Student Stipend, Reward: “ಕಲಿಕೆ ಹಂತದಲ್ಲೇ ಉದ್ಯಮಶೀಲತೆ ಮೈಗೂಡಿಸಿಕೊಳ್ಳಿ’

ಜಿಎಸ್‌ಬಿ ಹಿತರಕ್ಷಣ ವೇದಿಕೆಯ ಪ್ರತಿಭಾ ಪುರಸ್ಕಾರ ಸಮಾರೋಪದಲ್ಲಿ ಪ್ರತೀಕ್ಷಾ ಪೈ

Team Udayavani, Aug 27, 2024, 1:04 AM IST

09290522GSB-VIDYAPOSHAK

ಉಡುಪಿ: ಉದ್ಯಮ ಕ್ಷೇತ್ರ ದ ಸಮಸ್ಯೆ ಮತ್ತು ಸವಾಲುಗಳಿಗೆ ಎದೆಗುಂದಬಾರದು. ಶಿಕ್ಷಣದ ಬಳಿಕ ಕೈ ತುಂಬಾ ಸಂಬಳ ಬರುವ ಉದ್ಯೋಗಗಳನ್ನಷ್ಟೇ ಅಪೇಕ್ಷೆ ಪಡದೆ, ಕಲಿಕೆಯ ಹಂತದಲ್ಲೇ ನೂರಾರು ಮಂದಿಗೆ ಉದ್ಯೋಗ ನೀಡುವ ಉದ್ಯಮದತ್ತ ಆಸಕ್ತಿ ವಹಿಸಿ ಯಶಸ್ಸು ಸಾಧಿಸಬೇಕು ಎಂದು ಗ್ಲೋಬಲ್‌ ಸಾರಸ್ವತ್‌ ಚೇಂಬರ್‌ ಆಫ್ ಎಂಟರ್‌ಪ್ರೈನರ್ ನಿರ್ದೇಶಕಿ, ಲೆಕ್ಕ ಪರಿಶೋಧಕಿ ಪ್ರತೀಕ್ಷಾ ಪೈ ನಾಯಕ್‌ ಹೇಳಿದರು.

ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ ನೇತೃತ್ವದಲ್ಲಿ, ಮುದರಂಗಡಿ ಸಮರ್ಪಣ ಚಾರಿಟೆಬಲ್‌ ಟ್ರಸ್ಟ್‌ ಸಹ ಯೋಗದಲ್ಲಿ ಅಮೃತ್‌ ಗಾರ್ಡನ್‌ನಲ್ಲಿ ಜರಗಿದ ವಿದ್ಯಾಪೋಷಕ್‌ ನಿಧಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಗ್ಲೋಬಲ್‌ ಸಾರಸ್ವತ್‌ ಚೇಂಬರ್‌ ಆಫ್ ಎಂಟರ್‌ಪ್ರೈನರ್ ಆಯೋಜನೆ ಯಲ್ಲಿ ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ ಮತ್ತು ತ್ರಿಶಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಥಮ ಹಂತದಲ್ಲಿ 25 ಮಂದಿ ಜಿಎಸ್‌ಬಿ ಯುವಜನರಿಗೆ ಉದ್ಯ ಮಶೀಲತೆಯ ಯೋಜನೆ, ಉತ್ಪಾದನೆ, ವೆಂಚರ್‌ ಕ್ಯಾಪಿಟಲ್‌, ಸಾಲ ಸೌಲಭ್ಯ ಮತ್ತು ಬ್ರಾಂಡಿಂಗ್‌ ಬಗ್ಗೆ ಉಚಿತ ತರಬೇತಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಅನಂತ ವೈದಿಕ ಕೇಂದ್ರದ ಪ್ರವರ್ತಕ ರಾಮಚಂದ್ರ ಅನಂತ ಭಟ್‌ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರಯುತ ನಡವಳಿಕೆ, ಗುರು ಹಿರಿಯರಲ್ಲಿ ಶ್ರದ್ಧಾಭಕ್ತಿ, ಸಾಮಾಜಿಕ ಹೊಣೆಗಾರಿಕೆ ಅರಿತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು. ಮಂಗಳೂರಿನ ಕಾಮತ್‌ ವೆಂಚರ್ಸ್‌ ಸಂಸ್ಥಾಪಕ ಗುರುದತ್ತ ಕಾಮತ್‌, ಆಂಧ್ರ ಪ್ರದೇಶ ನಂದ್ಯಾಲದ ಜಿಎಸ್‌ಬಿ ಸಮಾಜದ ಸಂಚಾಲಕ ರಘುವೀರ್‌ ಶೆಣೈ ನಂದ್ಯಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪ್ರೋತ್ಸಾಹಧನ ವಿತರಣೆ
ಜಿಎಸ್‌ಬಿ ಸಮಾಜದ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ, ಶೈಕ್ಷಣಿಕದತ್ತು ಸ್ವೀಕಾರ ಯೋಜನೆಯ ಶೈಕ್ಷಣಿಕ ಶುಲ್ಕ ಪಾವತಿ, ಕುಟುಂಬ ಚೈತನ್ಯ ಯೋಜ ನೆಯಡಿ ಆಪದ್ಧನ ವಿತರಿಸಲಾಯಿತು. ಸಾಣೂರು ಸ.ಪ.ಪೂರ್ವ ಕಾಲೇಜಿನ ಆರ್ಥಿಕವಾಗಿ ಹಿಂದುಳಿದ ಸರ್ವ ಜನಾಂಗದ 20 ಮಂದಿ ವಿದ್ಯಾರ್ಥಿಗಳಿಗೆ ಕಲಿಕಾ ಉತ್ತೇಜನ ಪ್ರೋತ್ಸಾಹಧನ ನೀಡಲಾಯಿತು.

