Space Station: ರಷ್ಯಾದ ಗಗನನೌಕೆಯಿಂದ ಹೊರಬಿದ್ದ ವಿಷಕಾರಿ ಅನಿಲ!
ಬಾಹ್ಯಾಕಾಶ ನಿಲ್ದಾಣ ಸೇರುತ್ತಿದ್ದಂತೆ ಈ ಅವಘಡ
Team Udayavani, Dec 1, 2024, 3:31 AM IST
ಹೊಸದಿಲ್ಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಮತ್ತೂಂದು ಅನಪೇಕ್ಷಿತ ಘಟನೆ ನಡೆದಿದೆ. ರಷ್ಯಾದ ಗಗನನೌಕೆಯೊಂದು ಐಎಸ್ಎಸ್ಗೆ ಬಂದು ಸೇರುತ್ತಿದ್ದಂತೆ ಅದರಿಂದ ವಿಷಕಾರಿ ವಾಸನೆ ಬರುತ್ತಿರುವುದು ಗೊತ್ತಾಗಿದೆ! ಆದರೆ, ಇದರಿಂದ ಏನು ಅಪಾಯ ಎದುರಾಗಿದೆ ಎಂಬ ಮಾಹಿತಿಯನ್ನು ನಾಸಾ ನೀಡಿಲ್ಲ.
ಈ ಘಟನೆ ಕಳೆದ ವಾರ ನಡೆದಿದ್ದು, ಈಗ ನಾಸಾ ಮಾಹಿತಿಯನ್ನು ಹೊರ ಹಾಕಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳಿಗೆ ಅಗತ್ಯ ವಸ್ತುಗಳನ್ನು ಹೊತ್ತಿದ್ದ ಈ ನೌಕೆ ಕಜಕಿಸ್ಥಾನದಿಂದ ನ.21ರಂದು ಉಡಾವಣೆಯಾಗಿತ್ತು. ಗಗನನೌಕೆಯ ಹ್ಯಾಚ್(ಬಾಗಿಲು) ತೆರೆಯುತ್ತಿದ್ದಂತೆ ವಿಷಕಾರಿ ಅನಿಲ ಹೊರ ಸೂಸುತ್ತಿರುವುದು ಮತ್ತು ಕೆಲವು ಹನಿಗಳು ಬೀಳುತ್ತಿರುವುದನ್ನು ಅಲ್ಲಿದ್ದ ಗಗನಯಾತ್ರಿಗಳು ಗುರುತಿಸಿ ದ್ದಾರೆ. ಆಗ ಕೂಡಲೇ ಗಗನಯಾತ್ರಿಗಳು ಹ್ಯಾಚ್ ಬಂದ್ ಮಾಡಿದ್ದಾರೆ. ಅಲ್ಲದೇ, ರಷ್ಯಾದ ವಿಭಾಗವನ್ನು ಪೂರ್ತಿ ಮುಚ್ಚಿದ್ದಾರೆ.
ಇನ್ನೂ 6 ತಿಂಗಳವರೆಗೆ ಐಎಸ್ಎಸ್ನಲ್ಲೇ ಇರಲಿರುವ ನೌಕೆ, ಬಳಿಕ ಹಿಂದಿರು ಗಲಿದೆ. ಹಾಗೆ ಹಿಂದಿರುಗುವಾಗ ಅದು ನಿಲ್ದಾಣದಲ್ಲಿ ಉತ್ಪತ್ತಿಯಾಗಿರುವ ಕಸವನ್ನು ಭೂಮಿಯ ವಾತಾವರಣದಲ್ಲಿ ಬಿಡಲಿದೆ ಎಂದು ನಾಸಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.