SM Krishna: ಸವಾಲುಗಳ ಸರದಿ ಸರಿಗಟ್ಟಿದ ಗಟ್ಟಿ ವ್ಯಕ್ತಿತ್ವ


Team Udayavani, Dec 11, 2024, 6:20 AM IST

SM Krishna: ಸವಾಲುಗಳ ಸರದಿ ಸರಿಗಟ್ಟಿದ ಗಟ್ಟಿ ವ್ಯಕ್ತಿತ್ವ

ಅಧಿಕಾರದ ಗದ್ದುಗೆಯೇ ಹಾಗೆ. ಎಂದಿಗೂ ಹೂವಿನ ಗಾದಿ ಆಗಿರಲಾರದು, ಮುಳ್ಳಿನ ಕುರ್ಚಿ ಎಂದೇ ಕರೆದಿದ್ದ ಕೃಷ್ಣ ಅವರ ಪಾಲಿಗೆ ಸತತ ಮೂರುವರೆ ವರ್ಷ ಕಾಡಿದ ಕ್ಷಾಮ, ರೈತರ ಆತ್ಮಹತ್ಯೆ, ಮಾಜಿ ಸಚಿವ ಎಚ್‌.ನಾಗಪ್ಪ ಅಪಹರಣ ಮತ್ತು ಕೊಲೆ, ಡಾ|ರಾಜಕುಮಾರ್‌ ಅಪಹರಣ ಹೀಗೆ ಒಂದರ ಮೇಲೊಂದರಂತೆ ಸವಾಲುಗಳ ಸರದಿಯೇ ಅವರೆದುರು ಧುತ್ತನೆ ನಿಂತಿದ್ದವು. ಆತ್ಮಸ್ಥೈರ್ಯದಿಂದ ಎಲ್ಲವನ್ನೂ ಎದುರಿಸಿದರು. ಮೃದು ಸ್ವಭಾವದ ಕೃಷ್ಣ ಅವರ ಗಟ್ಟಿ ವ್ಯಕ್ತಿತ್ವಕ್ಕೆ ಇದುವೇ ಸಾಕ್ಷಿ.

1. ಕ್ಷಾಮದಿಂದ ಕಂಗೆಟ್ಟಿದ್ದ ನಾಡು
ಆಡಳಿತ ಆರಂಭಿಸಿದ ಶುರುವಿನಲ್ಲಿ ಮಳೆ, ಬೆಳೆಯ ದೃಷ್ಟಿಯಿಂದ ಸುಭಿಕ್ಷವಾಗಿದ್ದ ರಾಜ್ಯದಲ್ಲಿ ಕಾಕ ತಾಳೀಯ ಎಂಬಂತೆ ಬರದ ಛಾಯೆ ಆವರಿಸಲಾರಂಭಿಸಿತ್ತು. 2000-01 ರಲ್ಲಿ ಮುಂಗಾರು ಕೈಕೊಟ್ಟು ಕೆಲವು ತಾಲೂಕು ಗಳನ್ನು ಬರಪೀಡಿತ ಎಂದು ಘೋಷಿಸಬೇಕಾಯಿತು. ಕೆರೆ, ಕಟ್ಟೆಗಳು ಬತ್ತಿ ಹೋದವು. ಅಂತರ್ಜಲ ಕುಸಿಯ ಲಾರಂಭಿಸಿತ್ತು. ಕೃಷಿ, ತೋಟಗಾರಿಕ ಬೆಳೆಗಳು ಒಣಗಿ ನಿಂತವು. ಜನ-ಜಾನುವಾರುಗಳು ನೀರು, ಮೇವಿಗೆ ಪರ ದಾಡುವ ಸ್ಥಿತಿ ಬಂದಿತ್ತು. ಈ ದುರ್ಭಿಕ್ಷ ಅಲ್ಲಿಗೇ ನಿಲ್ಲಲಿಲ್ಲ. ಮುಂದಿನ ಮುಂಗಾರಲ್ಲೂ ಇದೇ ದುಸ್ಥಿತಿ. ದುರ್ದೈವ ವೆಂಬಂತೆ 2002-03ರಲ್ಲಿ ಭೀಕರ ಬರ ಆವರಿಸಿತು. ಬರೋಬ್ಬರಿ 162 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಯಿತು. ಸತತ 3 ವರ್ಷಗಳ ಬರದಿಂದ ಜಲಾಶಯಗಳೆಲ್ಲ ತಳ ಕಂಡಿದ್ದವು.