ಅಮ್ಚಿ ಮೆಲ್ಬೋರ್ನ್ ಕೊಂಕಣಿ ಅಸೋಸಿಯೇಶನ್‌ ವತಿಯಿಂದ ಜೀವನಾವಶ್ಯಕ ವಸ್ತುಗಳ ಕಿಟ್‌ ನೀಡಲಾಯಿತು. ದಿ| ಪಡುಬಿದ್ರಿ ದೇವಿದಾಸ ಶರ್ಮ ದತ್ತಿನಿಧಿಯಿಂದ ಎಸೆಸ್ಸಲ್ಸಿಯಲ್ಲಿ ಸಂಸ್ಕೃತದಲ್ಲಿ 125 ಪೂರ್ಣ ಅಂಕಗಳನ್ನು ಪಡೆದ ಕಾರ್ಕಳ ಶ್ರೀ ಭುವನೇಂದ್ರ ಪ್ರೌಢಶಾಲೆಯ 10 ಮಂದಿಗೆ ಗೌರವ ನಗದು ಪುರಸ್ಕಾರ, ಪರೀಕ್ಷೆಗಳಲ್ಲಿ ಹೆಚ್ಚಿನ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಉಡುಪಿ, ದ.ಕ ಜಿಲ್ಲೆಯ  2 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

