ದ.ಕೊರಿಯಾ: ಸೋಂಕಿನ ಮಧ್ಯೆಯೇ ನಡೆಯಿತು ಚುನಾವಣೆ
ಎಲ್ಲ ಅಭ್ಯರ್ಥಿಗಳಿಂದಲೂ ಕೋವಿಡ್-19ಗೆ ಮೊದಲ ಆದ್ಯತೆ
Team Udayavani, Apr 15, 2020, 5:45 PM IST
ಸಿಯೋಲ್: ಕೋವಿಡ್ ಹಾವಳಿಯನ್ನು ಸಮರ್ಥವಾಗಿ ಎದುರಿಸಿರುವ ಹಿರಿಮೆಗೆ ಪಾತ್ರವಾದ ದಕ್ಷಿಣ ಕೊರಿಯಾ ಇದೀಗ ಪಿಡುಗಿನ ಮಧ್ಯೆಯೆ ಸಂಸತ್ತಿನ 300 ಸ್ಥಾನಗಳಿಗೆ ಯಶಸ್ವಿಯಾಗಿ ಚುನಾವಣೆ ನಡೆಸಿ ಇನ್ನೊಂದು ಸಾಧನೆ ಮಾಡಿದೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ಅವರಿಗೂ ಕೋವಿಡ್-19 ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿದೆ. ಮೂನ್ ಕೈಗೊಂಡ ಕ್ರಮಗಳಿಗೆ ಜಾಗತಿಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಹಜವಾಗಿಯೇ ಚುನಾವಣೆಯಲ್ಲಿ ಇದು ಮತಗಳಾಗಿ ಪರಿವರ್ತಿತವಾಗುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ. ಹಲವು ದೇಶಗಳು ಕೋವಿಡ್ ಹತೋಟಿಗೆ ದಕ್ಷಿಣ ಕೊರಿಯಾದ ಸಲಹೆಗಳನ್ನು ಕೇಳುತ್ತಿವೆ.
ಹೀಗೆ ನಡೆಯಿತು ಮತದಾನ
ಮತದಾರರು ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಟೆಂಪರೇಚರ್ ಟೆಸ್ಟ್ ಪಾಸ್ ಆಗುವ ತನಕ ಮತಗಟ್ಟೆಯೊಳಗೆ ಪ್ರವೇಶವಿರಲಿಲ್ಲ. ಸ್ಯಾನಿಟೈಸರ್‌ನಲ್ಲಿ ಕೈತೊಳೆದ ಬಳಿಕ ಪ್ಲಾಸ್ಟಿಕ್ ಗ್ಲೌಸ್ ಧರಿಸಿ ಮತ ಹಾಕಬೇಕಿತ್ತು.
ಕ್ವಾರಂಟೈನ್‌ನಲ್ಲಿರುವವರಿಗೆ ಇ-ಮೈಲ್ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ವಿಶೇಷವೆಂದರೆ ಜನರು ಕೂಡ ಚುನಾವಣೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಒಂದು ವಾರದ ಹಿಂದೆಯೇ ಮತದಾನ ಪ್ರಕ್ರಿಯೆ ಶುರುವಾಗಿತ್ತು. ಎ.13ರಂದು ಅಂತಿಮ ಸುತ್ತಿನ ಮತದಾನ ನಡೆಯಿತು. ಮತಗಟ್ಟೆಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.
ಅಧ್ಯಕ್ಷ ಮೂನ್ ಕೂಡ ಟೆಂಪರೇಚರ್ ಟೆಸ್ಟ್ ಪಾಸ್ ಆಗದ ಕಾರಣ ಒಂದು ತಾಸಿಗೂ ಅಧಿಕ ಹೊತ್ತು ಮತಗಟ್ಟೆಯ ಹೊರಗೆ ಕಾದು ನಿಲ್ಲಬೇಕಾಯಿತು.
