ಎಸೆಸೆಲ್ಸಿ : ಇಬ್ಬರಿಗೆ 625ಕ್ಕೆ 625 , ಉಡುಪಿ 5ನೇ, ದ.ಕ. 7ನೇ ಸ್ಥಾನ
Team Udayavani, May 1, 2019, 6:15 AM IST
ಬೆಂಗಳೂರು: ಎಸೆಸೆಲ್ಸಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಆನೇಕಲ್‌ನ ಸೈಂಟ್ ಫಿಲೋಮಿನಾ ಪ್ರೌಢ ಶಾಲೆಯ ಡಿ.ಸೃಜನಾ ಮತ್ತು ಕುಮಟಾದ ವಿಠೊಬ ಶ್ಯಾನ್‌ಭಾಗ್ ಕಲಾºಗರ್ ಪ್ರೌಢ
ಶಾಲೆಯ ನಾಗಾಂಜಲಿ ಈ ಸಾಧನೆ ಮಾಡಿದವರು. ಜತೆಗೆ ಈ ಬಾರಿ ಫಲಿತಾಂಶದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು, ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧೆ ನೀಡುವಲ್ಲಿ ಯಶಸ್ಸು ಕಂಡಿದ್ದಾರೆ.
ಹಾಸನ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ ಹಾಗೂ ಉಡುಪಿ ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿದೆ. ದಕ್ಷಿಣ ಕನ್ನಡ 7ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಉಡುಪಿ ಪ್ರಥಮ ಮತ್ತು ದ.ಕ. ನಾಲ್ಕನೇ ಸ್ಥಾನ ಪಡೆದಿತ್ತು.
ಒಟ್ಟಾರೆಯಾಗಿ ಪರೀಕ್ಷೆ ಬರೆದವರಲ್ಲಿ ಶೇ.73.70ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಶೇ.1.77ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಈ ವರ್ಷದಿಂದ ಜಿಲ್ಲಾವಾರು ಫಲಿತಾಂಶದ ಮಾನದಂಡ ಬದಲಾಗಿದೆ. 11 ಮಕ್ಕಳು 625ಕ್ಕೆ 624 ಅಂಕ ಗಳಿಸಿದ್ದರೆ, 19 ವಿದ್ಯಾರ್ಥಿಗಳು 625ಕ್ಕೆ 623 ಮತ್ತು 39 ವಿದ್ಯಾರ್ಥಿಗಳು 625ಕ್ಕೆ 622 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
625ಕ್ಕೆ 624 ಬಂದವರು
ಯು.ಎಸ್.ಭಾವನಾ, ಸೇಂಟ್ ಜಾನ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಬೆಂ. ದಕ್ಷಿಣ; ಆರ್.ಭಾವನಾ, ಸೌಂದರ್ಯ ಹೈಸ್ಕೂಲ್, ಬೆಂ. ಉತ್ತರ; ಎಸ್.ಸಾಯಿರಾಮ್, ಲಿಟ್ಲ ಲಿಲ್ಲಿಸ್ ಆಂಗ್ಲ ಮಾಧ್ಯಮ ಶಾಲೆ, ಬೆಂ.ಉತ್ತರ; ಎಚ್.ವಿ.ಶಾಂಭವಿ, ಸಮಾಜ ಸೇವಾ ಮಂಡಳಿ ಹೈಸ್ಕೂಲ್, ಬೆಂಗಳೂರು ದಕ್ಷಿಣ; ಸಿ.ಹರ್ಷಿತ್, ಸಿದ್ಧಗಂಗಾ ಆಂಗ್ಲಮಾಧ್ಯಮ ಶಾಲೆ, ತುಮಕೂರು; ಸಿಂಚನಾ ಲಕ್ಷ್ಮೀ, ವಿವೇಕಾನಂದ ಹೈಸ್ಕೂಲ್, ಪುತ್ತೂರು; ಕೆ.ಆರ್.ಕೃಪಾ, ಕುಮಾರಸ್ವಾಮಿ ಆಂಗ್ಲಮಾಧ್ಯಮ ಶಾಲೆ, ಸುಬ್ರಹ್ಮಣ್ಯ; ಅನುಪಮಾ ಕಾಮತ್, ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ; ಚಿನ್ಮಯಿ, ವಿಟ್ಲ ಜೇಸಿಸ್ ಆಂಗ್ಲಮಾಧ್ಯಮ ಪ್ರೌಢಶಾಲೆ, ವಿಟ್ಲ; ಪ್ರಗತಿ ಎಂ.ಗೌಡ, ವಿಜಯ ಹೈಸ್ಕೂಲ್, ಹಾಸನ; ಬಿ. ಅಭಿನ್, ವಿಜಯ ಹೈಸ್ಕೂಲ್, ಹಾಸನ
