ಎಸ್ಸೆಸ್ಸೆಲ್ಸಿ ಗೈರು: ನಕಲಿ ಗುಮಾನಿ ;25 ಸಾವಿರ ವಿದ್ಯಾರ್ಥಿಗಳೇ ನಕಲಿ ಸೃಷ್ಟಿ?
Team Udayavani, Mar 30, 2019, 6:00 AM IST
ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಎಲ್ಲ ವಿಷಯಗಳಲ್ಲೂ ರಾಜ್ಯಾದ್ಯಂತ ಕನಿಷ್ಠ 25 ಸಾವಿರ ವಿದ್ಯಾರ್ಥಿಗಳು ಗೈರುಹಾಜರಾಗು ತ್ತಿ ರುವುದು ಬೆಳಕಿಗೆ ಬಂದಿದ್ದು, ಇದರ ಗುಟ್ಟು ಏನು ಎಂಬುದು ಸರಕಾರ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ.
ಕೆಲವು ವರ್ಷಗಳಿಂದ ನಡೆಯುತ್ತಿರುವ ಇದು ಈ ವರ್ಷವೂ ಪುನರಾ ವರ್ತನೆಯಾಗಿದೆ. ಈವರೆಗೆ ನಡೆ ದಿರುವ ಎಲ್ಲ ಪರೀಕ್ಷೆಗಳಲ್ಲೂ ಸರಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಎ.21ರಂದು ನಡೆದ ಪ್ರಥಮ ಭಾಷಾ ಪರೀಕ್ಷೆಗೆ 24,899 ವಿದ್ಯಾರ್ಥಿ ಗಳು ಗೈರಾಗಿದ್ದರು. ಅನಂತರದ ಗಣಿತ, ದ್ವಿತೀಯ ಭಾಷೆ, ಶುಕ್ರವಾರದ ಸಮಾಜ ವಿಜ್ಞಾನ ಪರೀಕ್ಷೆಗೂ 25 ಸಾವಿರದ ಆಸು ಪಾಸು ಸಂಖ್ಯೆಯ ವಿದ್ಯಾರ್ಥಿ ಗಳು ಗೈರಾಗಿದ್ದಾರೆ. ನಿಜಕ್ಕೂ ಇಷ್ಟು ವಿದ್ಯಾರ್ಥಿಗಳು ಗೈರಾಗುತ್ತಿದ್ದಾರೋ ಅಥವಾ ಶಾಲಾ ಮುಖ್ಯಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿ ಕಾರಿಗಳು, ಜಿಲ್ಲಾ ಉಪ ನಿರ್ದೇಶಕರು ತಮ್ಮ ಅಸ್ತಿತ್ವ ಉಳಿಸಿ ಕೊಳ್ಳುವುದಕ್ಕಾಗಿ ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿದ್ದಾರೋ ಎಂಬ ಸಂಶಯ ಮಂಡಳಿ ಯಲ್ಲಿ ದಟ್ಟವಾಗಿದೆ.
ಕರಾವಳಿಯಲ್ಲೇನು?
ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ ಗೈರುಹಾಜರಾತಿ ಆಗಿದ್ದರೂ ಪ್ರಮಾಣ ಕಡಿಮೆ ಇದೆ. ಇದುವರೆಗಿನ ನಾಲ್ಕು ಪರೀಕ್ಷೆಗಳಲ್ಲಿ ಅನುಕ್ರಮವಾಗಿ 623, 713, 563 ಮತ್ತು 570ಯಷ್ಟೇ ಮಂದಿ ಗೈರಾಗಿದ್ದಾರೆ. ಒಟ್ಟು ಪರೀಕ್ಷೆ ಬರೆದವರು 1,72,023 ವಿದ್ಯಾರ್ಥಿಗಳಾದರೆ ಹಾಜರಾಗದವರು 2,469 ಮಂದಿ.
ಶಿಕ್ಷಕ, ಅಧಿಕಾರಿಗಳ ಮೇಲೆ ಗುಮಾನಿ?
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಂಬಂಧಿಸಿ ಶಾಲೆಯ 10ನೇ ತರಗತಿಯಲ್ಲಿ
ತರಗತಿಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳು ಇರಬೇಕು ಎಂದು ಕರ್ನಾಟಕ ಶಿಕ್ಷಣ
ಕಾಯ್ದೆ 1983ರ ಸ್ಪಷ್ಟವಾಗಿ ಹೇಳುತ್ತದೆ. ಅನುದಾನಿತ ಶಾಲೆಗಳಲ್ಲಿ ಇರುವ
ಕೆಲವು ಶಿಕ್ಷಕರಿಗೆ ಸರ್ಕಾರದಿಂದಲೇ ವೇತನ ನೀಡಲಾಗುತ್ತದೆ. ಹೀಗಾಗಿ ಮಕ್ಕಳ
ಸಂಖ್ಯೆ ಕಡಿಮೆ ಇದ್ದರೆ ಅಂತಹ ಶಾಲೆಗಳ ಮಾನ್ಯತೆ ರದ್ದತಿಗೆ ನೋಟಿಸ್ ನೀಡಬೇಕು. ಜತೆಗೆ ಅಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಪರೀಕ್ಷೆ ಬರೆಯಲು ತೊಂದರೆ ಆಗದಂತೆ ಬೇರೇ ಶಾಲೆಗಳ ಮೂಲಕ ನೋಂದಣಿ ಮಾಡಿಸಲು ಕ್ರಮ ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ತೋರಿಸಿದರೆ, ಉದ್ಯೋಗಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂಬ ಉದ್ದೇಶದಿಂದ ಶಾಲಾ ಶಿಕ್ಷಕರು, ಮುಖ್ಯಶಿಕ್ಷಕರು, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿಕೊಂಡು ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ ಎಂದು ಮಂಡಳಿಯ ಮೂಲಗಳೇ ತಿಳಿಸಿವೆ.
ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.