Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್ ಚೋಲ್‌ಗೆ ಬೇಡಿಕೆ
Team Udayavani, Nov 28, 2024, 6:40 AM IST
ಪುತ್ತೂರು: ಕೆಲವು ತಿಂಗಳ ಹಿಂದೆ ಧಾರಣೆ ಏರಿಕೆಯ ದಾಖಲೆ ಬರೆದಿದ್ದ ಹಸಿಕೊಕ್ಕೊ ಧಾರಣೆ ಈಗ ಮತ್ತೆ ಚೇತರಿಕೆ ಕಂಡಿದೆ. 150 ರೂ. ಗಡಿ ದಾಟುವ ಮೂಲಕ ಏರಿಕೆಯ ಸೂಚನೆ ತೋರಿಸಿದೆ.
ಈ ಹಿಂದೆ ಹಸಿ ಕೊಕ್ಕೊ ಧಾರಣೆ ಕೆ.ಜಿ.ಗೆ 300 ರೂ.ಗಡಿಗೆ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಅನಂತರ ಏಕಾಏಕಿ ಕುಸಿತ ಕಂಡು 100 ರೂ.ಗಿಂತ ಕೆಳಗೆ ಇಳಿದಿತ್ತು. ಪ್ರಸ್ತುತ ಹಸಿ ಕೊಕ್ಕೊ ಧಾರಣೆ ಏರಿಕೆ ಕಂಡರೆ, ಒಣ ಕೊಕ್ಕೊ ಧಾರಣೆ ಸ್ಥಿರವಾಗಿ ಮುಂದುವರಿದಿದೆ.
ನ.14ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊಗೆ ಕೆ.ಜಿ.ಗೆ 90-100 ರೂ.ನಲ್ಲಿದ್ದ ಧಾರಣೆ ನ.27ರಂದು 150 ರೂ.ಗೆ ಏರಿಕೆ ಕಂಡಿದೆ. ಎರಡೇ ವಾರದಲ್ಲಿ ಕೆ.ಜಿ.ಯೊಂದರಲ್ಲಿ 60 ರೂ.ನಷ್ಟು ಹೆಚ್ಚಳ ಕಂಡಿದೆ. ನ.15ರಂದು ಕೆ.ಜಿ.ಗೆ 125 ರೂ.ಗೆ ಏರಿಕೆ ಕಂಡಿದ್ದ ಧಾರಣೆ, ನ.21ಕ್ಕೆ 130ಕ್ಕೆ ಜಿಗಿದಿತ್ತು.
ಮಾರುಕಟ್ಟೆಗಳ ಮೂಲಗಳ ಪ್ರಕಾರ ಹಸಿಕೊಕ್ಕೊಗೆ ಮತ್ತಷ್ಟು ಬೇಡಿಕೆ ಸೃಷ್ಟಿಯಾಗಲಿದೆ. ಇನ್ನೊಂದೆಡೆ ಒಣ ಕೊಕ್ಕೊ ಧಾರಣೆ 550 ರೂ.ಯಲ್ಲಿ ಸ್ಥಿರವಾಗಿದೆ. ಹಿಂದೊಮ್ಮೆ ಈ ಧಾರಣೆ 1 ಸಾವಿರ ರೂ. ಗಡಿ ತಲುಪಿತ್ತು. ಹೊರ ಮಾರುಕಟ್ಟೆಯಲ್ಲಿ ಹಸಿಕೊಕ್ಕೊ ಧಾರಣೆ ಕೆ.ಜಿ.ಗೆ 155 ರೂ. ತನಕ ಇದ್ದು, ಒಣ ಕೊಕ್ಕೊ ಧಾರಣೆ 600 ರೂ. ತನಕವೂ ಇತ್ತು.
