Subhramanya: 9 ತಿಂಗಳ ಹಿಂದೆ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದನೇ ವಿಕ್ರಂ ಗೌಡ?
ಸುಮಾರು 12 ವರ್ಷಗಳ ಹಿಂದೆ ಸುಬ್ರಹ್ಮಣ್ಯ ಸಮೀಪದ ಮನೆಗಳಿಗೆ ನಕ್ಸಲರು ಭೇಟಿ
Team Udayavani, Nov 20, 2024, 7:38 AM IST
ಸುಬ್ರಹ್ಮಣ್ಯ: ಒಂಬತ್ತು ತಿಂಗಳ ಹಿಂದೆ ಸುಬ್ರಹ್ಮಣ್ಯ ಪ್ರದೇಶದ ಐನೆಕಿದುವಿನಲ್ಲಿ ಎಎನ್‌ಎಫ್ ಎನ್‌ಕೌಂಟರ್‌ನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ನಕ್ಸಲರಲ್ಲಿ ವಿಕ್ರಂ ಗೌಡ ಸಹ ಇದ್ದಿದ್ದನೇ? ಲಭ್ಯ ಮಾಹಿತಿ ಪ್ರಕಾರ ಹೌದು.
2024 ರ ಮಾರ್ಚ್ 23ರಂದು ಅಂದರೆ ಒಂಬತ್ತು ತಿಂಗಳ ಹಿಂದೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಬಳಿಯ ಐನೆಕಿದುವಿನ ಅರಣ್ಯದಂಚಿನ ಮನೆಯೊಂದಕ್ಕೆ ನಾಲ್ಕರಿಂದ ಐವರು ನಕ್ಸಲರು ಭೇಟಿ ನೀಡಿ ದಿನಸಿ ಸಾಮಗ್ರಿ ಪಡೆದು, ಮನೆಯವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿ ತೆರಳಿದ್ದರು ಎಂದು ಹೇಳಲಾಗಿತ್ತು.
ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು, ಎಎನ್‌ಎಫ್ ತಂಡ ನಕ್ಸಲರಿಗಾಗಿ ತೀವ್ರ ಶೋಧ ನಡೆಸಿದ್ದರು. ಆದರೆ ಪೊಲೀಸರು ಬರುವ ಸ್ವಲ್ಪ ಹೊತ್ತಿನ ಮೊದಲು ನಕ್ಸಲರ ತಂಡ ಕಾಡಿನಲ್ಲಿ ಕಣ್ಮರೆಯಾಗಿತ್ತು. ಒಂದುವೇಳೆ ಕೊಂಚ ತಡವಾಗಿದ್ದರೂ ಪೊಲೀಸರಿಗೆ ಮುಖಾಮುಖೀ ಯಾಗುವ ಸಂಭವವಿತ್ತು. ಕೂದಲೆಳೆ ಅಂತರದಲ್ಲಿ ನಕ್ಸಲರು ಪಾರಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲೂ ಮತ್ತೊಂದು ಎನ್‌ಕೌಂಟರ್ ನಡೆಯುವ ಆತಂಕ ಆವರಿಸಿತ್ತು.
ಮತ್ತೆ ಬಂದರೇ?
ಎ. 4ರ ರಾತ್ರಿ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿನ ಅರಣ್ಯದಂಚಿನ ಮನೆಯೊಂದಕ್ಕೆ ನಾಲ್ವರಿಂದ ಆರು ಮಂದಿಯ ನಕ್ಸಲರ ತಂಡ ಭೇಟಿ ನೀಡಿ ಊಟ ಮಾಡಿ, ಸಾಮಗ್ರಿಗಳನ್ನು ಪಡೆದಿತ್ತು ಎನ್ನಲಾಗಿತ್ತು. ವಿಶೇಷ ಎಂದರೆ 2012ರಲ್ಲಿ ಎನ್‌ಕೌಂಟರ್‌ಗೆ ನಕ್ಸಲ್ ಬಲಿಯಾದ ಸ್ಥಳಕ್ಕೆ ಈ ಚೇರು ಗ್ರಾಮ ಅತಿ ಸಮೀಪದ ಪ್ರದೇಶ. ಈ ಎಲ್ಲ ಸಂದರ್ಭದಲ್ಲೂ ತಂಡದ ಸದಸ್ಯರು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸದೇ ಮರೆ ಮಾಚಿ ಇಟ್ಟುಕೊಂಡಿದ್ದರು ಎನ್ನಲಾಗಿತ್ತು.
