ಸಯ್ಯದ್ ಮೋದಿ ಬ್ಯಾಡ್ಮಿಂಟನ್: ಮಾಳವಿಕಾಗೆ ಸೋಲು; ಸಿಂಧು ಚಾಂಪಿಯನ್
Team Udayavani, Jan 24, 2022, 5:10 AM IST
ಲಕ್ನೋ: ಯುವ ಆಟಗಾರ್ತಿ ಮಾಳವಿಕಾ ಬನ್ಸೋಡ್ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿದ ಪಿ.ವಿ. ಸಿಂಧು “ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್’ ವನಿತಾ ಸಿಂಗಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಆದರೆ ಪುರುಷರ ಫೈನಲಿಸ್ಟ್‌ಗಳಿಬ್ಬರಿಗೂ ಕೊರೊನಾ ಕಾಡಿದ್ದರಿಂದ ಪಂದ್ಯವನ್ನೇ ರದ್ದುಗೊಳಿಸಲಾಯಿತು.
ಕೂಟದುದ್ದಕ್ಕೂ ಲವಲವಿಕೆಯ ಪ್ರದರ್ಶನ ನೀಡಿದ ಮಾಳವಿಕಾ ಆಟ ಅನುಭವಿ ಸಿಂಧು ಮುಂದೆ ನಡೆಯಲಿಲ್ಲ. ಸಿಂಧು ಕೇವಲ 35 ನಿಮಿಷಗಳಲ್ಲಿ 21-13, 21-16 ಅಂತರದ ಗೆಲುವು ಸಾಧಿಸಿದರು. ಇದು ಸಿಂಧುಗೆ ಒಲಿದ ದ್ವಿತೀಯ “ಸಯ್ಯದ್ ಮೋದಿ ಬ್ಯಾಡ್ಮಿಂಟನ್’ ಪ್ರಶಸ್ತಿ. ಇದಕ್ಕೂ ಮೊದಲು 2017ರಲ್ಲಿ ಮೊದಲ ಸಲ ಚಾಂಪಿಯನ್ ಆಗಿದ್ದರು.
ಮಿಶ್ರ ಡಬಲ್ಸ್ ಪ್ರಶಸ್ತಿ
ಈ ಕೂಟದಲ್ಲಿ ಭಾರತಕ್ಕೆ ಮಿಶ್ರ ಡಬಲ್ಸ್ ಪ್ರಶಸ್ತಿ ಕೂಡ ಒಲಿಯಿತು. 7ನೇ ಶ್ರೇಯಾಂಕದ ಇಶಾನ್ ಭಟ್ನಾಗರ್-ತನಿಷಾ ಕ್ರಾಸ್ಟೊ ಸೇರಿಕೊಂಡು ಭಾರತದ ಮತ್ತೂಂದು ಜೋಡಿಯಾದ ಟಿ. ನಾಗೇಂದ್ರ ಬಾಬು-ಶ್ರೀವೇದ್ಯಾ ವಿರುದ್ಧ 21-16, 21-12 ಅಂತರದ ಗೆಲುವು ಸಾಧಿಸಿದರು.
ಪುರುಷರ ಫೈನಲ್ ರದ್ದು
ಪುರುಷರ ಫೈನಲ್ ಪಂದ್ಯ ಕೊರೊನಾದಿಂದಾಗಿ ರದ್ದುಗೊಂಡಿತು. ಫೈನಲ್‌ನಲ್ಲಿ ಸೆಣಸಬೇಕಿದ್ದ ಅರ್ನಾಡ್ ಮೆರ್ಕಲ್ ಮತ್ತು ಲುಕಾಸ್ ಕ್ಲೇರ್‌ಬೂಟ್ ಫಲಿತಾಂಶ ಪಾಸಿಟಿವ್ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.