ಲಂಕಾ ಸರಕಾರಕ್ಕೆ ಕುತ್ತು; ಅಲ್ಪಮತಕ್ಕೆ ಕುಸಿದ ಬೆಂಬಲ ;41 ಸಂಸದರು ಸಂಸತ್‌ಗೆ ಗೈರು
Team Udayavani, Apr 6, 2022, 8:25 AM IST
ಕೊಲೊಂಬೊ: ಲಂಕಾ ದ್ವೀಪವನ್ನು ಇನ್ನಿಲ್ಲದಂತೆ ಸುಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬೆಂಕಿ ಈಗ ಮೈತ್ರಿಕೂಟ ಸರಕಾರದ ಬುಡಕ್ಕೇ ಬಿದ್ದಿದೆ. ಮಂಗಳವಾರ ಜರುಗಿದ ಸಂಸತ್ ಅಧಿವೇಶನದಲ್ಲಿ ಮೈತ್ರಿಕೂಟ ಸರಕಾರ ಅಲ್ಪಮತಕ್ಕೆ ಕುಸಿದಿರುವುದು ಅತ್ಯಂತ ಸ್ಪಷ್ಟವಾಗಿದ್ದು, ಅಧ್ಯಕ್ಷ ಗೋಟಬಯ ರಾಜಪಕ್ಸ ಸರಕಾರ ಯಾವುದೇ ಕ್ಷಣದಲ್ಲೂ ಪತನವಾಗುವ ಅಪಾಯ ಎದುರಿಸುತ್ತಿದೆ. ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ಅಧಿವೇಶನ ನಡೆದಿದ್ದು, ಮೈತ್ರಿಕೂಟದಲ್ಲಿನ ಕೆಲವು ಪಕ್ಷಗಳು ತಟಸ್ಥ ಧೋರಣೆ ಅನುಸರಿಸಲು ನಿರ್ಧರಿಸಿವೆ. ಬಹುತೇಕ ಸಂಸದರು ಅಧಿವೇಶನಕ್ಕೆ ಗೈರಾಗಿ, ದೂರವೇ ಉಳಿದಿದ್ದರು.
ಬಹುಮತದ ಕೊರತೆ: 2020ರಲ್ಲಿ 150 ಸಂಸದ ಬಲದಿಂದ ಶ್ರೀಲಂಕಾ ಪೊದುಜನ ಪೆರಮುನಾ (ಎಸ್‌ಎಲ್‌ಪಿಪಿ) ಮೈತ್ರಿಕೂಟ ಸರಕಾರ ಅಧಿಕಾರ ಹಿಡಿದಿತ್ತು. ಪ್ರಸ್ತುತ 41 ಸಂಸದರು ಅಧಿವೇಶನ ದಿಂದ ದೂರ ಉಳಿದಿದ್ದರಿಂದಾಗಿ, ಮೈತ್ರಿಕೂಟ ಸರಕಾರದ ಸಂಖ್ಯಾಬಲ 109ಕ್ಕೆ ಕುಸಿತ ಕಂಡಿದೆ. ಸರಳ ಬಹುಮತಕ್ಕೆ 113 ಸ್ಥಾನಗಳ ಬೆಂಬಲ ಆವ ಶ್ಯಕತೆ ಇದ್ದು, 4 ಸ್ಥಾನಗಳ ಕೊರತೆಯನ್ನು ರಾಜಪಕ್ಸ ಸರಕಾರ ಅನುಭವಿಸುತ್ತಿದೆ. ಶ್ರೀಲಂಕಾದ ಸಂಸತ್ ಒಟ್ಟು 225 ಸ್ಥಾನಗಳನ್ನು ಹೊಂದಿದೆ.
