ಪೇಜಾವರ-ಸಿದ್ಧಗಂಗಾ ಶ್ರೀ ನೆನಪಿಗೆ ಸ್ಮೃತಿ ವನ : ಬಜೆಟ್‌ನಲ್ಲಿ ಘೋಷಣೆಗೆ ಶಿಫಾರಸು
Team Udayavani, Feb 12, 2021, 6:20 AM IST
ಬೆಂಗಳೂರು : ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಸ್ಮರಣಾರ್ಥ ಉಡುಪಿಯಲ್ಲಿ ಮತ್ತು ಸಿದ್ಧಗಂಗಾ ಶ್ರೀಗಳ ನೆನಪಿನಲ್ಲಿ ತುಮಕೂರಿನಲ್ಲಿ “ಸ್ಮತಿ ವನ’ ನಿರ್ಮಿಸುವಂತೆ ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ ಶಿಫಾರಸು ಮಾಡಿದೆ.
ಇದಲ್ಲದೆ ಜೀವವೈವಿಧ್ಯ ಮಂಡಳಿ, ಪರಿಸರ -ಅರಣ್ಯ ಮತ್ತಿತರ ಇಲಾಖೆಗಳ ಮೂಲಕ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಜೀವ ವೈವಿಧ್ಯ ವನ-ಹಸುರು ವಲಯ ರಕ್ಷಣೆ, ದೇಸೀ ಜಾನುವಾರು ತಳಿ ಸಂರಕ್ಷಣೆ, ಬಯೋಗ್ಯಾಸ್ ಘಟಕಗಳ ಸ್ಥಾಪನೆ ಸಹಿತ ಹಲವು ಹಸುರು ಯೋಜನೆಗಳನ್ನು ಮಂಡಳಿ ಶಿಫಾರಸು ಮಾಡಿದೆ.
ಹಾಸನದ ಗೆಂಡೆಕಟ್ಟೆಯಲ್ಲಿ ರಾಷ್ಟ್ರಮಟ್ಟದ “ಜೀವವೈವಿಧ್ಯ ವನ’ ರೂಪಿಸಬೇಕು. ರಾಜ್ಯಾದ್ಯಂತ ನೂರು ಸಣ್ಣ ಕೆರೆಗಳನ್ನು ಆಯ್ಕೆ ಮಾಡಿ, ಹೂಳೆತ್ತಿ, ಸುತ್ತಲೂ ಹಸುರು ವಲಯ ನಿರ್ಮಿಸಿ, ಸ್ಥಳೀಯರ ಸಹಭಾಗಿತ್ವದೊಂದಿಗೆ ನಿರ್ವಹಿಸಬೇಕು. ಈಗಾಗಲೇ ಜಾರಿಯಾಗಿರುವ ಕಾನು ಸಂರಕ್ಷಣ ಯೋಜನೆಯನ್ನು ಮಲೆನಾಡು, ಕರಾವಳಿಯ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಿ, ಅಲ್ಲಿರುವ ಅಪೂರ್ಣ ಕಾನು-ದೇವರಕಾಡು ಪ್ರದೇಶಗಳನ್ನು ಸಂರಕ್ಷಿಸುವ ಯೋಜನೆ ಜಾರಿಗೆ ತರಬೇಕು ಎಂದು ಶಿಫಾರಸು ಮಾಡಿದೆ.
“ಸುಸ್ಥಿರ ಅಭಿವೃದ್ಧಿ ಆಶಯ’ದ ಉದ್ದೇಶ ಗಳನ್ನು ಸಾಧಿ ಸುವ ನಿಟ್ಟಿನಲ್ಲಿ ವರದಿ ಸಲ್ಲಿ ಸಲು ಮುಖ್ಯ ಮಂತ್ರಿ ಸೂಚಿ ಸಿದ್ದರು. ಅದಕ್ಕೆ ಪೂರಕವಾಗಿ ಶಿಫಾರಸು ಮಾಡಲಾಗಿದೆ. ಜನರ ಸಹ ಭಾಗಿತ್ವ ದಲ್ಲಿ ಯೋಜನೆ ಜಾರಿಗೊಳಿಸಲು ಸಲಹೆ ಮಾಡಿದ್ದೇವೆ.
– ಅನಂತ ಹೆಗಡೆ ಅಶೀಸರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ
ಬಯೋಗ್ಯಾಸ್ ಘಟಕ ಯೋಜನೆ
ನಗರಗಳ ಹಸಿತ್ಯಾಜ್ಯ ವಿಲೇವಾರಿಗೆ ಬಯೋಗ್ಯಾಸ್ ಘಟಕವು ಅತ್ಯಂತ ಕಡಿಮೆ ವೆಚ್ಚದ, ಸರಳ ಮತ್ತು ಪರಿಸರ ಪೂರಕ ಮಾರ್ಗವಾಗಿದೆ. ಇದರಿಂದ ತ್ಯಾಜ್ಯದ ಸಮಸ್ಯೆಯೂ ತಗ್ಗಿ, ಅಡುಗೆಗಾಗಿ ಬಳಸಲು ಇಂಧನವೂ ದೊರಕುತ್ತದೆ. ರಾಜ್ಯದ ಎಲ್ಲ ಮಹಾನಗರ ಮತ್ತು ನಗರ ಪಾಲಿಕೆಗಳಲ್ಲಿ ಹಸಿತ್ಯಾಜ್ಯದಿಂದ ಬಯೋಗ್ಯಾಸ್ ತಯಾರಿಸುವ ಘಟಕಗಳನ್ನು ಖಾಸಗಿ-ಸಾರ್ವಜನಿಕ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಸ್ಥಾಪಿಸಬೇಕು. ಜತೆಗೆ ಸುಮಾರು 1 ಲಕ್ಷ ರೈತ ಕುಟುಂಬಗಳಿಗೆ ದೀಪ ಮತ್ತು ನೀರು ಕಾಯಿಸುವ ಉದ್ದೇಶದ ಸೋಲಾರ್ ಘಟಕ ಸ್ಥಾಪಿಸಲು ಅನುಕೂಲವಾಗುವಂತೆ ಕನಿಷ್ಠ ಶೇ. 50ರಷ್ಟು ಸಹಾಯಧನ ನೀಡುವ “ಸುಸ್ಥಿರ ಇಂಧನ ಅಭಿವೃದ್ಧಿ’ ಯೋಜನೆಯನ್ನು ಜಾರಿಗೆ ತರಬೇಕು ಎಂದು ಶಿಫಾರಸು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.