2. ಸಾಲು ಸಾಲು ರೈತರ ಆತ್ಮಹತ್ಯೆ
ಬೆಳೆನಷ್ಟ, ಅಂತರ್ಜಲ ಕುಸಿತ, ಕೊಳವೆಬಾವಿಗಳು ವಿಫ‌ಲ, ನೀರು, ಮೇವಿಗೆ ಪರದಾಟದ ಜತೆಗೆ ಉದ್ಯೋಗ ನಾಶವೂ ಕಾಡಲಾರಂಭಿಸಿತ್ತು. ಮಳೆ ಇಲ್ಲದೆ ಬೆಳೆ ಕೈಕೊಟ್ಟಾಗ ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದರು. ಮುಖ್ಯಮಂತ್ರಿಯಾಗಿ ಬರ ನಿರ್ವಹಣೆಗೆ ಶಕ್ತಿ ಮೀರಿ ಪ್ರಯತ್ನಿಸಿದ್ದ ಎಸ್‌.ಎಂ. ಕೃಷ್ಣ ಅವರು, ಕಾಲ-ಕಾಲಕ್ಕೆ ಅಧಿಕಾರಿಗಳ ಸಭೆ, ಕೇಂದ್ರ ಸರಕಾರದ ನೆರವು ಎಲ್ಲವನ್ನೂ ಕೋರಿದರು. ವಿಪಕ್ಷಗಳ ಸಭೆ ನಡೆಸಿ ಸಲಹೆ-ಸೂಚನೆ ಹಾಗೂ ಸಹಕಾರ ಬೇಡಿದ್ದರು. ಈ ಸವಾಲಿನ ಹಾದಿಯಲ್ಲಿ ಹುಟ್ಟಿಕೊಂಡಿದ್ದೇ “ಯಶಸ್ವಿನಿ’ ಯೋಜನೆ. ಸಹಕಾರ ತತ್ತÌದ ಮೇಲೆ ಯಶಸ್ವಿನಿ ಯೋಜನೆ ಅಸ್ತಿತ್ವಕ್ಕೆ ಬಂದಿತ್ತು. ಅನಾರೋಗ್ಯಕ್ಕೆ ಒಳಗಾದ ರೈತರಿಗೆ ವೈದ್ಯಕೀಯ ಸೌಲಭ್ಯ ನೀಡುವ ಘೋಷಣೆಯನ್ನು ಮಾಡಿದರು. ಜತೆಗೆ ರೈತಮಿತ್ರ, ರೈತ ಕಾಯಕ ಯೋಜನೆಗಳ ಮೂಲಕ ಉದ್ಯೋಗ ಸೃಷ್ಟಿಸಿ, ಕೆರೆ ಹೂಳೆತ್ತಿ ಅಭಿವೃದ್ಧಿ ಇತ್ಯಾದಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದರು.

