Uttar Pradeshದಲ್ಲಿ 13,000 ಅಕ್ರಮ ಮದರಸಾಗಳು ಪತ್ತೆ; ಎಸ್ ಐಟಿ ವರದಿ ಬಹಿರಂಗ
ಶ್ರಾವಸ್ತಿ ಮತ್ತು ಬಹ್ರೈಚ್ ಸೇರಿದಂತೆ ಏಳು ಜಿಲ್ಲೆಗಳಲ್ಲಿವೆ..
Team Udayavani, Mar 7, 2024, 10:37 AM IST
ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್ ಐಟಿ) ರಾಜ್ಯದಲ್ಲಿ 13,000 ಕಾನೂನು ಬಾಹಿರ ಮದರಸಾಗಳು ಇದ್ದಿರುವುದನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:Bank Fraud Case… 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಮೆರಿಕದಲ್ಲಿ ಪತ್ತೆ
ಎಸ್ ಐಟಿ ಅಕ್ರಮ ಮದರಸಾಗಳನ್ನು ಪತ್ತೆ ಹಚ್ಚಿ ಕಲೆ ಹಾಕಿ ತಯಾರಿಸಿರುವ ವರದಿಯನ್ನು ಸರ್ಕಾರಕ್ಕೆ ನೀಡಲಿದ್ದು, ಈ ಕಾನೂನು ಬಾಹಿರ ಮದರಸಾವನ್ನು ಮುಚ್ಚುವಂತೆ ಶಿಫಾರಸು ಮಾಡಿರುವುದಾಗಿ ವರದಿ ವಿವರಿಸಿದೆ.
ಜೀ ನ್ಯೂಸ್ ಮೂಲಗಳ ಪ್ರಕಾರ, ಬಹುತೇಕ ಅಕ್ರಮ ಮದರಸಾಗಳು ನೇಪಾಳ ಗಡಿಭಾಗದಲ್ಲಿರುವುದಾಗಿ ತಿಳಿಸಿದೆ. ಈ ಮದರಸಾಗಳಿಗೆ ಕಳೆದ ಎರಡು ದಶಕಗಳಿಂದ ಗಲ್ಫ್ ದೇಶಗಳಿಂದ ಹಣಕಾಸು ನೆರವು ಒದಗಿಸುತ್ತಿರುವುದಾಗಿ ವರದಿ ಹೇಳಿದೆ.
ಎಸ್ ಐಟಿ ವರದಿಯು ಕೆಲವು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ. ಇದರಲ್ಲಿ ಹೆಚ್ಚಿನ ಮದರಸಾಗಳು ನೇಪಾಳದ ಗಡಿಯಲ್ಲಿರುವ ಮಹಾರಾಜ್ ಗಂಜ್, ಶ್ರಾವಸ್ತಿ ಮತ್ತು ಬಹ್ರೈಚ್ ಸೇರಿದಂತೆ ಏಳು ಜಿಲ್ಲೆಗಳಲ್ಲಿವೆ ಎಂದು ತಿಳಿಸಿದೆ.
ಪ್ರತಿ ಗಡಿ ಜಿಲ್ಲೆಯು 500ಕ್ಕೂ ಹೆಚ್ಚು ಮದರಸಾಗಳನ್ನು ಹೊಂದಿದ್ದು, ಇದು ಅಂತಾರಾಷ್ಟ್ರೀಯ ಗಡಿ ಸಮೀಪದ ಬಗ್ಗೆ ಕಳವಳ ಮೂಡಿಸುವಂತಿದೆ. ಈ ಮದರಸಾಗಳ ಆರ್ಥಿಕ ಲೆಕ್ಕಚಾರದ ಬಗ್ಗೆ ಎಸ್ ಐಟಿ ಮಾಹಿತಿ ಕೇಳಿದ್ದು, ಬಹುತೇಕ ಮದರಸಾಗಳು ಸ್ಪಷ್ಟವಾಗಿ ಆದಾಯ ಮತ್ತು ಖರ್ಚು, ವೆಚ್ಚದ ಮಾಹಿತಿ ನೀಡಲು ವಿಫಲವಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವಿವರಿಸಿದೆ.
ಮದರಸಾಗಳ ಮೂಲಕ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿರುವ ಸಂಚು ಅಡಗಿರುವುದಾಗಿ ಎಸ್ ಐಟಿ ತಿಳಿಸಿದೆ. ದೇಣಿಗೆಯ ಮೂಲಕ ಮದರಸಾ ನಿರ್ಮಿಸಿರುವುದಾಗಿ ಹೇಳಿರುವ ಬಹುತೇಕ ಮದರಸಾಗಳು ದೇಣಿಗೆ ಕೊಟ್ಟವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.