ಅಂತರ್ಜಾಲದ ದಾಸ್ಯದಿಂದ ಮುಕ್ತರಾಗದ ವಿದ್ಯಾರ್ಥಿಗಳು
Team Udayavani, Oct 7, 2022, 6:00 AM IST
ಹೆತ್ತವರು ಮಕ್ಕಳೊಂದಿಗೆ ಸ್ವಲ್ಪ ಹೊತ್ತಾದರೂ ಮುಕ್ತವಾಗಿ ಮಾತನಾಡಬೇಕು. ಮಕ್ಕಳು ತಮ್ಮೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುವ ಸ್ವಾತಂತ್ರ್ಯ ಹಾಗೂ ಪ್ರೀತಿ ಅವರಿಗೆ ಕೊಡಬೇಕು. ಒಮ್ಮೆಲೇ ಫೋನ್ ಕಿತ್ತುಕೊಂಡು ಇಡುವುದು, ಹೊಡೆದು, ಬಡಿದು ಬುದ್ಧಿ ಹೇಳುವುದು ಅಷ್ಟು ಉತ್ತಮವಾದ ಕ್ರಮವಲ್ಲ. ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯವೆಂದು ಹೇಳುವಂತೆ ಸ್ಮಾರ್ಟ್ ಫೋನ್ ಬಳಕೆಯ ಕುರಿತ ಶಿಕ್ಷಣವೂ ಅತ್ಯಗತ್ಯ. ಹೈಸ್ಕೂಲ್ ಪ್ರವೇಶಿಸುವ ಮುನ್ನವೇ ಸ್ಮಾರ್ಟ್‌ಫೋನ್‌ನಲ್ಲಿ ಅವಿತಿರುವ ಅಪಾಯಗಳ ಕುರಿತ ಜಾಗೃತಿಯನ್ನು ಮಕ್ಕಳಲ್ಲಿ ಮೂಡಿಸಬೇಕು. ಹೆತ್ತವರ ಸಮ್ಮುಖದಲ್ಲಿ ಮಾತ್ರವೇ ಮೊಬೈಲ್ ಬಳಸಲು ಅವಕಾಶ ಕೊಡಬೇಕು. ಅಪ್ರಾಪ್ತ ವಯಸ್ಕರು ಜಾಲತಾಣಗಳಲ್ಲಿ ಖಾತೆ ತೆರೆಯದಂತೆ ಎಚ್ಚರವಹಿಸಬೇಕು. ಮಕ್ಕಳಿಗೆ ಸ್ವಂತವಾಗಿ ಸ್ಮಾರ್ಟ್ ಫೋನ್ ಕೊಡಿಸದಿರುವುದು ಉತ್ತಮ.
ಕೊರೊನಾವನ್ನು ದೂರುವುದಕ್ಕೂ ಒಂದು ಮಿತಿಯಿದೆ ಅಲ್ಲವೇ? ಆದರೆ ಶಿಕ್ಷಕರು ಅನುಭವಿಸುತ್ತಿರುವ ಇತ್ತೀಚಿನ ಶೈಕ್ಷಣಿಕ ಸವಾಲುಗಳಿಗೆ ಕೊರೊನಾವೇ ಕಾರಣ. ಎರಡು ವರ್ಷಗಳ ಕಾಲ ಶಾಲೆಯಿಂದ ದೂರವಿದ್ದು ಮನೆಯಲ್ಲೇ ಆನ್‌ಲೈನ್ ಮೂಲಕ ಪಾಠ ಕೇಳಿದ ವಿದ್ಯಾರ್ಥಿಗಳು ಲಾಕ್‌ಡೌನ್ ತೆರವಾದರೂ ಮತ್ತೆಂದೂ ಆಫ್ಲೈನ್ ಆಗಲೇ ಇಲ್ಲ. ತಡರಾತ್ರಿಯವರೆಗೂ ಬೆಳಗಿನ ಜಾವದ ವರೆಗೂ ಆನ್‌ಲೈನ್‌ನಲ್ಲೇ ಇರುವ ವಿದ್ಯಾರ್ಥಿಗಳು ಅಂತ ರ್ಜಾಲದ ಅನಂತ ಸಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಸಿ ದರು. ಹಳ್ಳಿ ಮೂಲೆಯ ಮಕ್ಕಳೂ ಕೂಡಾ ಸ್ನಾಪ್ ಚ್ಯಾಟ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹೀಗೆ ತಾವೆಂದೂ ಕಂಡು ಕೇಳರಿಯದ ಜಾಲತಾಣಗಳ ಮಾಯಾವಲಯದಲ್ಲಿ ವಿಹರಿಸಲು ಪ್ರಾರಂಭಿಸಿದ್ದಾರೆ.
