಗಿ ಧ್ವನಿ ಎತ್ತದೇ ಇರುವುದು ಬೆಳೆಗಾರರಿಗೆ ಮಾಡುವ ಮೋಸ ಎಂದು ಶಾಸಕ ಭೀಮಣ್ಣ‌ ನಾಯ್ಕ ದೂರಿದರು.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಅಡಿಕೆ ಬೆಳೆಗಾರ ಪ್ರದೇಶದ‌ ಸಂಸದರು ಈ ಬಗ್ಗೆ ಪ್ರಧಾನಿ, ವಾಣಿಜ್ಯ, ವಿದೇಶಾಂಗ, ಕೃಷಿ ಸಚಿವರ ಗಮನಕ್ಕೆ ತರಬೇಕು. ಸ್ವಾರ್ಥ ರಾಜಕಾರಣ ಕೈ ಬಿಡಬೇಕು. ಕಾಂಗ್ರೆಸ್ ಸಂಸದರ ಬಳಿಯೂ ಈ ಬಗ್ಗೆ ಮಾತನಾಡಲು ಹೇಳಿದ್ದೇವೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿಯೂ ಹೋರಾಟ‌ ಮಾಡಲು ಭೇಟಿ‌ಯಾಗಿ ಚರ್ಚಿಸುತ್ತೇವೆ ಎಂದರು.

ಮಲೆನಾಡಿನ ಅಡಿಕೆ ಬೆಳೆಯೂ ಗುಣಮಟ್ಟದಿಂದ ಕೂಡಿದ್ದು, ಇಲ್ಲಿಯ ಅಡಿಕೆ ಜೊತೆ ಕಳಪೆ ಅಡಿಕೆಯ ಯಾರೂ‌ ಮಿಶ್ರಣ ಮಾಡಬಾರದು. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಅಡಿಕೆ ಬೆಳೆಗಾರರಿಗೆ ಎದುರಾದ ಸಂಕಷ್ಟ ದೂರ ಮಾಡಬೇಕು. ವಾಡಿಕೆಗಿಂತ ಅಧಿಕ‌ ಮಳೆ ಬಿದ್ದಿರುವುದರಿಂದ ಕೊಳೆ ರೋಗ ಹೆಚ್ಚಾಗಿರುವ ಜೊತೆಗೆ  ಎಲೆ ಚುಕ್ಕೆ ರೋಗವು ವ್ಯಾಪಕವಾಗುತ್ತಿದೆ. ಈಗ ಕೊಳೆ ರೋಗದಿಂದ ಮರ ಕೂಡ ಸಾಯುತ್ತಿದೆ. ಉತ್ತರ ಕನ್ನಡದಲ್ಲಿ ಈಗಾಗಲೇ ಶೇ.60ಕ್ಕೂ ಅಧಿಕ ಬೆಳೆ ಹಾನಿಯಾಗಿದೆ ಎಂದರು.

ಬೆಳೆಗಾರರಿಗೆ ಪರಿಹಾರ ಕೊಡಲು ಸಿಎಂ ಜೊತೆ ಚರ್ಚಿಸಿದ್ದೇನೆ: 
ಮಲೆನಾಡಿನಲ್ಲಿ ಅಡಿಕೆ ನಂಬಿದ ಕುಟುಂಬಗಳೇ ಹೆಚ್ಚು. ಅಡಿಕೆ ಬೆಳೆಗಾರರ ಜೊತೆ ಅದನ್ನು‌ ನಂಬಿದ ಕಾರ್ಮಿಕ ಕುಟುಂಬದವರೂ ಇದ್ದಾರೆ. ಇದರಿಂದ ಎಲ್ಲರಿಗೂ ನಷ್ಟ. ಸಾಲ, ಬದುಕು, ಶಿಕ್ಷಣ, ಆರೋಗ್ಯದ ಸಮಸ್ಯೆಯಾಗುತ್ತಿದೆ. ಕೊಳೆ ರೋಗಕ್ಕೆ ಸಂಬಂಧಿಸಿ ಅಡಿಕೆ ಬೆಳೆಗಾರರಿಗೆ ಪರಿಹಾರ ಕೊಡಲು ಈಗಾಗಲೇ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿದ್ದೇನೆ. ಸಿದ್ದರಾಮಯ್ಯ ಈ ಮೊದಲು ಸಿಎಂ ಆಗಿದ್ದಾಗಲೂ ಕೊಳೆ ರೋಗ ಪರಿಹಾರ ಕೊಟ್ಟಿದ್ದರು. ಅದೇ ಮಾನದಂಡದಂತೆ ಈಗ ಕೊಡಬೇಕು ಎಂದರು.

