ಆಹಾರ ಶೈಲಿಯೇ ಆರೋಗ್ಯ ಸಮಸ್ಯೆಗೆ ಕಾರಣ…ಹೊಟ್ಟೆ ಸಮಸ್ಯೆಗೆ ಇಲ್ಲಿದೆ ಪರಿಹಾರ
ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು...ಇದು ಹಲವರನ್ನು ಕಾಡುವ ಸಮಸ್ಯೆ
Team Udayavani, Oct 28, 2022, 3:50 PM IST
ಹೊಟ್ಟೆ ಭಾರ, ಹಸಿವಾಗದೇ ಇರುವುದು, ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು…ಇದು ಹಲವರನ್ನು ಕಾಡುವ ಸಮಸ್ಯೆ. ನಮ್ಮ ಆಹಾರಶೈಲಿಯೇ ಈ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣ. ಹಾಗೆಯೇ, ಅಡುಗೆಮನೆಯಲ್ಲಿ ಸಿಗುವ ಕೆಲವು ಆಹಾರ ಪದಾರ್ಥಗಳಿಂದಲೇ ಈ ಸಮಸ್ಯೆಗಳನ್ನು ತಕ್ಕಮಟ್ಟಿಗೆ ಬಗೆಹರಿಸಿಕೊಳ್ಳಬಹುದು.
-ಶುಂಠಿ
ಹೊಟ್ಟೆಯಲ್ಲಿ ವಾಯು ಉತ್ಪಾದನೆಯನ್ನು ತಡೆಯುವ ಕಿಣ್ವ (ಎನ್‌ಝೈಮ್)ಗಳನ್ನು ಶುಂಠಿಯು ಉತ್ಪಾದಿಸುತ್ತದೆ. ಕುದಿಯುವ ನೀರಿಗೆ ಶುಂಠಿಯನ್ನು ಜಜ್ಜಿ ಹಾಕಿ, ಸ್ವಲ್ಪ ಲಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ ಪ್ರತಿನಿತ್ಯ ಕುಡಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.
-ಓಂ ಕಾಳು (ಅಜ್ವೆ„ನ್)
ಓಂ ಕಾಳನ್ನು ಸೇವಿಸುವುದರಿಂದ, ಸರಾಗ ಜೀರ್ಣಕ್ರಿಯೆಗೆ ಸಹಕರಿಸುವ ಕಿಣ್ವಗಳ ಉತ್ಪತ್ತಿ ಹೆಚ್ಚುತ್ತದೆ. ಅರ್ಧ ಚಮಚ ಓಮದ ಕಾಳನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ.
– ಪುದೀನಾ
ಪುದೀನಾ ಸೊಪ್ಪನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ, ಅಡುಗೆಯಲ್ಲಿ ಬಳಸುವುದರಿಂದ ಹೊಟ್ಟೆಯ ಬಹುತೇಕ ಸಮಸ್ಯೆಗಳು ದೂರಾಗುತ್ತವೆ.
-ಮಜ್ಜಿಗೆ
“ಹುಚ್ಚಿಯಾದರೂ ತಾಯಿ, ನೀರಾದರೂ ಮಜ್ಜಿಗೆ’ ಅಂತ ಗಾದೆಯೇ ಇದೆ. ಅಂದರೆ, ಮಜ್ಜಿಗೆ ಎಷ್ಟೇ ನೀರಾಗಿದ್ದರೂ ಅದರಲ್ಲಿ ಬಹಳಷ್ಟು ಸತ್ವಗಳು ಅಡಗಿವೆ. ಆಹಾರದ ಮೂಲಕ ದೇಹದ ಒಳಗೆ ಕಲ್ಮಶ/ ವಿಷ ಸೇರಿದ್ದರೆ ಮಜ್ಜಿಗೆ ಕುಡಿದರೆ ಸರಿ ಹೋಗುತ್ತದೆ ಎನ್ನುತ್ತಾರೆ. ಅದಕ್ಕಾಗಿಯೇ, ಊಟದ ಕೊನೆಯಲ್ಲಿ ಮಜ್ಜಿಗೆ ಸೇವಿಸುವುದನ್ನು ಹಿಂದಿನವರು ರೂಢಿಸಿಕೊಂಡಿದ್ದರು. ಮಜ್ಜಿಗೆಗೆ ಚಿಟಿಕೆ ಇಂಗು ಸೇರಿಸಿ ಕುಡಿದರೆ, ಹೊಟ್ಟೆಯ ಗ್ಯಾಸ್ ಸಮಸ್ಯೆ ದೂರಾಗುತ್ತದೆ.