ಮಕ್ಕಳು ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ನಿಜ. ಆದರೆ ಇದು ಧನಾತ್ಮಕವಾಗಿ ಬಳಕೆ ಯಾಗುತ್ತಿದೆಯೇ ಎಂಬುದೇ ದೊಡ್ಡ ಪ್ರಶ್ನೆ. ಕೊರೊನಾ ಕಾಲದ ಆನ್‌ಲೈನ್ ಪಾಠದ ನೆಪವೊಡ್ಡಿ ಮಕ್ಕಳು ಹಟ ಮಾಡಿದ್ದಕ್ಕೆ ಅದುವರೆಗೂ ಸ್ಮಾರ್ಟ್ ಫೋನ್ ಬಳಸದೇ ಸಾಮಾನ್ಯ ಫೋನ್ ಬಳಸುತ್ತಿ ದ್ದವರು ಹಣಹೊಂದಿಸಿ ಸ್ಮಾರ್ಟ್ ಫೋನ್ ಖರೀದಿಸಿಕೊಟ್ಟರು. ಮನೆಗೆ ಒಂದೋ ಎರಡೋ ಇದ್ದ ಸ್ಮಾರ್ಟ್ ಫೋನ್ ಮನೆ ಯವರೆಲ್ಲರಿಗೂ ಒಂದೊಂದು ಎಂಬಷ್ಟು ಸಂಖ್ಯೆಗೆ ಏರಿತು. ಪಾಠಕ್ಕೆ ಸಂಬಂಧಿಸಿದ ವಿಷಯ ಚರ್ಚೆ ಮಾಡಲಿಕ್ಕಿದೆ, ಶಿಕ್ಷಕರು ನೋಟ್ಸ್ ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದ್ದಾರೆ, ನಮ್ಮಲ್ಲೇ ನೋಟ್ಸ್ ಹುಡುಕಿ ಬರೆಯುವಂತೆ ಹೇಳಿದ್ದಾರೆ, ಪ್ರಾಜೆಕ್ಟ್ಗೆ ಸಂಬಂಧಿಸಿದ ಮಾಹಿತಿ ಹುಡುಕಲಿಕ್ಕಿದೆ ಹೀಗೆ ನೂರು ನೆಪ ಹೇಳಿ ಹೆತ್ತವರನ್ನು ನಂಬಿಸಿ ಮಕ್ಕಳು ರಾಜಾ ರೋಷವಾಗಿ ಜಾಲತಾಣಗಳಲ್ಲಿ ವಿಹರಿಸುತ್ತಿದ್ದಾರೆ.