ಸಾರಸ್ವತ್‌ ಹೆರಿಟೇಜ್‌ ಗ್ರಂಥದ ಸಂಪಾದಕಿ ಬಸ್ರೂರಿನ ಆಂಗ್ಲ ಭಾಷಾ ಉಪನ್ಯಾಸಕಿ ಸುಮತಿ ಶೆಣೈ, ವಿಶೇಷ ಸಾಧನೆಗೈದ ಮಂಗಳೂರಿನ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಸುರೇಶ್‌ ಶೆಣೈ ಅವರಿಗೆ ವಿಶೇಷ ಗೌರವ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು. ದುಬಾೖಯ ಎನ್‌ಆರ್‌ಐ ಮನಿ ಕ್ಲಿನಿಕ್‌ ಸಂಸ್ಥಾಪಕ ಡಾ| ಚಂದ್ರಕಾಂತ ಭಟ್‌, ಮಂಗಳೂರು ಸಂಕಲ್ಪ ಗ್ರೂಪ್‌ನ ಉಪೇಂದ್ರ ಕಾಮತ್‌, ಅಮ್ಚಿಮೆಲ್ಬೋರ್ನ್ ಕೊಂಕಣಿ ಅಸೋಸಿ ಯೇಶನ್‌ನ ಆಸ್ಟ್ರೇಲಿಯಾ ಪ್ರತಿನಿಧಿ ಅಜಿತ್‌ ಪೈ, ಉದ್ಯಮಿ ಪ್ರಕಾಶ್‌ ಪ್ರಭು ಶಿವಮೊಗ್ಗ, ವಸಂತ ಆಚಾರ್ಯ ಕುಂದಾಪುರ, ವಿದ್ಯಾ ಪೋಷಕ ವಿದ್ಯಾ ರ್ಥಿವೇತನ ನಿಧಿ ಅಧ್ಯಕ್ಷ ಸಿಎ ಎಸ್‌.ಎಸ್‌ ನಾಯಕ್‌, ಸಂಯೋಜಕ ವಿಜಯ ಕುಮಾರ್‌ ಶೆಣೈ, ಸಹ ಸಂಯೋಜಕ ಸುಬ್ರಹ್ಮಣ್ಯ ಪ್ರಭು ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ ಸಂಚಾಲಕ ಆರ್‌. ವಿವೇಕಾನಂದ ಶೆಣೈ ಅವರು ಸ್ವಾಗತಿಸಿದರು. ಅಧ್ಯಕ್ಷ ಜಿ. ಸತೀಶ್‌ ಹೆಗ್ಡೆ ಕೋಟ ವಂದಿಸಿ, ಪ್ರ. ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌ ನಿರೂಪಿಸಿದರು.

ಗೃಹ ನಿರ್ಮಾಣ ಯೋಜನೆ
ಆರ್ಥಿಕವಾಗಿ ಹಿಂದುಳಿದ, ಅನಾ ರೋಗ್ಯ ಪೀಡಿತರಾದ ಸಾೖಬ್ರಕಟ್ಟೆ ಕಾಜ ರಳ್ಳಿ ನಾಗೇಶ್‌ ಪ್ರಭು ಅವರಿಗೆ ಮನೆ ನಿರ್ಮಿಸುವ ಯೋಜನೆಗೆ 1 ಲಕ್ಷ ರೂ. ಆರಂಭಿಕ ನೆರವು ಪ್ರಕಟಿಸಲಾಯಿತು. ಗುರುದತ್‌ ಕಾಮತ್‌ ಮಂಗಳೂರು, ಡಾ| ಚಂದ್ರಕಾಂತ್‌ ಭಟ್‌, ರಾಜೇಂದ್ರ ಶೆಣೈ ಮಂಗಳೂರು, ವೈಜಯಂತಿ ಕಾಮತ್‌, ರಾಧಾಕೃಷ್ಣ ನಾಯಕ್‌ ಕೋಟ, ರಘುವೀರ್‌ ಶೆಣೈ ದೇಣಿಗೆ ಘೋಷಿಸಿ ಒಟ್ಟು 5 ಲಕ್ಷ ರೂ. ಮನೆ ನಿರ್ಮಾಣಕ್ಕೆ ನೀಡಿದರು.

ಟಾಪ್ ನ್ಯೂಸ್

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DOOMAKETHU

Space Wonder: ಸೆ.27 ಸೂರ್ಯ, ಅ.12ಕ್ಕೆ ಭೂಮಿಗೆ ಸಮೀಪಿಸುವ ಧೂಮಕೇತು

Cylinder

Server Problem: ಗೃಹಬಳಕೆ ಅಡುಗೆ ಅನಿಲ ಪೂರೈಕೆ ವ್ಯತ್ಯಯ

Kapu-Police-Station

Manipura: ಎರಡು ಗುಂಪುಗಳ ನಡುವೆ ಗಲಾಟೆ; ಪ್ರಕರಣ ದಾಖಲು

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-yellapur

Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

police

Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.