SM Krishna: ರಾಮಕೃಷ್ಣ ಆಶ್ರಮದ ಒಲವು, ಭಗವದ್ಗೀತೆ ಶ್ಲೋಕಗಳ ಪಠಣ


Team Udayavani, Dec 11, 2024, 7:25 AM IST

SM Krishna: ರಾಮಕೃಷ್ಣ ಆಶ್ರಮದ ಒಲವು, ಭಗವದ್ಗೀತೆ ಶ್ಲೋಕಗಳ ಪಠಣ

ಎಸ್‌.ಎಂ.ಕೃಷ್ಣ ಅವರು ಮೈಸೂರು ರಾಮಕೃಷ್ಣ ಆಶ್ರಮದ ಬಗ್ಗೆ ಸಾಕಷ್ಟು ಒಲವು ಹೊಂದಿ­ದ್ದರು. ರಾಮಕೃಷ್ಣ ಆಶ್ರಮದಲ್ಲಿನ ಅವರ ಕಲಿಕೆ­ಯಿಂದ ಬದಕು ರೂಪಿಸಿತು. ಬಾಲ್ಯದಲ್ಲಿ ಆರೇಳು ವರ್ಷಗಳ ಕಾಲ ರಾಮಕೃಷ್ಣ ಆಶ್ರಮದಲ್ಲಿ ಕಳೆದ ಅವರು ಆ ಬಳಿಕವೂ ಆಶ್ರಮದೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ಆಶ್ರಮದಲ್ಲಿ ಕಲಿಯುವ ಸಮಯದಲ್ಲಿ ಅವರು ಸಂಗೀತ, ಯೋಗಾಭ್ಯಾಸ­ಗಳನ್ನು ರೂಢಿಸಿಕೊಂಡಿದ್ದರು. ಆಶ್ರಮದ ಭಜನ ತಂಡಗಳೊಂದಿಗೆ ಸೇರಿ ತಬಲಾ ನುಡಿಸುತ್ತಾ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದರು. ಕೆಂಪೇಗೌಡ ಪ್ರಶಸ್ತಿ ದೊರೆತ ಸಮಯದಲ್ಲಿ ಸಿಕ್ಕ 5 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ 2 ಲಕ್ಷ ರೂ. ಸೇರಿ 7 ಲಕ್ಷ ರೂ.ಗಳನ್ನು ಕೃಷ್ಣ ಅವರು ಆಶ್ರಮಕ್ಕೆ ದೇಣಿಗೆಯಾಗಿ ನೀಡಿದ್ದರು.

ಭಗವದ್ಗೀತೆಯ ಶ್ಲೋಕಗಳು ಬಾಯಿಪಾಠ: ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡೇ ವಿದ್ಯಾಭ್ಯಾಸ ನಡೆಸುತ್ತಿದ್ದ ಕೃಷ್ಣ ಅವರು ಎಸೆ ಸೆ ಲ್ಸಿ ಬರುವ ವೇಳೆಗೆ ಭಗವದ್ಗೀತೆಯ 757 ಶ್ಲೋಕಗಳನ್ನು ಪಠಿಸುತ್ತಿ­ದ್ದರು. ಇದಲ್ಲದೇ ಕಠಿನ ಯೋಗಾಭ್ಯಾಸಗಳನ್ನು ಲೀಲಾಜಾಲವಾಗಿ ಅವರು ಮಾಡುತ್ತಿದ್ದರು. ಗಂಡ ಭೇರುಂಡಾಸನ, ಮ­ಯೂರಾಸನಗಳು ಇವರಿಗೆ ಕರಗತವಾಗಿದ್ದವು. ಭಗವದ್ಗೀತೆ ಮತ್ತು ರಾಮಕೃಷ್ಣ ಆಶ್ರಮದಲ್ಲಿ ಕಲಿತ ಪಾಠ­­ಗಳನ್ನು ಅವರು ಜೀವನದುದ್ದಕ್ಕೂ ರೂಢಿಸಿಕೊಂಡಿದ್ದರು.

ಚಿತ್ರಕಲಾ ಪರಿಷತ್‌ಗೆ ಭಾರಿ ಕೊಡುಗೆ: ಕಲಾ ಪ್ರೇಮಿಯಾಗಿದ್ದ ಎಸ್‌.ಎಂ.ಕೃಷ್ಣ ಅವರು ಬೆಂಗಳೂರಿ­ನಲ್ಲಿ ಚಿತ್ರಕಲಾ ಪರಿಷತ್‌ ಸ್ಥಾಪನೆಯಾಗಲು ಪ್ರಮುಖ ಕೊಡುಗೆ ನೀಡಿದ್ದಾರೆ. 1976ರಲ್ಲಿ ಸ್ಥಾಪಿತ­ವಾದ ಚಿತ್ರಕಲಾ ಪರಿಷತ್‌ಗೆ ಧರ್ಮದರ್ಶಿ­ಯಾಗಿ ಕೃಷ್ಣ ಸೇರಿಕೊಂಡಿದ್ದರು. ಕುಮಾರ ಕೃಪಾ ಅತಿಥಿಗೃ­ಹದ ಭಾಗವಾಗಿದ್ದ ಜಮೀನನ್ನು ಚಿತ್ರಕಲಾ ಪರಿಷತ್‌ಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೇ ಇಲ್ಲಿ ಸುಂದರ ಕಲಾಭವನವನ್ನು ಸ್ಥಾಪನೆ ಮಾಡಲು ವಿದೇಶಿ ಶಿಲ್ಪಕಾರರ ನೆರವು ಒದಗಿಸಿದರು.