ಲಾಕ್‌ಡೌನ್ ತೆರವಾಗಿ ನೇರ ತರಗತಿಗಳು ಆರಂಭವಾದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಸಿದಿರುವುದನ್ನು ಶಿಕ್ಷಕರು ಪñ ೆ¤ಹಚ್ಚಿದರು. ಶಿಕ್ಷಣ ಇಲಾಖೆ ಶಿಕ್ಷಕರ ಅಭಿ ಪ್ರಾಯ ಗಳನ್ನು ಗಂಭೀರವಾಗಿ ಪರಿಗಣಿಸಿತು. ತಜ್ಞರನ್ನು ಸೇರಿಸಿ ಕೊರೊನಾ ದಿಂದುಂಟಾದ ಕಲಿಕಾ ನಷ್ಟವನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಎಂಬ ಉಪಕ್ರಮವನ್ನು ಜಾರಿಗೆ ತಂದಿತು. ಬಹಳಷ್ಟು ಶ್ರಮವಹಿಸಿ ಸಾಮಥ್ಯಾì ಧರಿತವಾಗಿ ತಯಾರಿಸಿದ ಅಭ್ಯಾಸ ಹಾಳೆಗಳ ಚಟು ವಟಿಕೆ ಗಳನ್ನು ಮಾಡು ವಾಗ ವಿದ್ಯಾರ್ಥಿಗಳಲ್ಲಿ ಸುಧಾರಣೆ ಆಗಲೇ ಬೇಕಿತ್ತು.
ಆದರೆ ವಿದ್ಯಾರ್ಥಿಗಳ ಮನಸ್ಸು ಕಲಿಕೆಯಿಂದ ಬಹಳ ದೂರ ಹೋಗಿದೆ. ಅಂತರ್ಜಾಲದ ಸುಳಿಗೆ ಸಿಕ್ಕು ಬಹಳಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿನ ಆಸಕ್ತಿ ಯನ್ನು ಸಂಪೂರ್ಣವಾಗಿ ಕಳೆದುಕೊಂಡಿ¨ªಾರೆ. ಪ್ರೇಮ ಪ್ರಕರಣ ಗಳು ಹಿಂದೆಂದೂ ಇಲ್ಲದಂತೆ ಹೆಚ್ಚಿವೆ. ಜಾಲತಾಣಗಳ ಮುಕ್ತ ಚಾಟಿಂಗ್ ಅವಕಾಶಗಳು ಕ್ಯಾಂಪಸ್ ಪ್ರೀತಿಗೆ ನೀರೆರೆಯುತ್ತಿದೆ. ತರಗತಿಯಲ್ಲಿ ಶರೀರವನ್ನಷ್ಟೇ ಇಟ್ಟು ಮನಸ್ಸನ್ನು ಸಂಪೂರ್ಣ ಹೊರಗಿಟ್ಟಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಬೋಧಿಸುವ ಪಾಠ ಅರ್ಥವಾಗುವುದಾದರೂ ಹೇಗೆ? ಅಪ್ರಾಪ್ತ ವಯಸ್ಸಿನ ಮಕ್ಕಳು ಬೇಕಾಬಿಟ್ಟಿ ಜಾಲ ತಾಣ ಗಳನ್ನು ಬಳಸುವಾಗ, ಗುರುತು-ಪರಿಚಯ ಇಲ್ಲದ ವರ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸುವಾಗ ಅವರು ಹೋಗಿ ತಲುಪಬಹುದಾದ ಭೀಕರ ಜಾಲಗಳ ಸಾಧ್ಯ ತೆಯ ಕುರಿತು ಅವರಿಗರಿವಿರುವುದಿಲ್ಲ. ದಿನಂಪ್ರತಿ ವರದಿ ಯಾಗುವ ಅಪ್ರಾಪ್ತ ಮಕ್ಕಳಿಗೆ ಸಂಬಂಧಿಸಿದ ಸೈಬರ್ ಕ್ರೆçಮ್ ಪ್ರಕರಣಗಳ ಕುರಿತ ಅರಿವು ಅವರಿಗಿಲ್ಲ. ಫೇಕ್ ಅಕೌಂಟ್ (ನಕಲಿ ಖಾತೆ) ಹಾಗೂ ನಕಲಿ ವ್ಯಕ್ತಿಗಳ ಕುರಿತ ಪರಿ ಜ್ಞಾನವೂ ಇಲ್ಲ. ಮಾದಕ ದ್ರವ್ಯ ಜಾಲಕ್ಕೋ, ಸೆಕ್ಸ್ ಜಾಲಕ್ಕೋ ಮುಗ್ಧ ಮಕ್ಕಳು ಸಿಲುಕಬಹುದಾದ ಸಾಧ್ಯತೆ ಗಳು ದಟ್ಟವಾಗಿದೆ. ಪ್ರಪಂಚದಲ್ಲಿ ಎÇÉೆಡೆಯೂ ಮೋಸವೇ ತಾಂಡವ ವಾಡುತ್ತಿರುವಾಗ ಅಮಾಯಕ ಮಕ್ಕಳು ಬಲಿಪಶುಗಳಾಗುವುದು ಎಷ್ಟು ಸುಲಭ!
