ಸಾವಿನ ಸೂತಕದ ನಡುವೆ ಜೀವನೋತ್ಸಾಹತುಂಬುವ ಸ್ಪೇನ್ ಪೊಲೀಸರು
Team Udayavani, Mar 29, 2020, 1:15 PM IST
ಸ್ಪೇನ್: ಒಂದು ಕಡೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಸ್ಪೇನ್ ತನ್ನ ಜನರಲ್ಲಿ ಆತ್ಮವಿಶ್ವಾಸ ಕುಂದದಂತೆ ನೋಡಿಕೊಳ್ಳುತ್ತಿದೆ. ಕೋವಿಡ್ 19 ವೈರಸ್ ನಿಂದಾಗಿ ಸ್ಪೇನ್ ಅಕ್ಷರಶಃ ಸ್ಮಶಾನ ಸದೃಶ್ಯವಾಗಿದೆ. ಇಟಲಿ, ಅಮೆರಿಕದಂತೆ ಸ್ಪೇನ್ ನಲ್ಲೂ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿನ ಮೂಲೋತ್ಪಾಟನೆ ಮಾಡುವ ಸಲುವಾಗಿ ಸ್ಪೇನ್ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ.
ಮನೆಯಲ್ಲೇ ಕುಳಿತು ಬೋರ್‌ಆದವರಿಗೆಜೀವನೋತ್ಸಾಹ ತುಂಬುವ ಕೆಲಸವನ್ನು ಸ್ಪೈನ್ ಪೊಲೀಸರು ಮಾಡುತ್ತಿದ್ದಾರೆ. ರೋಗ ಹರಡುವುದನ್ನು ತಡೆಯುವುದಕ್ಕೆ ನಿಯೋಜನೆಗೊಂಡಿದ್ದ ಸ್ಪೇನ್ ಪೊಲೀಸರು ಈಗ ಜನರಿಗೆ ಉತ್ಸಾಹ ತುಂಬುತತಿದ್ದಾರೆ. ಕೈಗಲ್ಲಿ ಲಾಠಿ ಮತ್ತು ಪಿಸ್ತೂಲ್ ಹಿಡಿಯುತ್ತಿದ್ದ ಪೊಲೀಸರೀಗ ಅದರ ಬದಲು ಗಿಟಾರ್‌ಗಳು ಹಿಡಿಯುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಒತ್ತಡಕ್ಕೊಳಗಾಗಿರುವ,
ಕೋವಿಡ್ 19 ಭೀತಿಯಿಂದ ತತ್ತರಿಸಿರುವ ಜನರ ಭಯವನ್ನು ಹೋಗಲಾಡಿಸುವ ಪ್ರಯತ್ನವನ್ನು ಅಲ್ಲಿನ ಸರಕಾರ ಮಾಡುತ್ತಿದೆ. ಲಾಕ್ ಡೌನ್ ಆದ ಬಿದಿಯಲ್ಲಿ ಗಸ್ತು ತಿರುಗುವ ಜತೆಗೆ ಜನರಿಗೆ ಕೊಂಚ ರಿಲ್ಯಾಕ್ಸ್ ಮೂಡಿಸಲು ಸ್ಟ್ರೀಟ್ ಬ್ಯಾಂಡ್ ರೀತಿ ಬೀದಿಯಲ್ಲಿ ಗಿಟಾರ್‌ಹಿಡಿದು, ಹಾಡುತ್ತಿದ್ದಾರೆ. ಜತೆಗೆ ನೃತ್ಯ ಮಾಡುತ್ತಿದ್ದು, ಮನೆಯೊಳಗೆ ಇದ್ದ ಜನರು ಹೊರ ಬಂದು ಇವರಿಂದ ಸಂಭ್ರಮ ಪಡುತ್ತಿದ್ದಾರೆ. ಈ ಮೂಲಕ ಜನರಿಗೆ ಕೊಂಚ ಮನರಂಜನೆ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ.
ಪೊಲೀಸರ ಈ ಪ್ರಯತ್ನಕ್ಕೆ ಭಾರೀ ಅಭಿನಂದನೆಗಳು ವ್ಯಕ್ತವಾಗುತ್ತಿದೆ. ಸ್ಪ್ಯಾನಿಶ್ ಮಂದಿ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟಿ ಗೌರವಿಸುತ್ತಿದ್ದಾರೆ. ಬೀದು ಬೀದಿಯಲ್ಲಿ ಸ್ಪ್ಯಾನಿಶ್ ಪೊಲೀಸರು ಗಿಟಾರ್‌ನುಡಿಸಿ, ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.