ಸಿಂಗಲ್ ಚೋಲ್‌ಗೆ ಬೇಡಿಕೆ
ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ ಧಾರಣೆ ಏರಿಕೆಯತ್ತ ಮುಖ ಮಾಡಿದೆ. ನ.27ರಂದು ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್‌ಗೆ ಕೆ.ಜಿ.ಗೆ 447 ರೂ. ದಾಖಲಾಗಿದ್ದು 450 ರೂ. ಗಡಿಗೆ ತಲುಪುವ ಸುಳಿವು ನೀಡಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 435 ರೂ.ಧಾರಣೆ ಇತ್ತು. ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್‌ಗೆ ಭಾರೀ ಬೇಡಿಕೆ ಕಂಡು ಬಂದಿದೆ. ಹೊಸ ಅಡಿಕೆಗೆ ಕ್ಯಾಂಪ್ಕೋದಲ್ಲಿ 335 ರೂ. ಇದ್ದರೆ ಹೊರ ಮಾರುಕಟ್ಟೆಯಲ್ಲಿ 355 ರೂ.ತನಕ ಇತ್ತು. ಡಬ್ಬಲ್ ಚೋಲ್ ಧಾರಣೆ ಕ್ಯಾಂಪ್ಕೋದಲ್ಲಿ 500 ರೂ. ಇದ್ದರೆ ಹೊರ ಮಾರುಕಟ್ಟೆಯಲ್ಲಿ 508 ರೂ. ತನಕವೂ ಖರೀದಿಯಾಗಿದೆ.
ರಬ್ಬರ್ ಏರುಮುಖ
ಕ್ಯಾಂಪ್ಕೋದಲ್ಲಿ ರಬ್ಬರ್ ಗ್ರೇಡ್‌ಗೆ 186 ರೂ., ಸ್ಕಾಪ್‌ಗೆ 121 ರೂ. ದಾಖಲಾಗಿತ್ತು. ಕೆಲವು ದಿನಗಳಿಂದ ಧಾರಣೆ ಏರುಮುಖದತ್ತ ಸಾಗಿದೆ. ಕಾಳು ಮೆಣಸು ಧಾರಣೆಯು 615 ರೂ. ಇದ್ದು ಕಳೆದ ಹಲವು ತಿಂಗಳಿನಿಂದಲೂ ಧಾರಣೆ ಸ್ಥಿರವಾಗಿದೆ. ತೆಂಗಿನ ಕಾಯಿಗೆ ಕೆ.ಜಿ.ಗೆ 49 ರೂ.ನಿಂದ 50 ರೂ. ತನಕ ಧಾರಣೆ ಇದ್ದರೆ, ಕೊಬ್ಬರಿಗೆ 150 ರೂ. ತನಕ ಧಾರಣೆ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Property; ಸಿರಿ ಸಂಪತ್ತಿನ ಒಡತಿ: ಥಾಯ್ಲೆಂಡ್ ಪ್ರಧಾನಿ ಆಸ್ತಿಯೆಷ್ಟು ಗೊತ್ತೇ?
ಜಗತ್ತಿಗೆ ಭಯ ಮೂಡಿಸಿದ ಹೊಸ ವೈರಸ್; ಕೋವಿಡ್ ಬಳಿಕ ಮತ್ತೊಂದು ವೈರಸ್ ಆತಂಕ
Constitution; ಕೈ ಜೈ ಸಂವಿಧಾನ ಅಭಿಯಾನಕ್ಕೆ ಬಿಜೆಪಿಯಿಂದ ಪ್ರತ್ಯಭಿಯಾನ
Udayavani follow-up; ಶುಲ್ಕ ಪಡೆದೂ ಮುದ್ರಿತ ಪುಸ್ತಕ ನೀಡದ ಕರ್ನಾಟಕ ಮುಕ್ತ ವಿವಿ
Congress; ಪರಿಷತ್ ನಾಮನಿರ್ದೇಶನಕ್ಕೆ ಆಕಾಂಕ್ಷಿಗಳಿಂದ ಲಾಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.