ಇಲ್ಲಿ ತಪ್ಪಿತಸ್ಥರು ಯಾರು? ವಿದ್ಯಾರ್ಥಿಗಳು ಅಂತರ್ಜಾಲದ ದಾಸರಾಗುವುದಕ್ಕೆ ನಿಜವಾಗಿಯೂ ಹೊಣೆಗಾರರು ಯಾರು? ಆನ್‌ಲೈನ್ ಪಾಠ ಮಾಡುವ ಮೂಲಕ ಮೊಬೈಲ್ ಬಳಕೆಗೆ ನಾಂದಿ ಹಾಡಿದ ಶಿಕ್ಷಕರೇ? ಶಿಕ್ಷಕರು ತಮಗೆ ಗೊತ್ತಿಲ್ಲದ ಆ್ಯಪ್‌ಗ್ಳನ್ನು ಹುಡುಕಿ, ಹೆಣಗಾಡಿ ಆನ್‌ಲೈನ್ ಪಾಠ ಮಾಡುವ ಅನಿವಾರ್ಯತೆ ತಂದಿತ್ತ ಕೊರೊನಾವೇ? ಆನ್‌ಲೈನ್ ಶಿಕ್ಷಣ ಮುಗಿದ ಅನಂತರವೂ ಮಕ್ಕಳಿಗೆ ಬೇಕಾಬಿಟ್ಟಿ ಮೊಬೈಲ್ ಕೊಟ್ಟು, ಕಾಲಕಾಲಕ್ಕೆ ನೆಟ್ ಪ್ಯಾಕ್ ಹಾಕಿಕೊಟ್ಟು, ಮಕ್ಕಳ ಮೇಲೆ ಅತಿಯಾದ ಮೋಹ, ಅಪರಿಮಿತ ನಂಬಿಕೆ ಹೊಂದಿರುವ ಹೆತ್ತವರೇ?
ಹಲವು ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ಚಟವಾಗಿ ಬಿಟ್ಟಿದೆ. ಪಬ್ ಜಿ ಮುಂತಾದ ಆಟಗಳಿಗೆ ದಾಸರಾದ ವರು, ತಮಿಷ್ಟದ ಯೂಟ್ಯೂಬ್ ಚಾನೆಲ್‌ಗಳಿಗೆ ಚಂದಾದಾರರಾಗಿಕೊಂಡು ಅಪ್‌ಲೋಡ್ ಆಗುವ ಪ್ರತೀ ವೀಡಿಯೋವನ್ನೂ ನೋಡುವವರು, ಫೇಸ್‌ಬುಕ್, ವಾಟ್ಸ್ ಆ್ಯಪ್ ಇನ್‌ಸ್ಟಾಗ್ರಾಂ ಮುಂತಾದವುಗಳಲ್ಲಿ ಕಂಡು, ಕೇಳರಿಯದವರೊಂದಿಗೆ ಚಾಟಿಂಗ್‌ನಲ್ಲಿ ಕಳೆಯುವವರು, ತಡರಾತ್ರಿಯವರೆಗೆ ಯಾವ್ಯಾವುದೋ ಜಾಲತಾಣದಲ್ಲಿ ಏನೇನನ್ನೋ ಸರ್ಚ್ ಮಾಡುವವರು ಕಲಿಕೆಯಲ್ಲಿ ಗಮನ ಕೇಂದ್ರೀಕರಿಸುವುದಾದರೂ ಹೇಗೆ?
