ವರ್ಕಳ ಶಿವಗಿರಿ ಮಠದ ಸ್ವಾಮಿ ಪ್ರಕಾಶಾನಂದ ನಿಧನ : ರಾಷ್ಟ್ರಪತಿ, ಪ್ರಧಾನಿ ಕಂಬನಿ
Team Udayavani, Jul 7, 2021, 7:30 PM IST
ವರ್ಕಳ: ತಿರುವನಂತಪುರ ಜಿಲ್ಲೆಯ ವರ್ಕಳದಲ್ಲಿರುವ ಶಿವಗಿರಿ ಮಠದ ನಿವೃತ್ತ ಮುಖ್ಯಸ್ಥ, ಕೇರಳದ ಹಿರಿಯ ಧಾರ್ಮಿಕ ಮುಖಂಡ ಸ್ವಾಮಿ ಪ್ರಕಾಶಾನಂದ (99) ಬುಧವಾರ ನಿಧನರಾಗಿದ್ದಾರೆ.
ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಚಿಕಿತ್ಸೆಗಾಗಿ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ-ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೇರಿದಂತೆ ಪ್ರಮುಖರು ಪ್ರಕಾಶಾನಂದ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ :ಮೋದಿ ಸಂಪುಟ ಪುನರ್ ರಚನೆ : ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕಂರಂದ್ಲಾಜೆ ಪ್ರಮಾಣ ವಚನ
“ಸ್ವಾಮಿ ಪ್ರಕಾಶಾನಂದ ಅವರು ಜ್ಞಾನ ಮತ್ತು ಧಾರ್ಮಿಕತೆಯ ಪ್ರತೀಕವಾಗಿದ್ದರು. ಅವರ ನಿಧನದಿಂದ ದುಃಖವಾಗಿದೆ’ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಪೂರ್ವಾಶ್ರಮದಲ್ಲಿ ಕುಮಾರನ್ ಎಂಬ ಹೆಸರಿನವರಾಗಿದ್ದ ಅವರು 23ನೇ ವಯಸ್ಸಿನಲ್ಲಿಯೇ ಶ್ರೀ ಸ್ವಾಮಿ ನಾರಾಯಣ ಗುರು ಅವರ ತತ್ವಗಳಿಂದ ಪ್ರೇರಿತರಾಗಿ ಶಿವಗಿರಿ ಮಠಕ್ಕೆ ಸೇರ್ಪಡೆಯಾಗಿದ್ದರು. 35ನೇ ವಯಸ್ಸಿನಲ್ಲಿ ಸ್ವಾಮಿ ಶಂಕರಾನಂದ ಅವರಿಂದ ದೀಕ್ಷೆ ಪಡೆದುಕೊಂಡಿದ್ದರು. ಅವರು ಶ್ರೀ ನಾರಾಯಣ ಧರ್ಮ ಸಂಘಟನಾ ಟ್ರಸ್ಟ್‌ನ ಅಧ್ಯಕ್ಷರಾಗಿ 1995ರಿಂದ 1997ರ ವರೆಗೆ 2006ರಿಂದ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.