ಸ್ಟೆಫನೋಸ್ ಸಿಸಿಪಸ್-ಅಲೆಕ್ಸಾಂಡರ್ ಜ್ವೆರೇವ್ ಸೆಮಿಫೈನಲ್ ಶೋ
Team Udayavani, Jun 10, 2021, 12:57 AM IST
ಪ್ಯಾರಿಸ್ : 5 ಹಾಗೂ 6ನೇ ಶ್ರೇಯಾಂಕದ ಟೆನಿಸಿಗರಾದ ಸ್ಟೆಫನೋಸ್ ಸಿಸಿಪಸ್ ಮತ್ತು ಅಲೆಕ್ಸಾಂಡರ್ ಜ್ವೆರೇವ್ ಗುರುವಾರದ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಮುಖಾಮುಖೀಯಾಗಲಿದ್ದಾರೆ.
ಗ್ರೀಸ್‌ನ ಸಿಸಿಪಸ್ ವಿಶ್ವದ ನಂ.2 ಟೆನಿಸಿಗ ರಶ್ಯದ ಡ್ಯಾನಿಲ್ ಮೆಡ್ವೆಡೇವ್ ಅವರನ್ನು 6-3, 7-6 (7-3), 7-5 ಅಂತರದಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕಳೆದ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸಿಸಿಪಸ್ ಸೇಡು ತೀರಿಸಿಕೊಂಡರು. ಜತೆಗೆ ತಮ್ಮ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ದಾಖಲೆಯನ್ನು 4-0 ಅಂತರಕ್ಕೆ ವಿಸ್ತರಿಸಿದರು.
“ಇದೊಂದು ಕ್ಲೋಸ್ ಮ್ಯಾಚ್ ಆಗಿತ್ತು. ಇಬ್ಬರ ಸರ್ವ್ ಕೂಡ ಉತ್ತಮವಾಗಿತ್ತು. ಆಟದ ತೀವ್ರತೆಯನ್ನು ಕಾಯ್ದುಕೊಂಡು ಬಂದಿರುವುದು ಯಶಸ್ಸಿಗೆ ಕಾರಣ’ ಎಂದು ಸಿಸಿಪಸ್ ಹೇಳಿದರು.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೇವ್ ಸ್ಪೇನಿನ ಅಲೆಕ್ಸಾಂಡ್ರೊ ಡೇವಿಡೊವಿಕ್ ಅವರನ್ನು 6-4, 6-1, 6-1ರಿಂದ ಸುಲಭದಲ್ಲಿ ಮಣಿಸಿದರು. ಜ್ವೆರೇವ್ 1996ರ ಬಳಿಕ ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿದ ಮೊದಲ ಜರ್ಮನ್ ಆಟಗಾರನೆನಿಸಿದರು. ಅಂದು ಮೈಕಲ್ ಸ್ಟಿಕ್ ಉಪಾಂತ್ಯ ಪ್ರವೇಶಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.