ಹೆತ್ತವರ ಜವಾಬ್ದಾರಿ: ಶಿಸ್ತಿನ ವ್ಯವಸ್ಥೆ ಇರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಫೋನ್ ತರುವುದಿಲ್ಲ. ಆದರೆ ಮನೆಯಲ್ಲಿ ಅವರು ಫೋನ್ ಬಳಸದಂತೆ ತಡೆಯುವುದು ಶಿಕ್ಷಕರ ಪರಿಧಿಗೆ ಮೀರಿದ್ದು. ಇಲ್ಲಿ ಎಚ್ಚೆತ್ತುಕೊಳ್ಳಬೇಕಾದವರು ಹೆತ್ತವರು. ಮೊದಲನೆ ಯದಾಗಿ ಹೆತ್ತ ವರಿಗೆ ಮಕ್ಕಳೊಂದಿಗೆ ಆಪ್ತ ಸಂಬಂಧ ಹೊಂದಿರಬೇಕು. ಮಕ್ಕಳೊಂದಿಗೆ ಸ್ವಲ್ಪ ಹೊತ್ತಾದರೂ ಮುಕ್ತವಾಗಿ ಮಾತನಾಡಬೇಕು. ಮಕ್ಕಳು ತಮ್ಮೊಂದಿಗೆ ಎಲ್ಲ ವನ್ನೂ ಹಂಚಿಕೊಳ್ಳುವ ಸ್ವಾತಂತ್ರ್ಯ ಹಾಗೂ ಪ್ರೀತಿ ಅವರಿಗೆ ಕೊಡ ಬೇಕು. ಒಮ್ಮೆಲೇ ಫೋನ್ ಕಿತ್ತುಕೊಂಡು ಇಡು ವುದು, ಹೊಡೆದು, ಬಡಿದು ಬುದ್ಧಿ ಹೇಳುವುದು ಅಷ್ಟು ಉತ್ತಮವಾದ ಕ್ರಮವಲ್ಲ. ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯವೆಂದು ಹೇಳುವಂತೆ ಸ್ಮಾರ್ಟ್‌ಫೋನ್ ಬಳಕೆಯ ಕುರಿತ ಶಿಕ್ಷಣವೂ ಅತ್ಯಗತ್ಯ. ಹೈಸ್ಕೂಲ್ ಪ್ರವೇಶಿಸುವ ಮುನ್ನವೇ ಸ್ಮಾರ್ಟ್‌ಫೋನ್‌ನಲ್ಲಿ ಅವಿತಿರುವ ಅಪಾಯಗಳ ಕುರಿತ ಜಾಗೃತಿಯನ್ನು ಮಕ್ಕಳಲ್ಲಿ ಮೂಡಿಸಬೇಕು. ಹೆತ್ತವರ ಸಮ್ಮುಖದಲ್ಲಿ ಮಾತ್ರವೇ ಮೊಬೈಲ್ ಬಳಸಲು ಅವಕಾಶ ಕೊಡಬೇಕು. ಮಕ್ಕಳು ಜಾಲತಾಣಗಳಲ್ಲಿ ಖಾತೆ ತೆರೆಯದಂತೆ ಎಚ್ಚರ ವಹಿಸಬೇಕು. ಮಕ್ಕಳಿಗೆ ಸ್ವಂತವಾಗಿ ಸ್ಮಾರ್ಟ್‌ಫೋನ್ ಕೊಡಿ ಸದಿ ರುವುದು ಉತ್ತಮ. ಈಗಾಗಲೇ ಇದ್ದರೆ ಹೆತ್ತವರಿಗೆ ತಿಳಿಯದ ಪಾಸ್‌ವರ್ಡ್ ಹಾಕಲು ಅವಕಾಶ ಕೊಡದಿರಿ. ಫೋನ್ ಬಳಕೆಗೆ ದಿನದಲ್ಲಿ ಒಂದು