ಸೂಪರ್‌ಮೂನ್ ಸಂಭ್ರಮ; ಚಂಡಮಾರುತದ ಭಯ
Team Udayavani, May 26, 2021, 6:55 AM IST
ಮೇ 26ರಂದು ಹುಣ್ಣಿಮೆ. ಅದೇ ದಿನ ಚಂದ್ರ ಭೂಮಿಗೆ ಸಮೀಪ ಬರುವುದರಿಂದ ಸೂಪರ್ ಮೂನ್. ಈ ಬಾರಿ ಪೂರ್ಣಿಮೆ, ಸೂಪರ್ ಮೂನ್, ಚಂಡಮಾರುತದ ಆಗಮನ ಹೀಗೆ ತ್ರಿವೇಣಿ ಸಂಗಮವಾಗಿದೆ.
ಚಂದ್ರನ ಪಥ ದೀರ್ಘ ವೃತ್ತಾಕಾರ. ಇದು ಒಮ್ಮೊಮ್ಮೆ ಭೂಮಿಗೆ ಹತ್ತಿರವೂ ಒಮ್ಮೊಮ್ಮೆ ದೂರವೂ ಇರುತ್ತದೆ. ಸಮೀಪವಿರುವ ದೂರವನ್ನು ಪೆರಿಜಿ ಎಂದೂ ದೂರದ ದೂರವನ್ನು ಅಪೊಜಿ ಎಂದೂ ಕರೆಯುತ್ತಾರೆ.
ಬುಧವಾರ ದೇಶದ ಪೂರ್ವ ಕರಾ ವಳಿಗೆ “ಯಾಸ್’ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಷ್ಟೂ ಅಲ್ಲದೆ ಈ ದಿನ ಭಾರತದ ಹೆಚ್ಚಿನ ಭಾಗಗಳಿಗೆ ಗೋಚರವಾಗದೆ ಇರುವ ಚಂದ್ರಗ್ರಹಣವೂ ಸಂಭವಿಸಲಿದೆ.
ಇವುಗಳೆಲ್ಲದರ ಪರಿಣಾಮವಾಗಿ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ತೆರೆ (ಭರತ- ಇಳಿತ)ಗಳ ಅಬ್ಬರ ಜೋರಿರಬಹುದು.
ಪ್ರತೀ ಹುಣ್ಣಿಮೆ ಹಾಗೂ ಅಮಾ ವಾಸ್ಯೆಗಳಲ್ಲಿ ಸೂರ್ಯ, ಚಂದ್ರ, ಭೂಮಿ ಇವುಗಳು ಸರಿಸುಮಾರು ನೇರ ವಿರುವುದರಿಂದ ಸಮುದ್ರದ ನೀರಿನ ಮೇಲೆ ಮಾಮೂಲಿಗಿಂತ ಹೆಚ್ಚಿನ ಬಲವುಂಟಾಗಿ ಭರತ-ಇಳಿತಗಳು ಜೋರಾಗಿರುತ್ತವೆ. ಪ್ರತೀ ಹುಣ್ಣಿಮೆ ಯಲ್ಲೂ ಅಮಾವಾಸ್ಯೆ ದಿನದಂದೂ ಗುರುತ್ವಾಕರ್ಷಣ ಬಲ ಹೆಚ್ಚಿಗೆ ಇರುತ್ತದೆ. ಸೂರ್ಯ, ಚಂದ್ರರಿಬ್ಬರ ಬಲವಿದ್ದರೂ ಚಂದ್ರನ ಬಲ ಸಮುದ್ರದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮೂರೂ ಸರಳ ರೇಖೆಯಲ್ಲಿರುವುದರಿಂದ ಗುರುತ್ವಾಕರ್ಷಣೆ ಬಲದಿಂದ ಸಮುದ್ರ ಉಬ್ಬಿದಂತಾಗುತ್ತದೆ. ಸುಮಾರು ಎರಡು ಅಡಿ ನೀರಿನ ಮಟ್ಟ ಹೆಚ್ಚಿರುತ್ತದೆ. ತಿಂಗಳ ಉಳಿದ 28 ದಿನಗಳಲ್ಲಿ ಸಹಜವಾಗಿರುತ್ತದೆ.
ಮೇ 26ರ ಹುಣ್ಣಿಮೆ ಮಾಮೂಲಿ ಹುಣ್ಣಿಮೆ ಗಳಿಗಿಂತ ತುಸು ಮೇಲು. ಗ್ರಹಣದ ಹುಣ್ಣಿಮೆ ದಿನ (ಸೂರ್ಯ, ಚಂದ್ರ, ಭೂಮಿ ನೇರ ಇರುವುದರಿಂದ) ಈ ಭರತ -ಇಳಿತಗಳ ವ್ಯತ್ಯಾಸ ಸ್ವಲ್ಪ ಹೆಚ್ಚೇ ಇರಲಿದೆ.
