Special Train: ಗಣೇಶ, ದೀಪಾವಳಿ, ದಸರಾ ಹಬ್ಬದ ಪ್ರಯುಕ್ತ 22 ವಿಶೇಷ ರೈಲು ಸಂಚಾರ
Team Udayavani, Sep 5, 2024, 1:44 AM IST
ಬೆಂಗಳೂರು: ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ಅಂಗವಾಗಿ ನೈಋತ್ಯ ರೈಲ್ವೇ ಬೆಂಗಳೂರು ವಿಭಾಗದಿಂದ ಒಟ್ಟು 22 ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.
ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಸೆ.5 ರಿಂದ 7ರ ವರೆಗೆ ಬೆಂಗಳೂರು-ಕಲಬುರಗಿ ವಿಶೇಷ ರೈಲು ರಾತ್ರಿ 9.15ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 7.40ಕ್ಕೆ ಕಲಬುರಗಿ ನಿಲ್ದಾಣ ಪ್ರವೇಶಿಸಲಿದೆ. ಸೆ.6 ರಿಂದ 8ರಂದು ಕಲಬುರಗಿ- ಬೆಂಗಳೂರು ವಿಶೇಷ ರೈಲು ಬೆಳಗ್ಗೆ 9.35ಕ್ಕೆ ಕಲಬುರಗಿ ನಿಲ್ದಾಣದಿಂದ ಹೊರಟ ರೈಲು ಅದೇ ದಿನ ರಾತ್ರಿ 8ಕ್ಕೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ.
ದೀಪಾವಳಿ ಹಬ್ಬ ವಿಶೇಷ ರೈಲು:
ಅ.30 ಮತ್ತು ನ.2 ರಂದು ಮೈಸೂರು -ವಿಜಯಪುರ ಮಾರ್ಗ, ಅ.31 ಹಾಗೂ ನ.3ರಂದು ವಿಜಯಪುರ-ಮೈಸೂರು ಮಾರ್ಗ, ಅ.30 ಮತ್ತು ನ.1ರಂದು ಯಶವಂತಪುರ-ಬೆಳಗಾವಿ, ಅ.31 ಮತ್ತು ನ.3ರಂದು ಬೆಳಗಾವಿ-ಯಶವಂತಪುರ ಮಾರ್ಗವಾಗಿ ವಿಶೇಷ ರೈಲು ಸಂಚರಿಸಲಿದೆ.
ದಸರಾ ಹಬ್ಬದ ವಿಶೇಷ ರೈಲು:
ದಸರಾ ಹಬ್ಬದ ಅಂಗವಾಗಿ ಅ.9ಮತ್ತು 12ರಂದು ಎಸ್‌ಎಂವಿಟಿ-ವಿಜಯಪುರ ಮಾರ್ಗ, ಅ.10 ಮತ್ತು 13ರಂದು ವಿಜಯಪುರ- ಎಸ್‌ಎಂವಿಟಿ ಬೆಂಗಳೂರು, ಅ.9 ಮತ್ತು 12ರಂದು ಯಶವಂತಪುರ ಬೆಳಗಾವಿ, ಅ.10 ಮತ್ತು 13ರಂದು ಬೆಳಗಾವಿ-ಯಶವಂತಪುರ ಮಾರ್ಗ, ಅ.9 ರಿಂದ 13ರ ವರೆಗೆ ಮೈಸೂರು-ಕೆಎಸ್‌ಆರ್ ಬೆಂಗಳೂರು , ಅ.10ರಿಂದ 14ವರೆಗೆ ಕೆಎಸ್‌ಆರ್ ಬೆಂಗಳೂರು- ಮೈಸೂರು ಮಾರ್ಗ, ಅ.9ರಿಂದ ಅ.14ರ ವರೆಗೆ ಚಾಮರಾಜನಗರ -ಮೈಸೂರು ಮಾರ್ಗ, ಅ.10ರಿಂದ ಅ.14ರ ವರೆಗೆ ಮೈಸೂರು -ಚಾಮರಾಜನಗರ ಮಾರ್ಗವಾಗಿ ವಿಶೇಷ ರೈಲುಗಳ ಸಂಚರಿಸಲಿದೆ. ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್ ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.