2023ರ ಮೊದಲ ಸೂರ್ಯಗ್ರಹಣ ಯಾವಾಗ? ಈ ವರ್ಷ ನಭೋಮಂಡಲದಲ್ಲಿ ನಾಲ್ಕು ಗ್ರಹಣ
ಚಂದ್ರಗ್ರಹಣ ಯಾವಾಗ ಸಂಭವಿಸಲಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…
Team Udayavani, Mar 10, 2023, 12:25 PM IST
ನವದೆಹಲಿ: ಸೂರ್ಯ ಮತ್ತು ಚಂದ್ರಗ್ರಹಣ ಸೌರಮಂಡಲದ ಕೌತುಕವಾಗಿದ್ದು, 2022ರ ಅಕ್ಟೋಬರ್ 5ರಂದು ವರ್ಷದ ಕೊನೆಯ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿತ್ತು. ಹೊಸ ವರ್ಷವಾದ 2023ರಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಯಾವಾಗ ಸಂಭವಿಸಲಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…
ಇದನ್ನೂ ಓದಿ:ರಾಜ್ಯದಲ್ಲಿ 12 ಸಾವಿರ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳ ರಚನೆಗೆ ಆದೇಶ
ಗ್ರಹಣಗಳು ಒಂದು ಆಕರ್ಷಕ ನೈಸರ್ಗಿಕ ವಿದ್ಯಮಾನವಾಗಿದ್ದರೂ ಕೂಡಾ ಹಲವು ಸಾಂಪ್ರದಾಯಿಕ ಸಂಸ್ಕೃತಿಗಳಲ್ಲಿ ಇಂದಿಗೂ ಅವು ಮೂಢನಂಬಿಕೆ ಮತ್ತು ಅಪಶಕುನದ ಸಂಬಂಧ ಹೊಂದಿದೆ.
ಮೊದಲ ಸೂರ್ಯಗ್ರಹಣ:
2023ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20ರಂದು ಗೋಚರಿಸಲಿದೆ. ಬೆಳಗ್ಗೆ 7.04 ನಿಮಿಷಕ್ಕೆ ಆರಂಭವಾಗಲಿರುವ ಗ್ರಹಣ ಮಧ್ಯಾಹ್ನ 12.29ಕ್ಕೆ ಗ್ರಹಣ ಮೋಕ್ಷ ಕಾಲವಾಗಿದೆ. ಏಪ್ರಿಲ್ 20ರ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ದಕ್ಷಿಣ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್, ಅಂಟಾರ್ಟಿಕಾದಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ.
ಎರಡನೇ ಸೂರ್ಯಗ್ರಹಣ:
2023ರ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 14ರಂದು ಸಂಭವಿಸಲಿರುವ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಅಮೆರಿಕದ ಓರೆಗಾಂವ್ ನಲ್ಲಿ ಬೆಳಗ್ಗೆ 9.13ಕ್ಕೆ ಆರಂಭಗೊಂಡು, ಮಧ್ಯಾಹ್ನ 12.03ಕ್ಕೆ ಸೂರ್ಯಗ್ರಹಣ ಮೋಕ್ಷಕಾಲವಾಗಿದೆ.
ಮೊದಲ ಚಂದ್ರಗ್ರಹಣ:
2023ರ ಮೇ 5ರಂದು ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಅಂದು ರಾತ್ರಿ 8.45ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಮಧ್ಯರಾತ್ರಿ 1ಗಂಟೆಗೆ ಮೋಕ್ಷಕಾಲವಾಗಿದೆ. ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.
ಎರಡನೇ ಚಂದ್ರಗ್ರಹಣ:
2023ರ ಎರಡನೇ ಚಂದ್ರಗ್ರಹಣವು ಅಕ್ಟೋಬರ್ 28- 29ರಂದು ಸಂಭವಿಸಲಿದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಭಾರತದ ಹಲವೆಡೆ ಚಂದ್ರಗ್ರಹಣ ಗೋಚರಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.