14 ಸಂಸದರೊಂದಿಗೆ ಸರಕಾರದ ಜತೆ ಕೈಜೋಡಿಸಿದ್ದ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್‌ಎಲ್‌ಎಫ್ಪಿ) ಬೆಂಬಲ ಹಿಂತೆಗೆದುಕೊಂಡಿದ್ದು, ರಾಜ ಪಕ್ಸ ಸರಕಾರಕ್ಕೆ ಬಹುದೊಡ್ಡ ಹಿನ್ನಡೆ ಉಂಟಾಗಿದೆ. 41 ಸಂಸದರ ಗೈರಾಗಿದ್ದಾಗ್ಯೂ, ಎಸ್‌ಎಲ್‌ಪಿಪಿ ಸರಕಾರದ ಸಂಸದ ರೋಹಿತಾ ಅಬೇ ಗುಣವರ್ಧನ, “ಸರಕಾರಕ್ಕೆ ಸಂಪೂರ್ಣ ಬಹು ಮತವಿದೆ. ಕನಿಷ್ಠ 138 ಸಂಸದರು ಸರಕಾರ ಜತೆಗಿದ್ದಾರೆ. ಯಾವುದೇ ಅಪಾಯವಿಲ್ಲ’ ಎಂದೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾರ್ವೆ, ಇರಾಕ್‌ನ ರಾಯಭಾರಿ ಕಚೇರಿ ಬಂದ್
ಆರ್ಥಿಕ ದಿವಾಳಿತನದ ಬೆನ್ನಲ್ಲೇ ಶ್ರೀಲಂಕಾ ಸರ್ಕಾರ ನಾರ್ವೆ, ಇರಾಕ್‌ನಲ್ಲಿನ ತನ್ನ ರಾಯಭಾರಿ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಮುಂದಾಗಿದೆ. ಆಸ್ಟ್ರೇಲಿಯಾದಲ್ಲಿನ ಕಾನ್ಸುಲೇಟ್ ಜನರಲ್ ಹುದ್ದೆಯ ರದ್ದತಿಗೂ ಆದೇಶಿಸಿದೆ. “ಎಪ್ರಿಲ್ 30ರಿಂದ ಈ ಆದೇಶ ಜಾರಿಗೆ ಬರಲಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಸಾಗರೋತ್ತರ ರಾಜತಾಂತ್ರಿಕ ಪುನರ್ರಚನೆಯ ಆವಶ್ಯಕತೆ ಮನಗಂಡು ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸರಕಾರ ಸ್ಪಷ್ಟಪಡಿಸಿದೆ.
ಲಂಕಾಕ್ಕೆ ಬೀಸಿದ್ದು ಅರಬ್ ಹೋರಾಟದ ಗಾಳಿ?
ಭ್ರಷ್ಟಾಚಾರ, ಹಣದುಬ್ಬರ ವಿರೋಧಿಸಿ, 2010ರಲ್ಲಿ ಅರಬ್ ರಾಷ್ಟ್ರಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. “ಅರಬ್ ರಾಷ್ಟ್ರಗಳ ಮಾದರಿಯಲ್ಲೇ ಈಗ ಲಂಕೆಯಲ್ಲಿ ಹೋರಾಟ ಶುರುವಾಗಿದೆ’ ಎನ್ನುತ್ತಾರೆ, ಲಂಕಾ ಆರ್ಥಿಕ ತಜ್ಞ ಶಶಿ ದಾನತುಂಗೆ.
“ಅರಬ್ ಮಾದರಿಯ ಈ ಹೋರಾಟ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಯುವಕರ ನ್ನೊಳಗೊಂಡ ನೂತನ ಆಡಳಿತ ರಚಿಸುವ ಸಾಧ್ಯತೆ ಇದೆ. ವಿದ್ಯಾವಂತ ಯುವಕರೇ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸುತ್ತಿದ್ದಾರೆ. ಅವರೆಲ್ಲರೂ ಹಳೇ ಊಳಿಗಮಾನ್ಯ ಮತ್ತು ಭ್ರಷ್ಟಾಚಾರ ವ್ಯವಸ್ಥೆ ಕಿತ್ತೂ ಗೆಯಲು ಕಾತರರಾಗಿದ್ದಾರೆ’ ಎಂದು ವಿಶ್ಲೇಷಿಸಿದ್ದಾರೆ.
ಏತನ್ಮಧ್ಯೆ, ಮಂಗಳವಾರ ಜೋರು ಮಳೆಯನ್ನೂ ಲೆಕ್ಕಿಸದೆ ಸಹಸ್ರಾರು ವಿದ್ಯಾರ್ಥಿಗಳು ಬೀದಿಗಿಳಿದು, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ದೃಶ್ಯ ಕಂಡುಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.