ಈ ಚುನಾವಣೆಯ ಮುಖ್ಯ ವಿಷಯವೇ ಕೋವಿಡ್ ಆಗಿತ್ತು. ಸಾಮಾನ್ಯವಾಗಿ ಉದ್ಯೋಗ ಸೃಷ್ಟಿ, ಸಾರ್ವತ್ರಿಕ ಆರೋಗ್ಯ ಯೋಜನೆ, ಆರ್ಥಿಕತೆ ಈ ಮುಂತಾದ ವಿಷಯಗಳು ಪ್ರಚಾರದಲ್ಲಿ ಪ್ರಾಮುಖ್ಯ ಪಡೆಯುತ್ತಿದ್ದವು. ಆದರೆ ಈ ಸಲ ಎಲ್ಲ ಅಭ್ಯರ್ಥಿಗಳು ಕೋವಿಡ್-19ಗೆ ಮೊದಲ ಆದ್ಯತೆ ನೀಡಿದ್ದರು.
ದೊಡ್ಡ ರ್ಯಾಲಿಗಳ ಬದಲು ಚಿಕ್ಕ ಗುಂಪನ್ನುದ್ದೇಶಿಸಿ ಮಾತನಾಡುವ ಪ್ರಚಾರದ ಮೊರೆ ಹೋಗಲಾಯಿತು. ಹಸ್ತಲಾಘವ ಬಿಲುಕುಲ್ ಇರಲಿಲ್ಲ. ಇನ್ನು ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಮುದ್ದಾಡುವುದು ದೂರವೇ ಉಳಿಯಿತು. ಹೀಗೆ ಹಲವು ಬದಲಾವಣೆಗಳನ್ನು ಈ ಚುನಾವಣೆ ಕಂಡಿತು.
ದಕ್ಷಿಣ ಕೊರಿಯಾ ಕೋವಿಡ್ ಗೆದ್ದದ್ದೇಗೆ?
ಚೀನಕ್ಕೆ ಒತ್ತಿಕೊಂಡಿರುವ ದಕ್ಷಿಣ ಕೊರಿಯಾದಲ್ಲಿ ಆರಂಭದ ದಿನಗಳಲ್ಲಿ ಕೋವಿಡ್ ಭೀತಿ ದಟ್ಟವಾಗಿಯೇ ಇತ್ತು. ಆದರೆ ಸರಕಾರ ಸಕಾಲದಲ್ಲಿ ಕೈಗೊಂಡ ಕ್ರಮಗಳು ವೈರಾಣು ವ್ಯಾಪಕವಾಗಿ ಪ್ರಸರಣವಾಗುವುದನ್ನು ತಡೆಯಿತು. ಫೆಬ್ರವರಿಯಲ್ಲಿ ನಿತ್ಯ ಸರಾಸರಿ 900ರಂತೆ ಕೋವಿಡ್ ಸೋಂಕು ವರದಿಯಾಗುತ್ತಿತ್ತು. ಎಪ್ರಿಲ್‌ಗಾಗುವಾಗ ಈ ಸಂಖ್ಯೆ 50ಕ್ಕಿಳಿಯಿತು.
ವ್ಯಾಪಕವಾದ ಪರೀಕ್ಷೆ, ಸೂಕ್ಷ್ಮ ಕಣ್ಗಾವಲು, ಸಾಮಾಜಿಕ ಅಂತರದ ಪಾಲನೆ, ವಿದೇಶಗಳಿಂದ ಬಂದವರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್ ಈ ಮುಂತಾದ ಕ್ರಮಗಳಿಂದ ದಕ್ಷಿಣ ಕೊರಿಯಾ ಕೋವಿಡ್ ವಿರುದ್ಧ ಗೆಲುವು ಸಾಧಿಸಿತು. ಈ ಮಾದರಿಯನ್ನೀಗ ಇಡೀ ಜಗತ್ತು ಅನುಸರಿಸುತ್ತಿದೆ.
ಸೋಮವಾರಕ್ಕಾಗುವಾಗ ದಕ್ಷಿಣ ಕೊರಿಯಾದಲ್ಲಿದ್ದದ್ದು 10,537 ಸೋಂಕಿನ ಪ್ರಕರಣಗಳು. ಇಷ್ಟರ ತನಕ 237 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 7000 ಮಂದಿ ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.