ಆಲ್ದೂರು ಯುವಕನಿಂದ ಅಮೆರಿಕದಲ್ಲಿ ಯಶಸ್ವಿ ಉಪಗ್ರಹ ಉಡಾವಣೆ
Team Udayavani, Apr 4, 2022, 5:17 PM IST
ಆಲ್ದೂರು : ತನ್ನದೇ ಸ್ವಂತ ಏರೋಸ್ಪೇಸ್ ಕಂಪೆನಿಯನ್ನು ಪ್ರಾರಂಭಿಸಿ ಉಪಗ್ರಹವನ್ನು ತಯಾರಿಸಿ ಅಮೆರಿಕದ ಸ್ಪೆಸೆಕ್ಸ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ದೇಶವೇ ಹೆಮ್ಮೆಪಡುವಂತ ಸಾಧನೆಯನ್ನು ಆಲ್ದೂರಿನ ಯುವಕ ಅವೇಜ್ ಅಹಮದ್ ಮಾಡಿದ್ದಾರೆ. ಆಲ್ದೂರು ಜನತೆ ತಮ್ಮ ಊರಿನ ಯುವಕನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಅವೇಜ್ ಅಹಮದ್ ಅವರ ಸಂಶೋಧನೆಯ ಉಪಗ್ರಹ ಬೇರೆ ಎಲ್ಲಾ ಉಪಗ್ರಹಗಳಿಗಿಂತ ಶೇ.50ಹೆಚ್ಚು ಡೇಟಾವನ್ನು ಬಿಡುಗಡೆಗೊಳಿಸುತ್ತದೆ. ಈ ಉಪಗ್ರಹ ಭೂಮಿಯ ಚಲನವಲನದ
ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತದೆ.
ಇಸ್ರೋದಿಂದಲೇ ತಮ್ಮ ಪ್ರಥಮ ಉಪಗ್ರಹ ಆನಂದ್ ಅನ್ನು ಉಡಾವಣೆ ಮಾಡುವ ಮಹತ್ವಕಾಂಕ್ಷೆ ಅವೇಜ್ ಅವರದಾಗಿತ್ತು. ಆದರೆ ಇಸ್ರೋದಲ್ಲಿ ಉಡಾವಣೆಗೆ ಡೇಟ್ ಸಿಗದ ಕಾರಣ ತಮ್ಮದೇ ನಿರ್ಮಾಣದ ಮತ್ತೂಂದು ಉಪಗ್ರಹ ಶಕುಂತಲಾವನ್ನು ಅಮೆರಿಕಾದ ಸ್ಪೇಸೆಕ್ಸ್ ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.
ಶೀಘ್ರದಲ್ಲೇ ಇಸ್ರೋದಿಂದ ತಮ್ಮ ಮೊದಲ ನಿರ್ಮಾಣದ ಉಪಗ್ರಹವನ್ನು ಉಡಾವಣೆ ಮಾಡುವ ಕನಸು ಶೀಘ್ರದಲ್ಲೇ ನನಸಾಗಲಿದೆ.
ಅವೇಜ್ ಅಹಮದ್ ಆಲ್ದೂರಿನ ರಾಯಲ್ ಮೆಡಿಕಲ್ಸ್ ಮಾಲೀಕ ನದೀಮ್ ಅಹಮದ್ ಅವರ ಪುತ್ರ. ಆಲ್ದೂರಿನ ರೋಸ್ ಬಡ್, ಅಕ್ಷರ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಹಂತದ ಶಿಕ್ಷಣ
ಪಡೆದು ಪ್ರೌಡಶಿಕ್ಷಣವನ್ನು ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಮುಗಿಸಿದರು. ಸಿಇಟಿಯಲ್ಲಿ 477ನೇ ರ್‍ಯಾಂಕ್ ಪಡೆದು ಆರ್.ವಿ. ಕಾಲೇಜಿನಲ್ಲಿ ಸೀಟು ಪಡೆದುಕೊಂಡರು. ಜೆಇಇ ಪರೀಕ್ಷೆಯಲ್ಲಿ 2000 ರ್‍ಯಾಂಕ್ ಪಡೆದು ಭಾರತದ ನಂ.1 ನಿಟ್ ಕಾಲೇಜಿನಲ್ಲಿ ಸೀಟು ಪಡೆದುಕೊಂಡರು. ಭಾರತದ ನಂ.1 ಖಾಸಗಿ ಕಾಲೇಜು ಬಿಟ್ಸ್-ಪಿಲಾನಿ(ಬಿರ್ಲಾ ಇನ್ಸ್‌ಟಿಟ್ಯೂಟ್
ಆಫ್‌ಟೆಕ್ನಾಲಜಿ ಆ್ಯಂಡ್ ಸೈನ್ಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಮುಂದುವರಿಸಿದರು.
