ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಲೆಗೆ ಕೋಲು ಕಟ್ಟಿಕೊಂಡ ಮಹಿಳೆ
Team Udayavani, May 16, 2020, 8:00 PM IST
ಪ್ಯಾರಿಸ್: ಕೋವಿಡ್-19ಗೆ ಸದ್ಯ ಕಡಿವಾಣ ಹಾಕಲು ಇರುವ ಏಕೈಕ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಜನರು ಅಂತರ ಕಾಯ್ದುಕೊಳ್ಳಲು ಹೊಸ ಹೊಸ ತಂತ್ರ ಅನುಸರಿಸುತ್ತಿರುವುದು ಗಮನ ಸೆಳೆಯುತ್ತಿದೆ.
ಫ್ರಾನ್ಸ್ ನ ಮಹಿಳೆಯೊಬ್ಬಳು ತನ್ನ ತಲೆಗೆ ಅಡ್ಡವಾಗಿ 1 ಮೀ. ಉದ್ದದ ಕೋಲು ಕಟ್ಟಿಕೊಂಡು ತನ್ನ ಬಳಿ ಯಾರೂ ಬರದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ತಾವು ಅಂತರ ಕಾಯ್ದುಕೊಳ್ಳಲು ಇಚ್ಚಿಸಿದರೂ ಇತರರು ತಮ್ಮ ಸಮೀಪ ಬರಬಹುದು ಅಥವಾ ನಮಗೆ ಅರಿವಿಲ್ಲದೆ ಇನ್ನೊಬ್ಬರ ಹತ್ತಿರ ತೆರಳಬಹುದು.
ಹಾಗಾಗಿ ಈ ಉಪಾಯವನ್ನು ಕಂಡುಕೊಂಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಆಕೆ ಪ್ಯಾರಿಸ್ ಬೀದಿಯಲ್ಲಿ ಓಡಾಡುವ ವಿಡಿಯೋವನ್ನು ಎಬಿಸಿ ನ್ಯೂಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಇದು ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.