ತೀವ್ರ ಸ್ವರೂಪ ಪಡೆದ ಸಾರಿಗೆ ನೌಕರರ ಮುಷ್ಕರ: ಅಧಿಕಾರಿಗಳ ಮನವಿ ಯತ್ನ ವಿಫಲ

ನಿಲ್ದಾಣದಲ್ಲೇ ಆಹಾರ ಸೇವಿಸಿ ಧರಣಿ: ರಸ್ತೆಗಿಳಿಯದ ಬಸ್, ಜನರ ಪರದಾಟ

Team Udayavani, Dec 12, 2020, 7:18 PM IST

bidara-saarige

ಬೀದರ್:  ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಕರೆ ನೀಡಿರುವ ಸಾರಿಗೆ ಮುಷ್ಕರ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಗಡಿ ಜಿಲ್ಲೆ ಬೀದರ್ ನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಸ್ತೆಗೆ ಬಸ್‌ಗಳು ಇಳಿಯದ ಹಿನ್ನಲೆ ಪ್ರಯಾಣಿಕರು ಪರದಾಟ ಮುಂದುವರೆದಿದೆ.

ಮುಷ್ಕರದ ಹಿನ್ನೆಲೆಯಲ್ಲಿ ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಶುಕ್ರವಾರ ಅಧಿಕಾರಿಗಳ ನೋಟಿಸ್ ಬೆದರಿಕೆಗೆ ಹೆದರಿದ್ದ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಅರ್ಧಕ್ಕಿಂತ ಹೆಚ್ಚು ಬಸ್‌ಗಳ ಕಾರ್ಯಾಚರಣೆ ನಡೆದಿತ್ತು. ಶನಿವಾರವೂ ಸಹ ಎನ್‌ಈಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ನೌಕರರ ಮನವೊಲಿಕೆಗೆ ಪ್ರಯತ್ನಿಸಿದರಾದರೂ ಫಲ ಸಿಗಲಿಲ್ಲ. ಬಹುತೇಕ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಷ್ಕರ ನಡೆಸಿದ್ದಾರೆ.

ಬಸ್ ಬಂದ್ ಹಿನ್ನಲೆಯಲ್ಲಿ ಬಸ್‌ಗಳು ನಿಲ್ದಾಣಗಳಲ್ಲೇ ಬೀಡು ಬಿಟ್ಟಿದ್ದರೆ, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಮಾಹಿತಿ ಇಲ್ಲದೇ ನಿಲ್ದಾಣಗಳತ್ತ ಆಗಮಿಸಿದ್ದ ಪ್ರಯಾಣಿಕರು, ಬಸ್‌ಗಳ ಓಡಾಟ ಇಲ್ಲದನ್ನು ಗಮನಿಸಿ ಅನಿವಾರ್ಯವಾಗಿ ವಾಪಸ್ ತೆರಳಬೇಕಾಯಿತು. ಇನ್ನೂ ಮುಷ್ಕರ ನಿರತ ಸಾರಿಗೆ ನೌಕರರು ನಿಲ್ದಾಣದ ಮುಖ್ಯ ಗೇಟ್‌ಗಳನ್ನು ಬಂದ್ ಮಾಡಿ ಪೆಂಡಾಲ್ ಹಾಕಿ ಧರಣಿ ಕುಳಿತಿದ್ದು, ಮಧ್ಯಾಹ್ನದ ವೇಳೆಗೆ ಆವರಣದಲ್ಲೇ ಅಡುಗೆ ಸಿದ್ಧಪಡಿಸಿ ಸೇವನೆ ಮಾಡುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಪ್ರತಿಭಟನೆಯಲ್ಲಿ ಯಾವುದೇ ದೇಶವಿರೋಧಿ ಶಕ್ತಿಗಳು ಸೇರಿಕೊಂಡಿಲ್ಲ: ಕಿಸಾನ್ ಯೂನಿಯನ್

ಸಿಬ್ಬಂದಿಗಳ ಧರಣಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಸ್ವಾಮಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಮತ್ತು ಸರ್ಕಾರಿ-ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಪಾಟೀಲ ಮತ್ತಿತರರು ಭೇಟಿ ನೀಡಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುಂದುವರಿದ ಪ್ರತಿಭಟನೆ: ಕೃಷಿ ಕಾಯ್ದೆಯಿಂದ ರೈತರಿಗೆ ಹೊಸ ಮಾರುಕಟ್ಟೆ, ತಂತ್ರಜ್ಞಾನ ಲಭ್ಯ

ಸಿಬ್ಬಂದಿ ಒತ್ತಡ ಹಾಕಿಲ್ಲ:

ಬೀದರ್ ಜಿಲ್ಲೆಯಲ್ಲಿ ನಿತ್ಯ 475 ಬಸ್‌ಗಳ ಕಾರ್ಯಾಚರಣೆ ಇದ್ದು, ಶನಿವಾರ ಕೇವಲ 46 ಬಸ್‌ಗಳು ಮಾತ್ರ ಓಡಾಡಿವೆ. ಔರಾದ್ ನಿಂದ ದೇಗಲೂರಿಗೆ ಬಸ್ ಕಾರ್ಯಾಚರಣೆ ನಡೆಸಿದ್ದ ಔರಾದ ಘಟಕದ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಲಕನಿಗೆ ನೌಕರರು ಯಾವುದೇ ರೀತಿಯ ಒತ್ತಡ ಹಾಕಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಈ ಘಟನೆ ನಡೆದಿದೆ.

 ಸಿ.ಎಸ್ ಫುಲೇಕರ್

ಎನ್‌ಈಕೆಆರ್‌ಟಿಸಿ ಡಿಸಿ, ಬೀದರ್

25 ಸಾವಿರ ಸಹಾಯ ಧನ

ಮಹಾರಾಷ್ಟ್ರದ ದೇಗಲೂರಿನಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಹೃದಯಾಘಾತದಿಂದ ಔರಾದ ಘಟಕದ ಬಸ್ ಚಾಲಕ ಮಕ್ಬೂಲ್ ಚಾಂದ್ ಮೃತಪಟ್ಟಿರುವ ಘಟನೆ ನೋವಿನ ಸಂಗತಿ. ಚಾಲಕನ ಕುಟುಂಬಕ್ಕೆ ವ್ಯೆಯಕ್ತಿಕವಾಗಿ 25 ಸಾವಿರ ರೂ. ಸಹಾಯ ಧನ ನೀಡುತ್ತೇನೆ ಮತ್ತು ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ಮಂಜೂರಾತಿಗೆ ಪ್ರಯತ್ನಿಸುತ್ತೇನೆ.

ಅರವಿಂದ ಅರಳಿ

ಎಂಎಲ್‌ಸಿ, ಬೀದರ್

ಇದನ್ನೂ ಓದಿ: ಅಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲಸಕ್ಕೆ ಹಾಜರಾದ ಬಸ್ ಚಾಲಕ ಹೃದಯಾಘಾತದಿಂದ ಸಾವು

ಟಾಪ್ ನ್ಯೂಸ್

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.