ಟಿ20: ಇಂಗ್ಲೆಂಡನ್ನು ಹಿಡಿದು ನಿಲ್ಲಿಸಿದ ಎನ್‌ಗಿಡಿ
ದಕ್ಷಿಣ ಆಫ್ರಿಕಾಕ್ಕೆ ಒಂದು ರನ್ ರೋಚಕ ಗೆಲುವು
Team Udayavani, Feb 13, 2020, 10:51 PM IST
ಈಸ್ಟ್ ಲಂಡನ್: ಅಂತಿಮ ಓವರ್‌ನಲ್ಲಿ ಮ್ಯಾಜಿಕ್ ಮಾಡಿದ ವೇಗಿ ಲುಂಗಿ ಎನ್‌ಗಿಡಿ, ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಒಂದು ರನ್ನಿನ ರೋಚಕ ಗೆಲುವು ತಂದಿತ್ತಿದ್ದಾರೆ.
ಬುಧವಾರ ರಾತ್ರಿ ನಡೆದ ಈ ಜಿದ್ದಾಜಿದ್ದಿ ಮೇಲಾಟದಲ್ಲಿ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 177 ರನ್ ಹೊಡೆದರೆ, ಇಂಗ್ಲೆಂಡ್ 9 ವಿಕೆಟಿಗೆ 176 ರನ್ ಮಾಡಿ ಸೋಲೊಪ್ಪಿಕೊಂಡಿತು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡಿಗೆ ಎದುರಾದ ರನ್ ಅಂತರದ ಸಣ್ಣ ಸೋಲು. ಇನ್ನೊಂದೆಡೆ ಹರಿಣಗಳ ಪಡೆ 3ನೇ ಸಲ ಒಂದು ರನ್ನಿನ ಜಯ ಸಾಧಿಸಿತು.
ಅಂತಿಮ ಓವರ್, 7 ರನ್…
ಕೊನೆಯ 3 ಓವರ್‌ಗಳಿಂದ 28 ರನ್ ತೆಗೆಯುವ ಸವಾಲು ಇಂಗ್ಲೆಂಡ್ ಮುಂದಿತ್ತು. 6 ವಿಕೆಟ್ ಕೈಲಿತ್ತು. ಅಂತಿಮ ಓವರಿನಲ್ಲಿ ಟಾರ್ಗೆಟ್ ಕೇವಲ 7 ರನ್ನಿಗೆ ಇಳಿಯಿತು. ಆದರೆ ಲುಂಗಿ ಎನ್‌ಗಿಡಿ ಘಾತಕ ಸ್ಪೆಲ್ ಒಂದನ್ನು ನಡೆಸಿ ಮಾರ್ಗನ್ ಪಡೆಯ ಗೆಲುವಿನ ಮಾರ್ಗವನ್ನೇ ಮುಚ್ಚಿಬಿಟ್ಟರು. ಈ ಓವರಿನಲ್ಲಿ ಅವರು ಕೇವಲ 5 ರನ್ ನೀಡಿ 2 ವಿಕೆಟ್ ಹಾರಿಸಿದರು. ಜತೆಗೆ ಅಂತಿಮ ಎಸೆತದಲ್ಲಿ 2ನೇ ರನ್ ಕದಿಯುವ ವೇಳೆ ಆದಿಲ್ ರಶೀದ್ ರನೌಟಾದರು. 30 ರನ್ನಿಗೆ 3 ವಿಕೆಟ್ ಹಾರಿಸಿದ ಎನ್‌ಗಿಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಚೇಸಿಂಗ್ ವೇಳೆ ಜಾಸನ್ ರಾಯ್ ಬ್ಯಾಟಿಂಗ್ ಜಬರ್ದಸ್ತ್ ಆಗಿತ್ತು. ಅವರು ಕೇವಲ 28 ಎಸೆತಗಳಿಂದ 70 ರನ್ ಸಿಡಿಸಿದರು (7 ಬೌಂಡರಿ, 3 ಸಿಕ್ಸರ್). ನಾಯಕ ಇಯಾನ್ ಮಾರ್ಗನ್ ಕೊಡುಗೆ 52 ರನ್ (34 ಎಸೆತ, 7 ಬೌಂಡರಿ, 1 ಸಿಕ್ಸರ್). ಆದರೆ ಕೊನೆಯಲ್ಲಿ ಸ್ಟೋಕ್ಸ್, ಡೆನ್ಲಿ, ಅಲಿ ಅಗ್ಗಕ್ಕೆ ಔಟಾದದ್ದು ಇಂಗ್ಲೆಂಡಿಗೆ ಹಿನ್ನಡೆಯಾಗಿ ಪರಿಣಮಿಸಿತು.
ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಿರುಸಿನಿಂದ ಕೂಡಿತ್ತು. 11ನೇ ಓವರ್ ತನಕ ಹತ್ತರ ಸರಾಸರಿಯಲ್ಲಿ ರನ್ ಹರಿದು ಬರುತ್ತಿತ್ತು. ಸ್ಪಿನ್ನರ್‌ಗಳಾದ ಅಲಿ, ರಶೀದ್ ಉತ್ತಮ ನಿಯಂತ್ರಣ ಸಾಧಿಸಿದರು. ಬವುಮ 43, ಡಿಕಾಕ್ ಮತ್ತು ಡುಸೆನ್ ತಲಾ 31 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ-20 ಓವರ್‌ಗಳಲ್ಲಿ 8 ವಿಕೆಟಿಗೆ 177 (ಬವುಮ 43, ಡಿ ಕಾಕ್ 31, ಡುಸೆನ್ 31, ಜೋರ್ಡನ್ 28ಕ್ಕೆ 2, ಅಲಿ 22ಕ್ಕೆ 1, ರಶೀದ್ 23ಕ್ಕೆ 1). ಇಂಗ್ಲೆಂಡ್-20 ಓವರ್‌ಗಳಲ್ಲಿ 9 ವಿಕೆಟಿಗೆ 176 (ರಾಯ್ 70, ಮಾರ್ಗನ್ 52, ಬೇರ್‌ಸ್ಟೊ 23, ಎನ್‌ಗಿಡಿ 30ಕ್ಕೆ 3, ಫೆಲುಕ್ವಾಯೊ 32ಕ್ಕೆ 2, ಹೆಂಡ್ರಿಕ್ಸ್ 33ಕ್ಕೆ 2).
ಪಂದ್ಯಶ್ರೇಷ್ಠ: ಲುಂಗಿ ಎನ್‌ಗಿಡಿ.
ಡೇಲ್ ಸ್ಟೇನ್ ದಾಖಲೆ
ಒಂದು ವರ್ಷದ ಬಳಿಕ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ ವೇಗಿ ಡೇಲ್ ಸ್ಟೇನ್, ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ನೂತನ ಬೌಲಿಂಗ್ ದಾಖಲೆ ಬರೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ವಿಕೆಟ್ ಉರುಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಪಂದ್ಯದಲ್ಲಿ ಸ್ಟೇನ್ ಇಂಗ್ಲೆಂಡ್ ಆರಂಭಕಾರ ಜಾಸ್ ಬಟ್ಲರ್ ವಿಕೆಟ್ ಕಿತ್ತರು. ಇದರೊಂದಿಗೆ ತಮ್ಮ ವಿಕೆಟ್ ಗಳಿಕೆಯನ್ನು 62ಕ್ಕೆ ಏರಿಸಿದರು. 61 ವಿಕೆಟ್ ಕಿತ್ತ ಇಮ್ರಾನ್ ತಾಹಿರ್ ದಾಖಲೆಯನ್ನು ಮುರಿದರು.
ತಾಹಿರ್ 35 ಪಂದ್ಯಗಳಿಂದ ಈ ಸಾಧನೆ ಮಾಡಿದರೆ, ಸ್ಟೇನ್ 62 ವಿಕೆಟಿಗೆ 45 ಪಂದ್ಯ ತೆಗೆದುಕೊಂಡಿದ್ದಾರೆ. ಸ್ಟೇನ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ 439 ಉರುಳಿಸಿದ ಆಫ್ರಿಕಾ ಬೌಲರ್ ಎನಿಸಿದ್ದಾರೆ. ಏಕದಿನದಲ್ಲಿ 196 ವಿಕೆಟ್ ಬೇಟೆಯಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.