ಸೋತಾಗೆಲ್ಲಾ ಬೌದ್ಧಿಕತೆಯತ್ತ ಪಯಣ: ಎಸ್‌.ಎಂ.ಕೃಷ್ಣ ಅವರು ಚುನಾವಣೆಗಳಲ್ಲಿ ಸೋತ ಬಳಿಕ ಆ ಸಮಯವನ್ನು ಬೌದ್ಧಿಕತೆ ಹೆಚ್ಚಳಕ್ಕೆ ಬಳಸಿಕೊಳ್ಳು­ತ್ತಿದ್ದರು. ಪುಸ್ತಕಗಳನ್ನು ಓದುವುದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾಡುತ್ತಿ­ದ್ದರು. ಅಲ್ಲದೇ ಹೆಚ್ಚಿನ ಸಮಯವನ್ನು ಟೆನಿಸ್‌ ಆಡುವುದರಲ್ಲಿ ಕಳೆಯುತ್ತಿದ್ದರು.

ಮಾಧ್ಯಮದವರ ಸಲಹೆಗೆ ಮನ್ನಣೆ: ಕೃಷ್ಣ ಅವರು ಮುಖ್ಯಮಂತ್ರಿ ಹಾಗೂ ಸಚಿವರಾಗಿದ್ದ ಸಮಯದಲ್ಲಿ ಮಾಧ್ಯಮದವರೊಂದಿಗೆ ಚರ್ಚಿಸಿ ಅವರ ಸಲಹೆಗ­ಳನ್ನು ಪಡೆದುಕೊಳ್ಳುತ್ತಿದ್ದರು. ಪ್ರತೀಬಾರಿ ಸಂದರ್ಶನ ಅಥವಾ ಪತ್ರಿಕಾಗೋಷ್ಠಿ ಮುಗಿದ ಬಳಿಕ ಸಲಹೆಗ­ಳನ್ನು ಪಡೆಯುತ್ತಿದ್ದರು. ಮಾಧ್ಯಮಗಳ ಜತೆ ಸದಾ ಕಾಲ ಸಂಪರ್ಕದಲ್ಲಿರಲು ಮಾಧ್ಯಮ ಸಮನ್ವಯಕಾರ ಎಂಬ ಹುದ್ದೆಯನ್ನು ಸೃಷ್ಟಿಸಿದ್ದರು. ಅಲ್ಲದೇ ಮಾಧ್ಯ­ಮಗಳ ಎದುರು ಸುಮ್ಮನೆ ಮಾತನಾಡಬಾರದು. ಒಂದು ವೇಳೆ ಮಾತನಾಡಿದರೆ ಅದನ್ನು ಜಾರಿ ಮಾಡ ಬೇಕು ಎಂಬ ತತ್ತಕ್ಕೆ ಅವರು ಬದ್ಧರಾಗಿದ್ದರು.

ಎಮ್ಮೆ ಸವಾರಿ ಮಾಡಿದ್ದ ಕೃಷ್ಣ
ಸಂಪತ್ತಿಗೆ ಸವಾಲ್‌ ಚಲನಚಿತ್ರದಲ್ಲಿ ಡಾ| ರಾಜ್‌ಕುಮಾರ್‌ ಅವರು ಎಮ್ಮೆ ಮೇಲೆ ಕುಳಿತು ಸವಾರಿ ಮಾಡಿದ್ದನ್ನು ನೋಡಿದ್ದ ಕೃಷ್ಣ ಅವರು ಅದರಿಂದ ಸ್ಫೂರ್ತಿ ಪಡೆದುಕೊಂಡು ಎಮ್ಮೆ ಸವಾರಿ ಮಾಡಿದ್ದಾರೆ. ಬಾಲ್ಯದಲ್ಲಿ ಸ್ನೇಹಿತರೊಂದಿಗೆ ನಡೆದು ಹೋಗುವ ಸಮಯದಲ್ಲಿ ಎಮ್ಮೆಗಳನ್ನು ನೋಡಿದ ಕೃಷ್ಣ ಅವರು ಧೈರ್ಯ ಮಾಡಿ ಎಮ್ಮೆ ಮೇಲೆ ಹತ್ತಿ ಕುಳಿತರು. ಆದರೆ ಮೂಗುದಾರವಿಲ್ಲದ ಎಮ್ಮೆ ನಿಯಂತ್ರಣಕ್ಕೆ ಸಿಗದೇ, ಕೃಷ್ಣ ಅವರನ್ನು ಬೀಳಿಸಿ ಓಡಿತ್ತು. ಹೀಗಾಗಿ ಕೈ ಮುರಿದುಕೊಂಡ ಕೃಷ್ಣ ಅವರು 3 ತಿಂಗಳ ಕಾಲ ಮಲಗಿದ್ದರು.

ಟಾಪ್ ನ್ಯೂಸ್

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

8

Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.