ನಿರ್ದಿಷ್ಟ ಅವಧಿ ನಿಶ್ಚ ಯಿಸಿ. ಮಕ್ಕಳು ಮಲಗಲು ಹೋಗುವಾಗ ಫೋನ್ ಹೆತ್ತ ವರಿಗೆ ಒಪ್ಪಿಸಿ ಹೋಗಲು ನಿಷ್ಕರ್ಷಿಸಿ. ನಿಮ್ಮ ಮಕ್ಕಳ ಆನ್‌ಲೈನ್ ಗೆಳೆಯ-ಗೆಳತಿಯರ ಕುರಿತು ತಿಳಿದುಕೊಳ್ಳಿ. (ಅಂತಹ ಗೆಳೆಯರು ಇಲ್ಲದಿರುವುದೇ ಒಳಿತು.) ಮಕ್ಕಳು ಯಾವತ್ತೂ ರಹಸ್ಯ ಫೋನ್ ಕಾಲ್‌ಗಳಲ್ಲಿ ಮುಳುಗಲು ಆಸ್ಪದ ಕೊಡದಿರಿ. ಮಕ್ಕಳು ಕಲಿಕೆಯಲ್ಲಿ ನಿರತರಾಗಿದ್ದಾರೆಂದು ಅವರಷ್ಟಕ್ಕೆ ಬಿಡದೇ ಒಮ್ಮೊಮ್ಮೆ ಅವರ ಅಭ್ಯಾಸ ಕೊಠಡಿಗೆ ಹೋಗಿ ಪರೀಕ್ಷಿಸಿ. ಮಕ್ಕಳಿಗೆ ಬುದ್ಧಿ ಹೇಳಿದರೆ, ಅವರ ತಪ್ಪನ್ನು ತಿದ್ದಿದರೆ ಅವರಿಗೆ ನೋವಾಗುತ್ತದೆಂದು ಸುಮ್ಮ ನಿ ದ್ದರೆ ಮುಂದೊಂದು ದಿನ ಅವರ ಬದುಕು ಹಾಳಾಗಿ ಅವರೂ ಹೆತ್ತವರೂ ನೋವನುಭವಿಸುವ ಸಂದರ್ಭ ಬರಬಹುದು. ಪಾಠ ಬೋಧನೆ ಮಾಡುವುದಷ್ಟೇ ಅಲ್ಲ, ಸ್ಮಾರ್ಟ್ ಫೋನ್ ನೊಳಗೆ ಮಾನಸಿಕವಾಗಿ ಬಂಧಿಯಾಗಿರುವ ಮಕ್ಕ ಳನ್ನು ಬಿಡುಗಡೆ ಗೊಳಿಸಿ ತರಗತಿಯಲ್ಲಿ ಮುಕ್ತ ಮನಸ್ಸಿ ನೊಂದಿಗೆ ಕುಳಿತು ಕಲಿಕೆಯಲ್ಲಿ ನಿರತರಾಗುವಂತೆ ಮಾಡುವ ಸಂಕೀರ್ಣ ಜವಾಬ್ದಾರಿಯೂ ಶಿಕ್ಷಕರ ಹೆಗಲೇ ರಿದೆ. ಶಿಕ್ಷಕರಿಂದಷ್ಟೇ ವಿದ್ಯಾರ್ಥಿ ಗಳನ್ನು ಈ ಚಟದಿಂದ ಬಿಡಿಸುವುದು ಅಸಾಧ್ಯ ಎನ್ನುವ ಸ್ಥಿತಿ ಕೆಲವು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಇರುವುದರಿಂದ ತಜ್ಞ, ವೃತ್ತಿಪರ ಆಪ್ತಸಮಾ ಲೋಚಕರ ಅಗತ್ಯವೂ ಬೇಕಾಗಬಹುದು.
– ಜೆಸ್ಸಿ ಪಿ.ವಿ., ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.