ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ಸುರೇಶ್ ಬಾತ್ರಾ ನಿಧನ
Team Udayavani, May 22, 2021, 10:35 PM IST
ಹೊಸದಿಲ್ಲಿ : ವಿರಾಟ್ ಕೊಹ್ಲಿ ಅವರ ಬಾಲ್ಯದ ದಿನಗಳ ಕ್ರಿಕೆಟ್ ಕೋಚ್ ಸುರೇಶ್ ಬಾತ್ರಾ (53) ಇನ್ನಿಲ್ಲ. ಈ ಸುದ್ದಿ ವಿಳಂಬವಾಗಿ ತಿಳಿದು ಬಂದಿದೆ. ಹಿರಿಯ ಪತ್ರಕರ್ತ ವಿಜಯ್ ಲೋಕಪಳ್ಳಿ ಇದನ್ನು ಮಾಧ್ಯಮಗಳಿಗೆ ತಿಳಿಸಿದರು.
ಆರೋಗ್ಯವಾಗಿಯೇ ಇದ್ದ ಸುರೇಶ್ ಬಾತ್ರಾ ಕಳೆದ ಗುರುವಾರ ಬೆಳಗ್ಗೆ ದೇವರ ಪೂಜೆ ಮುಗಿಸಿದ ಬಳಿಕ ದಿಢೀರ್ ಕುಸಿದು ಬಿದ್ದು ಮೃತಪಟ್ಟರೆಂದು ಲೋಕಪಳ್ಳಿ ಮಾಹಿತಿ ನೀಡಿದರು.
ಬಾತ್ರಾ ಮಹತ್ವ ಪಾತ್ರ
ವಿರಾಟ್ ಕೊಹ್ಲಿ ಆರಂಭದ ದಿನಗಳಲ್ಲಿ “ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡೆಮಿ’ಗೆ ಕೋಚಿಂಗ್‌ಗಾಗಿ ಬರುತ್ತಿದ್ದಾಗ ಸುರೇಶ್ ಬಾತ್ರಾ ಅವರೇ ಕೋಚಿಂಗ್ ನೀಡಿದ್ದರು. ಆಗ ಅವರು ರಾಜ್‌ಕುಮಾರ್ ಶರ್ಮ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ವಿರಾಟ್ ಕೊಹ್ಲಿ ಇಂದು ವಿಶ್ವ ದರ್ಜೆಯ ಕ್ರಿಕೆಟಿಗನಾಗಿ ರೂಪುಗೊಳ್ಳುವಲ್ಲಿ ಸುರೇಶ್ ಬಾತ್ರಾ ಅವರ ಪಾಲು ಮಹತ್ವದ್ದಾಗಿದೆ.
ಈ ಸಂದರ್ಭದಲ್ಲಿ ಟ್ವೀಟ್ ಮಾಡಿದ ರಾಜ್‌ಕುಮಾರ್ ಶರ್ಮ, “ನನ್ನ ಕಿರಿಯ ಸಹೋದರನನ್ನು ಕಳೆದುಕೊಂಡೆ. 1985ರಿಂದಲೂ ನನ್ನ ಒಡನಾಡಿಯಾಗಿದ್ದ. ಎಂದು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ :ಕೊಲೆ ಪ್ರಕರಣ: ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಬಂಧನ
ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಮಂದಿ ಕ್ರಿಕೆಟಿಗರನ್ನು ರೂಪುಗೊಳಿಸಿದ ಹಿರಿಮೆ ಸುರೇಶ್ ಬಾತ್ರಾ ಅವರದು. ಇದಕ್ಕೊಂದು ತಾಜಾ ಉದಾಹರಣೆ, 2018ರ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಮನೋಜ್ ಕಾರ್ಲಾ. ಆಸ್ಟ್ರೇಲಿಯ ವಿರುದ್ಧದ ಫೈನಲ್ ಹಣಾಹಣಿಯಲ್ಲಿ ಆರಂಭಕಾರ ಕಾರ್ಲಾ ಅಜೇಯ 101 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.