3. ಕರ್ನಾಟಕ-ಮಹಾ ಗಡಿ ಸಮಸ್ಯೆ
ಅಧಿಕಾರಾವಧಿಯ ಉದ್ದಕ್ಕೂ ಸವಾಲಿನ ಹಾದಿ ಎದುರಿಸಿ ಬಂದ ಎಸ್‌.ಎಂ. ಕೃಷ್ಣರನ್ನು ಕಡೆಯದಾಗಿ ಕಾಡಿದ್ದು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ. ತಮ್ಮ ಅಧಿಕಾರಾ ವಧಿ ಇನ್ನೇನು ಮುಗಿಯುತ್ತಿದೆ ಎನ್ನುವ ವೇಳೆಗೆ ಈ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿ ಲೇರಿತ್ತು. ಬೆಳಗಾವಿ ಮತ್ತು 247 ಗ್ರಾಮಗಳು ಕರ್ನಾಟಕದಲ್ಲೇ ಉಳಿಯಬೇಕು ಎಂದು ನ್ಯಾ| ಮೆಹರ್‌ಚಂದ ಮಹಾಜನ್‌ ಆಯೋಗದ ವರದಿಯು ಶಿಫಾರಸು ಮಾಡಿತ್ತು. ಈ ವರದಿಯನ್ನು ತಿರಸ್ಕರಿಸಿದ್ದ ಮಹಾರಾಷ್ಟ್ರ ಸರಕಾರ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ವೇಳೆ ಎಸ್‌.ಎಂ. ಕೃಷ್ಣ ಸರಕಾರ ಮತ್ತೂಂದು ಸವಾಲಿಗೆ ಎದೆ ಕೊಟ್ಟು ಹೋರಾ ಡುವಂತಾಗಿತ್ತು. ಕಾಲಚಕ್ರ ಉರುಳಿದ ಅನಂತರ ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾದರು.

4. ಕಾವೇರಿ ವಿವಾದ:
ಸುಪ್ರೀಂ ಕೋರ್ಟ್‌ ಕಟಕಟೆಯಲ್ಲಿ ನಿಂತ ಕೃಷ್ಣ
ಮೊದಲೇ ಬರಗಾಲದಿಂದ ಕಂಗೆಟ್ಟಿದ್ದ ಕರುನಾಡಿನ ಗಾಯದ ಮೇಲೆ ಬರೆ ಎಳೆದಂತೆ ಕಾವೇರಿ ನದಿ ನೀರಿನ ಸಮಸ್ಯೆಯ ಕಾರ್ಮೋಡ ಆವರಿಸಿತ್ತು. ತಮಿಳುನಾಡಿಗೆ ಕರ್ನಾಟಕ ಕಾವೇರಿ ನೀರು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು, ಅನಂತರದ ದಿನಗಳಲ್ಲಿ ಎಸ್‌.ಎಂ. ಕೃಷ್ಣರನ್ನು ಅಕ್ಷರಶಃ ಕಟಕಟೆಯಲ್ಲಿ ನಿಲ್ಲಿಸಿದರು. ಕೇಂದ್ರದ ತಂಡವೊಂದು ಕರ್ನಾಟಕ ಮತ್ತು ತಮಿಳುನಾಡಿನ ಜಲಾನಯನ ಪ್ರದೇಶಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿತ್ತು. ಇದರ ಆಧಾರದ ಮೇಲೆ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ಸಭೆ ಕರೆದರು. ಆದರೆ ತಗಾದೆ ತೆಗೆದ ತಮಿಳುನಾಡು ಸಿಎಂ ಜಯಲಲಿತಾ, ಸಭಾತ್ಯಾಗ ಮಾಡಿ ಹೊರನಡೆದು ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್‌ ಮುಂದೆ ಅರ್ಜಿ ಸಲ್ಲಿಸಿದ್ದರು. ನೋಟಿಸ್‌ ಜಾರಿ ಮಾಡಿದ್ದ ಸುಪ್ರೀಂ ಕೋರ್ಟ್‌, ತಮಿಳುನಾಡಿಗೆ ನೀರು ಬಿಡುವಂತೆ ಕಟ್ಟಪ್ಪಣೆ ಮಾಡಿತ್ತು. ನೀರು ಬಿಡದಿದ್ದರೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ನೀರು ಬಿಟ್ಟರೆ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ತಮ್ಮನ್ನು ತಾವೇ ದಂಡಿಸಿಕೊಳ್ಳಲು ಬೆಂಗಳೂರಿನಿಂದ ಮಂಡ್ಯಕ್ಕೆ ಪಾದಯಾತ್ರೆ ಮಾಡಿದ್ದರು.

