ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಕೇಳಿದ ಸುಮಲತಾ
Team Udayavani, Apr 17, 2019, 6:30 AM IST
ಮಂಡ್ಯ: ಸೆರಗೊಡ್ಡಿ ಕೇಳು ತ್ತಿದ್ದೇನೆ, ನಿಮ್ಮ ಸ್ವಾಭಿಮಾನದ ಭಿಕ್ಷೆಯನ್ನು ನನಗೆ ಕೊಡಿ…
– ಇದು ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಮಂಡ್ಯ ದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಜನರಲ್ಲಿ ಮನವಿ ಮಾಡಿದ ಪರಿ. ನಾನು ಅಂಬರೀಷ್ ಧರ್ಮಪತ್ನಿ, ನನಗೊಂದು ಅವಕಾಶ ಕೊಟ್ಟು ನೋಡಿ, ನಾನು ಏನೂಂತ ತೋರಿಸುತ್ತೇನೆ ಎನ್ನುವ ಮೂಲಕ ರಾಜಕೀಯ ವಿರೋಧಿಗಳಿಗೆ ಅವರು ಸವಾಲನ್ನೂ ಹಾಕಿದರು.
ಮಂಡ್ಯದಲ್ಲಿ ಗುರುವಾರ ಚುನಾವಣೆ ನಡೆಯ ಲಿರುವ ಹಿನ್ನೆಲೆಯಲ್ಲಿ ಸುಮಲತಾ ಮಂಗಳವಾರ ಮಂಡ್ಯ ದಲ್ಲಿ ಸ್ವಾಭಿಮಾನ ಸಮ್ಮಿಲನ ಬಹಿರಂಗ ಸಮಾವೇಶ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಇದುವರೆಗೆ ಜೆಡಿಎಸ್ ಮುಖಂಡರು ನಡೆಸಿದ್ದ ಎಲ್ಲ ಟೀಕೆಗಳಿಗೂ ಉತ್ತರಿಸಿದರು. ಅಂಬರೀಷ್ ಸಮಾಧಿ ಮೇಲೆ ಪುತ್ರನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಅಂತ್ಯಕ್ರಿಯೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಸುಮಲತಾ ಟೀಕಿಸಿದರು.
ಅಂಬರೀಷ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದದ್ದು ನಾನು ಎಂದು ಪದೇ ಪದೆ ಹೇಳುತ್ತಿದ್ದಾರೆ. ಅದಕ್ಕೂ ಮುನ್ನ ಅಂಬರೀಷ್ ಏನಾಗಿದ್ದರು.
ಮಂಡ್ಯದಲ್ಲಿ ಝೀರೋ ಆಗಿದ್ದರಾ? ಅಂಬರೀಷ್ ಈ ಮಣ್ಣಿನ ಮಗ. ಮೂರು ಬಾರಿ ಸಂಸದರಾಗಿ, ಶಾಸಕರಾಗಿ, ಸಚಿವರಾಗಿ ಮಂಡ್ಯಕ್ಕೆ ಸೇವೆ ಸಲ್ಲಿಸಿ ಜನರ ಹೃದಯ ಗೆದ್ದಿದ್ದರು. ಅವರ ಪಾರ್ಥಿವ ಶರೀರ ಈ ಮಣ್ಣಿಗೆ ಬರುವುದಕ್ಕೆ ಅಂಬರೀಷ್ಗೆ ಯೋಗ್ಯತೆ, ಅರ್ಹತೆ ಇರಲಿಲ್ಲವ ಎಂದು ಪ್ರಶ್ನಿಸಿದರು.
ಕನಗನಮರಡಿ ಸಮೀಪ ಸಂಭವಿಸಿದ ಬಸ್ ದುರಂತವನ್ನು ನೆನಪಿಸಿಕೊಂಡ ಸುಮಲತಾ ಅವರು, ಅಂದು ಅಂಬರೀಷ್ ಅವರು ಆಸ್ಪತ್ರೆಯಲ್ಲಿದ್ದರು. ಅಂದು ಕನಗನಮರಡಿ ಸಮೀಪ ನಾಲೆ ಯೊಂದಕ್ಕೆ ಬಸ್ ಬಿದ್ದು 30 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ದೃಶ್ಯಗಳನ್ನು ನೋಡುತ್ತಲೇ ಅಂಬರೀಷ್ ದುಃಖದಲ್ಲಿ ಮುಳುಗಿದ್ದರು. ನಾವು ಪದೇ ಪದೆ ಟಿವಿ ನೋಡಬೇಡಿ ಎಂದರೂ ಕೇಳಲಿಲ್ಲ. ಆ ದುರಂತದ ನೋವನ್ನು ಒಡಲಲ್ಲಿ ತುಂಬಿಕೊಂಡಿರು ವಾಗಲೇ ಅವರ ಹೃದಯವೂ ಒಡೆದು ಹೋಯಿತು ಎಂದು ಅಂದಿನ ಸನ್ನಿವೇಶವನ್ನು ನೆನೆದು ಸಮಾವೇಶದಲ್ಲಿ ಭಾವುಕರಾಗಿ ಕಣ್ಣೀರಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.