ಇದನ್ನೂ ಓದಿ : ಹೊಸಪೇಟೆ-ಗುತ್ತಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ : ಕೇಂದ್ರ ಸಚಿವರಿಗೆ ಮನವಿ ಸಲ್ಲಿಕೆ
ಎಂಎಸ್ಸಿ ಮ್ಯಾಥಮೆಟಿಕ್ಸ್ ಡಿಗ್ರಿ ಪಡೆದು ಹೊರಬಂದ ಪಿಕ್ಸೆಲ್ ಎಂಬ ತನ್ನದೇ ಏರೋಸ್ಪೇಸ್ ಕಂಪೆನಿಯನ್ನು ಪ್ರಾರಂಭಿಸಿದ್ದಾರೆ.
ಬಾಲ್ಯದಿಂದಲೂ ಬ್ಯಾಹ್ಯಾಕಾಶದ ಬಗ್ಗೆ ಕುತೂಹಲ, ಆಸಕ್ತಿ ಬೆಳೆಸಿಕೊಂಡಿದ್ದು ಎಲನ್ ಮಾಸ್ಕ್ನ ಎರೋಸ್ಪೇಸ್ ಕಂಪೆನಿ “ಸ್ಪೆಸೆಕ್ಸ್’ ನಿಂದ ಪ್ರಭಾವಿತರಾದ ಅವೇಜ್ ಭಾರತದಲ್ಲಿಯೂ ಇದೇ
ರೀತಿಯ ಕಂಪೆನಿ ಪ್ರಾರಂಭಿಸಬೇಕೆಂಬ ಹೆಬ್ಬಯಕೆ ಇಟ್ಟಿಕೊಂಡು ಇಂದು ತನ್ನದೇ ಏರೋಸ್ಪೇಸ್ ಕಂಪೆನಿಯನ್ನು ಪ್ರಾಂರಭಿಸುವ ಮೂಲಕ ತಮ್ಮ ಕನಸಿಗೆ ರೆಕ್ಕೆ ಕಟ್ಟಿದ್ದಾರೆ. ತಾವು ನಿರ್ಮಿಸಿದ ಖಾಸಗಿ ಉಪಗ್ರಹವನ್ನು ಅಮೆರಿಕದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.
ನನ್ನ ಮಗ ತಯಾರಿಸಿದ ಪ್ರಥಮ ಖಾಸಗಿ ಉಪಗ್ರಹ ಆನಂದ್ ಅನ್ನು ಇಸ್ರೋದಿಂದಲೇ ಉಡಾವಣೆ ಮಾಡಬೇಕಿತ್ತು. ಆದರೆ ಉಡಾವಣೆಗೆ ಡೇಟ್ ದೊರೆತಿಲ್ಲ. ಖ್ಯಾತ ಉದ್ಯಮಿಯೊಬ್ಬರ ಪ್ರಾಯೋಜಕತ್ವದಲ್ಲಿ ಶಕುಂತಲಾ ಹೆಸರಿನ ಮತ್ತೂಂದು ಉಪಗ್ರಹವನ್ನು ತಯಾರಿಸಿದ್ದು ಅಮೆರಿಕಾದ ಸ್ಪೆಸೆಕ್ಸ್ ನಿಂದ ಅದನ್ನು ಶನಿವಾರ ಅಮೆರಿಕದ ಸ್ಪೆಸೆಕ್ಸ್‌ನಿಂದ ಉಡಾವಣೆ ಮಾಡಿದ್ದು ಯಶಸ್ವಿಯಾಗಿದೆ. ಉಪಗ್ರಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಾಧನೆಗೆ ದೇಶವೇ ಅವನನ್ನು ಕೊಂಡಾಡುತ್ತಿದೆ. ನಮ್ಮ ದೇಶದ ಪ್ರತಿಭೆಗಳಿಗೆ ನಮ್ಮ ದೇಶದಲ್ಲೇ ಪ್ರೋತ್ಸಾಹ ದೊರೆತು ದೇಶದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಬೇಕು.
– ನದೀಮ್ ಅಹಮದ್, ಅವೇಜ್ ಅಹಮದ್ ತಂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.