-ಜೀರಿಗೆ
ಹೊಟ್ಟೆಯುಬ್ಬರ, ಗ್ಯಾಸ್, ಹಸಿವಾಗದಿರುವುದು, ಅಜೀರ್ಣ ಸಮಸ್ಯೆಗಳಿಗೆ ಜೀರಿಗೆ ರಾಮಬಾಣ. ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲ ಉತ್ಪಾದನೆಯಾಗದಂತೆ ತಡೆದು ಆ್ಯಸಿಡಿಟಿಯನ್ನು ತಗ್ಗಿಸುತ್ತದೆ. ಪ್ರತಿನಿತ್ಯ ಅಥವಾ ಹೊಟ್ಟೆಯ ಸಮಸ್ಯೆ ಎದುರಾದಾಗ ಜೀರಿಗೆಯನ್ನು ನೀರಿನಲ್ಲಿ ಕುದಿಸಿ, ತಣ್ಣಗಾಗಿಸಿ ಕುಡಿಯಿರಿ.
-ಯೋಗರ್ಟ್ / ಮೊಸರು
ಅಂಗಡಿಗಳಲ್ಲಿ ಸಿಗುವ ಯೋಗರ್ಟ್ ಅನ್ನು (ಮೊಸರು ಕೂಡಾ ಒಳ್ಳೆಯದು) ಸೇವಿಸುವುದರಿಂದ ಅಥವಾ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಅಜೀರ್ಣದ ಸಮಸ್ಯೆಯನ್ನು ತಡೆಗಟ್ಟಬಹುದು.
-ಪಪ್ಪಾಯ ಹಣ್ಣು
ಪಪ್ಪಾಯಿಯಲ್ಲಿ ಇರುವ “ಪಪೈನ್’ ಎಂಬ ಕಿಣ್ವವು, ಜೀರ್ಣಾಂಗ ವ್ಯವಸ್ಥೆಯ ಎಲ್ಲಾ ತ್ಯಾಜ್ಯವನ್ನು ಹೊರ ತೆಗೆದು, ಜೀರ್ಣಕ್ರಿಯೆಯನ್ನು ಸುಲಭಗೊಳಿಸಬಲ್ಲದು. ದಿನನಿತ್ಯ ಎರಡು ಹೋಳು ಪಪ್ಪಾಯ ತಿನ್ನಿರಿ ಅಥವಾ ಸಕ್ಕರೆ ಬೆರೆಸದೆ ಜ್ಯೂಸ್ ಮಾಡಿ ಕುಡಿಯಿರಿ.
-ಲಿಂಬೆ ರಸ, ಸೋಡಾ
ಲಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ.
-ನೆಲ್ಲಿಕಾಯಿ
ನೆಲ್ಲಿಕಾಯಿ ತಿನ್ನುವುದರಿಂದ, ಅಂಗಡಿಯಲ್ಲಿ ಸಿಗುವ ನೆಲ್ಲಿಕಾಯಿ ಚೂರ್ಣ, ಸಂಸ್ಕರಿಸಿದ ರಸ ಕುಡಿಯುವುದರಿಂದ ಹೊಟ್ಟೆ ಭಾರ, ವಾಯು ಸಮಸ್ಯೆ ಕಡಿಮೆಯಾಗುತ್ತದೆ. ದೇಹದ ಕಲ್ಮಶಗಳನ್ನು ಹೊರ ಹಾಕಲೂ ಇದು ಸಹಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.