ಕೋವಿಡ್ -19 ತಂದ ಭಾಗ್ಯ: 33 ವರ್ಷಗಳ ಬಳಿಕ 10ನೇ ತರಗತಿ ಪಾಸ್
Team Udayavani, Aug 1, 2020, 2:25 PM IST
ತೆಲಂಗಾಣ: ಕೋವಿಡ್ -19 ವೈರಸ್ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಲಕ್ಷಾಂತರ ಮಂದಿಯನ್ನು ಬೀದಿಗೆ ತಂದಿದೆ. ಅದು ತಂದೊಡ್ಡಿದ ಸಂಕಷ್ಟಕ್ಕೆ ದೇಶದ ಆರ್ಥಿಕತೆಯೇ ಕುಸಿದುಹೋಗಿದೆ. ಇಷ್ಟೆಲ್ಲ ಕಷ್ಟಕ್ಕೆ ಕಾರಣವಾಗಿದ್ದರೂ ತೆಲಂಗಾಣದ ವ್ಯಕ್ತಿಯೋರ್ವರು ಕೋವಿಡ್‌ಗೆ ಧನ್ಯವಾದ ತಿಳಿಸಿದ್ದಾರೆ. ಕಾರಣವಿಷ್ಟೇ … 33 ವರ್ಷಗಳಿಂದ ಸಾಧ್ಯವಾಗದ 10ನೇ ತರಗತಿಯ ಪರೀಕ್ಷಾ ಕಗ್ಗಂಟು ಕೋವಿಡ್‌ನಿಂದಾಗಿ ಬಗೆಹರಿವಂತಾಗಿದ್ದು.
ನೂರುದ್ದೀನ್ ಅವರಿಗೆ ಸಂಕಷ್ಟ ತಂದ ಇಂಗ್ಲಿಷ್
ಹೈದರಾಬಾದ್‌ನ ಮುಷೀರಾಬಾದ್ ಪ್ರದೇಶದ ಅಂಜುಮಾನ್ ಬಾಯ್ಸ ಪ್ರೌಢಶಾಲೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ 51 ವರ್ಷದ ಮೊಹಮ್ಮದ್ ನೂರುದ್ದೀನ್ 1987ರಿಂದ 10ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರೂ 2019ರ ವರೆಗೂ ಪಾಸಾಗುವುದು ಸಾಧ್ಯವಾಗಿರಲಿಲ್ಲ. ಪ್ರತಿಬಾರಿಯೂ ಇಂಗ್ಲಿಷ್‌ನಲ್ಲಿ ಅನುತ್ತೀರ್ಣನಾಗುತ್ತಿದ್ದರು. ಆದರೆ ಪ್ರಯತ್ನವನ್ನು ಬಿಟ್ಟಿರಲಿಲ್ಲ.
ಪರೀಕ್ಷೆ ನೋಂದಾಯಿಸಿದವರೆಲ್ಲ ಪಾಸ್
ಕೋವಿಡ್ 19 ವೈರಸ್ ಪರಿಸ್ಥಿತಿಯಲ್ಲಿ ತೆಲಂಗಾಣ ಸರಕಾರವು ಲಾಕ್ ಡೌನ್ ಹೇರಿ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಗಿತಗೊಳಿಸಿತು. ಇದರ ಅನಂತರ ಪರೀಕ್ಷೆಗಳನ್ನು ರದ್ದುಪಡಿಸಿ ಎಲ್ಲ ಅಭ್ಯರ್ಥಿಗಳನ್ನು ಉತ್ತೀರ್ಣ ಎಂದು ಘೋಷಿಸಿತು. ಇದರ ಪ್ರಯೋಜನ ನೂರುದ್ದೀನ್ ಅವರಿಗೂ ಸಿಕ್ಕಿ 10ನೇ ತರಗತಿ ಪಾಸಾಗುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.