ಉಕ್ರೇನ್ ನಿಂದ ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿದ ಚಾಮರಾಜನಗರದ ವಿದ್ಯಾರ್ಥಿ ಸಿದ್ಧೇಶ್
Team Udayavani, Mar 2, 2022, 8:02 PM IST
ಚಾಮರಾಜನಗರ: ರಷ್ಯಾ ಆಕ್ರಮಣಕ್ಕೊಳಗಾಗಿರುವ ಉಕ್ರೇನ್‌ನಲ್ಲಿದ್ದ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳ ಪೈಕಿ, ಒಡೆಯರಪಾಳ್ಯದ ಸಿದ್ದೇಶ್ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ. ಇಬ್ಬರು ಹಂಗರಿ ದೇಶ ತಲುಪಿದ್ದು, ಇನ್ನೋರ್ವ ವಿದ್ಯಾರ್ಥಿನಿ ಉಕ್ರೇನ್‌ನ ಖಾರ್ಕಿವ್‌ನ ಬಂಕರ್‌ನಲ್ಲಿದ್ದಾರೆ.
ಹಂಗರಿಯ ಬುಡಾಪೆಸ್‌ಟ್ ತಲುಪಿದ್ದ ಸಿದ್ದೇಶ್ ಮಂಗಳವಾರ ಹೊರಟು, ಅಲ್ಲಿಂದ ಬುಧವಾರ ಬೆಳಿಗ್ಗೆ ನವದೆಹಲಿ ತಲುಪಿದ್ದು, ಸಂಜೆ 7 ಗಂಟೆಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಸಿದ್ಧೇಶ್ ಅವರನ್ನು ಅವರ ತಂದೆ ನಾಗಭೂಷಣ್, ಜನಾಶ್ರಯ ಟ್ರಸ್‌ಟ್ ನ ಅಧ್ಯಕ್ಷ ಹನೂರು ಬಿಜೆಪಿ ಮುಖಂಡ ವೆಂಕಟೇಶ್ ಅವರು ಬರಮಾಡಿಕೊಂಡರು.
ಹನೂರಿನ ಪತ್ರಕರ್ತ ರವಿ ಅವರ ಪುತ್ರಿ ಸ್ವಾತಿ ಹಂಗರಿ ರಾಜಧಾನಿ ಬುಡಾಪೆಸ್‌ಟ್ ತಲುಪಿದ್ದು ಸುರಕ್ಷಿತವಾಗಿದ್ದೇನೆ ಎಂದು ಮನೆಯವರಿಗೆ ತಿಳಿಸಿದ್ದಾರೆ. ಕೊಳ್ಳೇಗಾಲದ ಭೂಮಿಕಾ ರೈಲಿನಲ್ಲಿ ಹಂಗರಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ : ಹುಚ್ಚುನಾಯಿ ದಾಳಿಗೆ 50ಕ್ಕೂ ಹೆಚ್ಚು ಮಂದಿಗೆ ಗಾಯ : ಹುಣಸೂರಿನಲ್ಲಿ ನಡೆದ ಘಟನೆ
ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿಯ ಕಾವ್ಯಾ ಮಾತ್ರ ಉಕ್ರೇನಿನ ಖಾರ್ಕಿವ್ ನಗರದಲ್ಲಿ ಬಂಕರ್‌ನಲ್ಲಿದ್ದಾರೆ. ಖಾರ್ಕಿವ್‌ನಲ್ಲಿ ಮಂಗಳವಾರ ಮೃತಪಟ್ಟ ನವೀನ್ ಕಾವ್ಯಾಳ ಸಹಪಾಠಿ ಎಂದು ಕುಟುಂಬದವರು ತಿಳಿಸಿದ್ದಾರೆ. ಆ ಘಟನೆಯಿಂದ ಕಾವ್ಯಾ ಮನೆಯವರು ಆತಂಕಗೊಂಡಿದ್ದಾರೆ. ಕಾವ್ಯಾ ಬಂಕರ್‌ನಲ್ಲಿದ್ದೇನೆ ಮೆಸೇಜ್ ಮಾಡಿದ್ದಾಳೆ. ಬಂಕ್‌ನಿಂದ ಹೊರ ಹೋಗಲಾಗುತ್ತಿಲ್ಲ. ಊಟ ತಿಂಡಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ಕಾವ್ಯಾ ತಿಳಿಸಿದ್ದಾಳೆ ಎಂದು ಕುಟುಂಬದವರು ಹೇಳಿದರು.
ಹನೂರಿನ ಸ್ವಾತಿ ಅವರ ತಂದೆ ಪತ್ರಕರ್ತರಾಗಿದ್ದು ಅವರ ಮನೆಗೆ ಗ್ರೇಡ್ 2 ತಹಶೀಲ್ದಾರ್ ರಾಜಾಕಾಂತ್ ಅವರು ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಅವರು ಮಾತನಾಡಿ, ನಿಮ್ಮ ಮಗಳನ್ನು ಮನೆಗೆ ಕರೆ ತರುವುದು ನಮ್ಮ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಅಗತ್ಯ ಸೂಚನೆ ನೀಡಿದ್ದಾರೆ. ನಿಮ್ಮ ಮಗಳು ಸ್ವಾತಿ ಅವರು ಬುಡಾಪೆಸ್‌ಟ್ ನಗರದಲ್ಲಿ ಸುರಕ್ಷಿತವಾಗಿದ್ದಾರೆ ಎಂದರು.
ಸ್ವಾತಿ ಮತ್ತು ಭೂಮಿಕಾ ಇನ್ನೆರಡು ದಿನಗಳಲ್ಲಿ ಭಾರತ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ
ಹೃದಯಾಘಾತದಿಂದ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ನಿಧನ
Karnataka BJP; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ: ಕೇಂದ್ರ ಸಚಿವ ಚೌಹಾಣ್
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
MUST WATCH
ಹೊಸ ಸೇರ್ಪಡೆ
Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ
Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ
Blue City Of Blue Color:ಇದು ಭಾರತದಲ್ಲಿರುವ ಜಗತ್ತಿನ ಏಕೈಕ ನೀಲಿ ನಗರ! ಏನಿದರ ವಿಶೇಷತೆ
ಹೃದಯಾಘಾತದಿಂದ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ನಿಧನ
Karnataka BJP; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ: ಕೇಂದ್ರ ಸಚಿವ ಚೌಹಾಣ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.