ಎಲ್ಲೆಲ್ಲಿ ಗೋಚರ?
ಈ ಅಪರೂಪದ ಖಗೋಳ ವಿಸ್ಮಯ ವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಈಶಾನ್ಯ ಭಾರತೀಯರಿಗೆ ಮಾತ್ರವೇ ಲಭಿಸಲಿದೆ. ಈ ಭಾಗದಲ್ಲಿ ಅಪರಾಹ್ನ 3.14ಕ್ಕೆ ಆರಂಭಗೊಳ್ಳಲಿರುವ ಗ್ರಹಣ ಸಂಜೆ 6.23ಕ್ಕೆ ಅಂತ್ಯಗೊಳ್ಳಲಿದೆ. ಏಷ್ಯಾದ ಪೂರ್ವ ಕರಾವಳಿ, ಪೆಸಿಫಿಕ್ ಸಾಗರದ ಮಧ್ಯ ಭಾಗ, ಆಸ್ಟ್ರೇಲಿಯ, ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಗೋಚರವಾಗಲಿದೆ.
ಎಚ್ಚರಿಕೆ ಅಗತ್ಯ
ಇವುಗಳೆಲ್ಲದರ ಜತೆಗೆ ಆ ಕಡೆ ಪೂರ್ವ ಕರಾವಳಿಯಲ್ಲಿ ಪ್ರಬಲ ಚಂಡ ಮಾರುತವೂ ಈ ದಿನ ಅಬ್ಬರಿಸುವುದರಿಂದ ಪಶ್ಚಿಮ ತೀರದಲ್ಲಿ ಕಡಲು, ಹೆಚ್ಚಿನ ಅಲೆಗಳಿಂದ ಭರತ- ಇಳಿತಗಳ ವ್ಯತ್ಯಾಸ ಹೆಚ್ಚಿರಬಹುದು. ಇದು ಈ ದಿನವೇ ಇರಬಹುದು ಅಥವಾ ಆಸುಪಾಸಿನ ದಿನಗಳಲ್ಲೂ ಸಂಭವಿಸಬಹುದು. ಪಶ್ಚಿಮ ಸಮುದ್ರ ತೀರದಲ್ಲೂ ಎಚ್ಚರಿಕೆ ಅಗತ್ಯ.
ರೆಡ್ ಬ್ಲಿಡ್ ಮೂನ್
ಈ ಸೂಪರ್ ಮೂನ್ ಭೂಮಿಗೆ ಅತೀ ಸಮೀಪದ ಸೂಪರ್ ಮೂನ್. ಈ ದಿನ ಚಂದ್ರ, ಭೂಮಿಗೆ ಸುಮಾರು 3,57,462 ಕಿ.ಮೀ. ಅಂತರದಲ್ಲಿ ಬರಲಿದೆ. (ಸರಾಸರಿ ದೂರ 3,84,000 ಕಿ.ಮೀ.). ಈ ವರ್ಷ ಮಾ. 28, ಎ.27ರಂದು ಎರಡು ಸೂಪರ್ ಮೂನ್ ಆಗಿದೆ. ಜೂ. 24ರಂದು ಇನ್ನೊಂದು ಸೂಪರ್ ಮೂನ್ ಆಗಲಿದೆ. ಆದರೆ ಈ ಸೂಪರ್ ಮೂನ್ ಹೆಚ್ಚು ದೊಡ್ಡದಾಗಿ ಕಾಣುತ್ತದೆ. ಸೂಪರ್ ಮೂನ್ ದಿನಗಳಲ್ಲಿ 24 ಅಂಶ ಹೆಚ್ಚು ಪ್ರಭೆಯಿಂದಲೂ, 14 ಅಂಶ ದೊಡ್ಡದಾಗಿಯೂ ಚಂದ್ರ ಗೋಚರಿಸುತ್ತದೆ. ಅಷ್ಟು ಮಾತ್ರವಲ್ಲದೆ ಈ ಬಾರಿಯ ಗ್ರಹಣದ ಸಂದರ್ಭ ಚಂದ್ರ ಕೆಂಪು ಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಹೀಗಾಗಿ ಈ ಚಂದ್ರನನ್ನು ರೆಡ್ ಬ್ಲಿಡ್ ಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಮೂನ್ ಹುಣ್ಣಿಮೆಯ ಚಂದ್ರ ನೋಡಲು ಬಲು ಚೆಂದ.
– ಡಾ| ಎ. ಪಿ. ಭಟ್, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.