ಕೇಂದ್ರದಲ್ಲಿ‌ ಕಾಂಗ್ರೆಸ್ ಸರಕಾರವಿದ್ದಾಗ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಹಿರಿಯ ನಾಯಕ, ಶಾಸಕ ಆರ್.ವಿ. ದೇಶಪಾಂಡೆ ಸಂಬಂಧಪಟ್ಟವರ ಸಂಪರ್ಕಿಸಿ  ಹೊರ ದೇಶದ ಅಡಿಕೆ ಆಮದು ನಿರ್ಬಂಧ ಹೇರಿದ್ದರಿಂದ ಅಡಿಕೆ ದರ ಏರಿ ಮಾರುಕಟ್ಟೆ ಸ್ಥಿರತೆಗೆ ಕಾರಣವಾಗಿತ್ತು ಎಂದು ನೆನಪಿಸಿದರು. ಪ್ರಮುಖರಾದ ಎಸ್.ಕೆ.ಭಾಗವತ್, ಜಗದೀಶ ಗೌಡ, ವೆಂಕಟೇಶ ಹೆಗಡೆ ಹೊಸಬಾಳೆ, ಪ್ರದೀಪ ಶೆಟ್ಟಿ, ಜ್ಯೋತಿ ಗೌಡ, ಪ್ರಸನ್ನ ಶೆಟ್ಟಿ ಇತರರಿದ್ದರು‌.

ಟಾಪ್ ನ್ಯೂಸ್

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

HDK (3)

Lokayukta ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಎಚ್ ಡಿಕೆ

1-cantar

Kunigal; ಬೈಕ್ ಗೆ ಕ್ಯಾಂಟರ್ ಡಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಮೃ*ತ್ಯು

1-male

India vs Bangladesh 2 ನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆ ಅಡ್ಡಿ

Gadinadu-Award

Award: 2023-24, 2024-25ನೇ ಸಾಲಿನ “ಗಡಿನಾಡ ಚೇತನ” ಪ್ರಶಸ್ತಿ ಪ್ರಕಟ

Bheemanna-Naik

Sirsi: ಪಾಶ್ಚಾತ್ಯ ಅಡಿಕೆ ಆಮದು ನಿರ್ಬಂಧಕ್ಕೆ ಸಂಸದರು ಧ್ವನಿ ಎತ್ತಲಿ: ಶಾಸಕ ಭೀಮಣ್ಣ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Joida: ಬಸ್ ನಿಲ್ದಾಣದಲ್ಲಿ ಚಾಲಕ, ನಿರ್ವಾಹಕನಿಂದ ಪ್ರಯಾಣಿಕನಿಗೆ ಹಲ್ಲೆ

6

Dandeli: ಗಣೇಶನಗರದಲ್ಲಿ ವಿವಾಹಿತ ಮಹಿಳೆ ನಾಪತ್ತೆ: ದೂರು ದಾಖಲು

Dandeli: ಬಸ್ ನಿಲ್ದಾಣದಲ್ಲಿ ತಂಗಿರುವ ಒಂಟಿ ಮಹಿಳೆ… ವಾರಿಸುದಾರರ ಪತ್ತೆಗೆ ಮನವಿ

Dandeli: ಬಸ್ ನಿಲ್ದಾಣದಲ್ಲಿ ತಂಗಿರುವ ಒಂಟಿ ಮಹಿಳೆ… ವಾರಿಸುದಾರರ ಪತ್ತೆಗೆ ಮನವಿ

ಶಿರೂರು ಗುಡ್ಡ ಕುಸಿತ:ಚಾಲಕ ಅರ್ಜುನನ ಮೊಬೈಲ್‌ ಹಾಗೂ ಮಗನಿಗಾಗಿ ಖರೀದಿಸಿದ ಆಟಿಕೆ ಲಾರಿ ಪತ್ತೆ

ಶಿರೂರು ಗುಡ್ಡ ಕುಸಿತ:ಚಾಲಕ ಅರ್ಜುನನ ಮೊಬೈಲ್‌ ಹಾಗೂ ಮಗನಿಗಾಗಿ ಖರೀದಿಸಿದ ಆಟಿಕೆ ಲಾರಿ ಪತ್ತೆ

Subhraya-Goa

Tragedy: ಗೋವಾದ ಹೊಟೇಲ್‌ನಲ್ಲಿ ತಂಗಿದ್ದ ಯಲ್ಲಾಪುರದ ವ್ಯಕ್ತಿ ಮೃತ್ಯು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

Aranthodu: ಕಾಡಾನೆ ಹಾವಳಿ; ಕೃಷಿಗೆ ಹಾನಿ

Aranthodu: ಕಾಡಾನೆ ಹಾವಳಿ; ಕೃಷಿಗೆ ಹಾನಿ

4

Malpe: ಬೋಟಿನಲ್ಲಿ ಅಡುಗೆ ಮಾಡುವ ವೇಳೆ ಬಾಣಲೆಗೆ ಬಿದ್ದು ಮೀನುಗಾರ ಸಾವು

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

1

Udupi: ಕಾರು ಮಾರಾಟದ ಹೆಸರಿನಲ್ಲಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.