ಬಂಧನ ವಾರೆಂಟ್‌ ಜಾರಿ
ಕಾವೇರಿ ವಿವಾದದಲ್ಲಿ ಎಷ್ಟೆಲ್ಲ ಆದರೂ ಸುಪ್ರೀಂ ಕೋರ್ಟ್‌ ಮಾತ್ರ ಇದ್ಯಾವುದನ್ನೂ ಸಕಾರಾತ್ಮಕವಾಗಿ ಪರಿಗಣಿಸಿರಲಿಲ್ಲ. ದೇಶದ ಕಾನೂನನ್ನು ನಿಮ್ಮ ಸಿಎಂ ಮಂಡ್ಯ ಬೀದಿ ಯಲ್ಲಿ ತೀರ್ಮಾನಿಸುತ್ತಾರಾ ಎಂದು ಕರ್ನಾಟಕದ ವಕೀಲರನ್ನು ತರಾಟೆಗೆ ತೆಗೆದು ಕೊಂಡಿತ್ತು. ನ್ಯಾಯಾಂಗ ನಿಂದನೆಯ ಉರುಳು ಬಿಗಿಯಾಗಿತ್ತು. ಬಂಧನ ವಾರೆಂಟ್‌ ಜಾರಿ ಯಾಗಿತ್ತು. ಕೊನೆಗೆ ಪಾದಯಾತ್ರೆ ಕೈ ಬಿಟ್ಟು ನ್ಯಾಯಾಲಯಕ್ಕೆ ಕ್ಷಮಾಪಣೆ ಕೇಳಿ, ನೀರು ಬಿಟ್ಟಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಕೆಯಾಯಿತು.

ಡಿಸಿಎಂ ಡಿಕೆಶಿ ರಾಜಕೀಯ ಗುರು
ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಸ್‌.ಎಂ.ಕೃಷ್ಣ ಅವರನ್ನು ತಮ್ಮ ರಾಜಕೀಯ ಗುರುವೆಂದೇ ಪರಿಗಣಿಸಿದ್ದಾರೆ. ಕೃಷ್ಣ ಸಂಪುಟದಲ್ಲಿ ಶಿವಕುಮಾರ್‌ ಆಯಕಟ್ಟಿನ ಸ್ಥಾನ ಪಡೆದಿದ್ದನ್ನು ಮರೆಯುವಂತಿಲ್ಲ. ಇದಾದ ಅನಂತರ ಎಸ್‌.ಎಂ.ಕೃಷ್ಣ ಅವರ ಮೊಮ್ಮಗ ಅಮಾರ್ಥ್ಯ ಸಿದ್ಧಾರ್ಥ ಜತೆಗೆ ಶಿವಕುಮಾರ್‌ ಪುತ್ರಿಯ ವಿವಾಹವೂ ನಡೆದಿದ್ದು, ರಾಜಕಾರಣದ ಆಚೆಗೂ ಅವರಿಬ್ಬರ ಸಂಬಂಧ ಗಟ್ಟಿಯಾಗಿದೆ.

ಗಾಂಧೀಜಿಯವರಿಗೆ ಹೂವಿನ ಮಾಲೆ
1934ರಂದು ಮಹಾತ್ಮ ಗಾಂ ಧೀಜಿ ಅವರು ಸ್ವಾತಂತ್ರÂ ಹೋರಾಟದ ಸಂದರ್ಭದಲ್ಲಿ ಸೋಮನಹಳ್ಳಿಗೆ ಬಂದಿದ್ದ ವೇಳೆ ಮೂರು ವರ್ಷದ ಬಾಲಕನಾಗಿದ್ದ ಕೃಷ್ಣ ಅವರು ಗಾಂ ಧೀಜಿ ಅವರಿಗೆ ಹೂವಿನ ಮಾಲೆ ಹಾಕುವ ಮೂಲಕ ಸ್ವಾಗತಿಸಿದ್ದರು.

ಟಾಪ್ ನ್ಯೂಸ್

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sn

Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…

Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

12(1

Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

1-sn

Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.