ಆಗ ಲಭ್ಯವಾದ ಮತ್ತೊಂದು ಮಾಹಿತಿ ಪ್ರಕಾರ ಅದೇ ಮಾರ್ಚ್ 16ರಂದೂ ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜುಮಲೆ ಎಸ್ಟೇಟ್‌ನ ಅಂಗಡಿಯೊಂದಕ್ಕೆ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲರು ಎನ್ನಲಾದ ತಂಡ ಭೇಟಿ ನೀಡಿ ಅಂಗಡಿಯಿಂದ ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಮಾ. 18ರಂದು ಕೂಜುಮಲೆ ಎಸ್ಟೇಟ್‌ಗೆ ಎಎನ್‌ಎಫ್ ತಂಡದವರು ಆಗಮಿಸಿ ಸುತ್ತ ಮುತ್ತಲಿನ ಅರಣ್ಯದಲ್ಲಿ ಶೋಧ ಕಾರ್ಯ ನಡೆಸಿದ್ದರು.
ಈ ಎಲ್ಲ ಸಂದರ್ಭಗಳಲ್ಲೂ ಭೇಟಿ ನೀಡಿದ್ದ ತಂಡದಲ್ಲಿ ವಿಕ್ರಂ ಗೌಡ, ಜಿಷಾ, ಲತಾ ಮುಂಡುಗಾರು, ಸಂತೋಷ್ ಎಂಬುವವರು ಇದ್ದಿದ್ದರು ಎನ್ನಲಾಗಿತ್ತು.
ಸುಮಾರು 12 ವರ್ಷಗಳ ಹಿಂದೆ ಸುಬ್ರಹ್ಮಣ್ಯ ಸಮೀಪದ ಮನೆಗಳಿಗೆ ನಕ್ಸಲರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಅಂದು ಎಎನ್‌ಎಫ್ ತಂಡ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ನಕ್ಸಲರ ತಂಡದ ಸದಸ್ಯನೊಬ್ಬ ಮೃತಪಟ್ಟಿದ್ದ. ಅದಾದ 12 ವರ್ಷಗಳ ಬಳಿಕ ಮಾರ್ಚ್, ಎಪ್ರಿಲ್‌ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮೂರು ಕಡೆಗಳಿಗೆ ನಕ್ಸಲರು ಭೇಟಿ ನೀಡಿದ್ದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿತ್ತು.
2018 ರಲ್ಲಿ ಪ್ರತ್ಯಕ್ಷ
ನಕ್ಸಲರು ಸುಬ್ರಹ್ಮಣ್ಯ ಭಾಗಕ್ಕೆ ಆಗಮಿಸುತ್ತಿದ್ದುದು ಕೊಡಗು ಕಡೆಯಿಂದ ಎನ್ನಲಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಕೊಡಗಿನ ಕೆಲವು ಪ್ರದೇಶಗಳಲ್ಲೂ ಆಗಾಗ ನಕ್ಸಲರ ಚಲನವಲನ ಕಂಡು ಬಂದಿತ್ತು. 2012ರಲ್ಲಿ ಕೊಡಗಿನ ಕಾಲೂರು ಗ್ರಾಮದಲ್ಲಿಯೂ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ಬಳಿಕ 2018ರ ಫೆಬ್ರವರಿಯಲ್ಲಿ ಸುಳ್ಯ ತಾಲೂಕಿನ ಗಡಿ ಪ್ರದೇಶದ ಸಂಪಾಜೆಯ ಗುಡ್ಡೆಗದ್ದೆ ಎಂಬಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದರು ಎನ್ನಲಾಗಿತ್ತು. ಆಗ ಪೊಲೀಸರು ಶೋಧ ನಡೆಸಿದ್ದರೂ ಮಾಹಿತಿ ಸಿಕ್ಕಿರಲಿಲ್ಲ.