ಐದೇ ದಿನಗಳಲ್ಲಿ ಫಲಿತಾಂಶ
ಮಂಗಳವಾರ ಫಲಿತಾಂಶ ಪ್ರಕಟಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಹೊಸ ತಂತ್ರಜ್ಞಾನ ಅಳವಡಿಸಿ ಕೊಂಡಿದ್ದರಿಂದ ಮೌಲ್ಯಮಾಪನ ಮುಗಿದ ಐದೇ ದಿನಗಳಲ್ಲಿ ಫಲಿತಾಂಶ ನೀಡಿದ್ದೇವೆ. ಕಳೆದ ಬಾರಿಗಿಂತ ಶೇ.1.77ರಷ್ಟು ಫಲಿತಾಂಶ ಹೆಚ್ಚಳವಾಗಿದ್ದು, ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಶ್ರಮದಿಂದ ಉತ್ತಮ ಫಲಿತಾಂಶ ಪ್ರಕಟವಾಗಿದೆ ಎಂದರು.
593 ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದು, ಯಾವುದೇ ಸರಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ. ಸರಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. 9 ಅನುದಾನಿತ, 37 ಅನುದಾನ ರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಸತತ ಮೂರು ವರ್ಷ ಶೂನ್ಯ ಫಲಿತಾಂಶ ಪಡೆದರೆ, ಶಾಲೆಯ ಮಾನ್ಯತೆ ರದ್ದುಪಡಿಸುವುದು ಮತ್ತು ಅನುದಾನ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೂ. 21ರಿಂದ ಪೂರಕ ಪರೀಕ್ಷೆ
ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಜೂನ್ 21 ರಿಂದ 28ರ ವರೆಗೆ ಪೂರಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಮೇ 2 ರಿಂದ 10ರ ವರೆಗೆ ಪರೀಕ್ಷಾ ಶುಲ್ಕ ಪಾವತಿಸಿ ಅನ್‌ಲೈನ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಬಹುದು. 200 ರೂ. ದಂಡದ ಜತೆಗೆ ಮೇ 15ರ ವರೆಗೂ ಪರೀಕ್ಷಾ ಶುಲ್ಕ ಪಾವತಿಸ ಬಹುದು.
ನನಗೆ 625 ಅಂಕಗಳು ಬರುತ್ತವೆೆ ಎಂದು ನಂಬಿಕೆಯಿತ್ತು. ಆದರೆ ಮನಸ್ಸಿನಲ್ಲಿ ಆತಂಕವೂ ಇತ್ತು. ಆದರೆ ಈಗ ನಾನು ಅಂದುಕೊಂಡ ಫಲಿತಾಂಶ ಬಂದಿದೆ. ಮುಂದೆ ವೈದ್ಯಳಾಗುವ ಆಸೆಯಿದೆ.
– ನಾಗಾಂಜಲಿ ಪರಮೇಶ್ವರ ನಾಯ್ಕ
ತಂದೆ ವಿಜ್ಞಾನ ಶಿಕ್ಷಕರು, ತಾತ ಕೂಡ 28 ವರ್ಷಗಳ ಕಾಲ ಶಿಕ್ಷಕರಾಗಿದ್ದವರು. ಅವರೆಲ್ಲರ ಆಸೆಯಂತೆ ನಾನು ವೈದಕೀಯ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಅಂದುಕೊಂಡಿದ್ದೇನೆ.
– ಡಿ. ಸೃಜನಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.