ನಿರಂತರ ಶೋಧ ಕಾರ್ಯ
2024 ರ ಮಾ.18 ರ ಬಳಿಕ ಕೂಜಿಮಲೆ, ಸುಬ್ರಹ್ಮಣ್ಯ, ಕಡಬದ ಚೇರು ಭಾಗದಲ್ಲಿ ನಕ್ಸಲ್ ನಿಗ್ರಹ ದಳ (ಎಎನ್‌ಎಫ್) ತನ್ನ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು. ಈ ಭಾಗದ ಜನರಲ್ಲೂ ಧೈರ್ಯ ತುಂಬಿದ್ದಲ್ಲದೇ ಸುಬ್ರಹ್ಮಣ್ಯ ಪ್ರದೇಶದಲ್ಲೇ ಬೀಡುಬಿಟ್ಟಿದ್ದರು. ಈ ಸಂದರ್ಭದಲ್ಲೇ ನಕ್ಸಲರು ಈ ಭಾಗಕ್ಕೆ ಭೇಟಿ ನೀಡಿದ್ದರೂ ಕೇರಳ, ಕೊಡಗು ಭಾಗದಿಂದ ಸುಬ್ರಹ್ಮಣ್ಯಕ್ಕೆ ಆಗಮಿಸಿ ಗುಂಡ್ಯ, ಬೆಳ್ತಂಗಡಿ ಮೂಲಕ ಕಾರ್ಕಳ ಭಾಗದತ್ತ ತೆರಳಿರಬಹುದು ಎಂದು ಅಂದಾಜಿಸಲಾಗಿತ್ತು.
2012ರಲ್ಲಿ ಏನಾಗಿತ್ತು?
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಚೇರು, ಭಾಗ್ಯ, ಎರ್ಮಾಯಿಲ್, ನಡುತೋಟ ಮುಂತಾದ ಕಾಡಂಚಿನ ಮನೆಗಳಿಗೆ 2012ರ ಆಗಸ್ಟ್ ನ ಕೊನೆಯಲ್ಲಿ ನಕ್ಸಲರ ತಂಡ ಭೇಟಿ ನೀಡಿ ಚಹಾ ಕುಡಿದು, ಊಟ ಮಾಡಿ, ಲ್ಯಾಪ್‌ಟಾಪ್ ರೀಚಾರ್ಜ್ ಮಾಡಿ, ಆಹಾರ ಪಡೆದು ತೆರಳಿತ್ತು. ಈ ವೇಳೆ ಎಎನ್‌ಎಫ್‌ಗೆ ಸಮರ್ಪಕ ಮಾಹಿತಿ ಸಿಕ್ಕಿರಲಿಲ್ಲ. ಇದಾದ ಬಳಿಕ ಕುಲ್ಕುಂದದ ಪಳ್ಳಿಗದ್ದೆಯ ಕೆಲವು ಮನೆಗಳಿಗೂ ನಕ್ಸಲರು ಭೇಟಿ ನೀಡಿದ್ದರು ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ಎಎನ್‌ಎಫ್ ತಂಡ ತನ್ನ ಶೋಧ ಕಾರ್ಯಾಚರಣೆಯನ್ನು ಹೆಚ್ಚಿಸಿತ್ತು. ಈ ಮಧ್ಯೆ ಒಮ್ಮೆ ಪಳ್ಳಿಗದ್ದೆ ಕಾಡಿನಲ್ಲಿ ನಕ್ಸಲರು ಹಾಗೂ ಎಎನ್‌ಎಫ್ ತಂಡದ ನಡುವೆ ಗುಂಡಿನ ಚಕಮಕಿಯೂ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿಬಿಸಲೆ ಅರಣ್ಯ ಸಮೀಪದ ಭಾಗಿಮಲೆ ಕಾಡಿನಲ್ಲಿಎಎನ್‌ಎಫ್ ಮತ್ತು ನಕ್ಸಲರ ನಡುವಿನ ಚಕಮಕಿಯಲ್ಲಿ ನಕ್ಸಲ್ ತಂಡದ ಸದಸ್ಯನೊಬ್ಬ ಮೃತಪಟ್ಟಿದ್ದ. ಅಂದು ರಾತ್ರಿ ಅರಣ್ಯ ಪ್ರದೇಶದಿಂದ ಅವನ ಮೃತ ದೇಹವನ್ನು ಹೊರಗೆ ಸಾಗಿಸಿದ್ದು, ಅಲೋಕ್ ಕುಮಾರ್ ಎಎನ್‌ಎಫ್ ಎಸ್‌ಪಿ ಆಗಿದ್ದರು. ಅದಾದ ತರುವಾಯ ನಕ್ಸಲರ ಓಡಾಟ ಅಷ್ಟೊಂದು ಕಂಡು ಬಂದಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.