Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ
Team Udayavani, Nov 28, 2024, 3:14 AM IST
ಇಂದೋರ್: “ಸಯ್ಯದ್ ಮುಷ್ತಾಕ್ ಅಲಿ’ ಟಿ20 ಪಂದ್ಯಾವಳಿಯಲ್ಲಿ ಕರ್ನಾಟಕ ಎರಡನೇ ಆಘಾತಕ್ಕೆ ಸಿಲುಕಿದೆ. ಬುಧವಾರದ “ಬಿ’ ವಿಭಾಗದ ಮುಖಾಮುಖಿ ಯಲ್ಲಿ ಸೌರಾಷ್ಟ್ರಕ್ಕೆ 5 ವಿಕೆಟ್‌ಗಳಿಂದ ಶರಣಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 8 ವಿಕೆಟಿಗೆ 171 ರನ್ನುಗಳ ಸವಾಲಿನ ಮೊತ್ತವನ್ನೇ ಪೇರಿಸಿತು. ಆದರೆ ಸೌರಾಷ್ಟ್ರ 18.1 ಓವರ್‌ಗಳಲ್ಲಿ 5 ವಿಕೆಟಿಗೆ 173 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಇದು 3 ಪಂದ್ಯಗಳಲ್ಲಿ ಸೌರಾಷ್ಟ್ರಕ್ಕೆ ಒಲಿದ 2ನೇ ಜಯ. ಕರ್ನಾಟಕ ಕೂಡ 3 ಪಂದ್ಯವಾಡಿದ್ದು, ಒಂದನ್ನಷ್ಟೇ ಜಯಿಸಿದೆ. ಉತ್ತರಾಖಂಡ ವಿರುದ್ಧ 6 ರನ್ನುಗಳಿಂದ ಎಡವಿದ ಅಗರ್ವಾಲ್ ಪಡೆ, ಬಳಿಕ ತ್ರಿಪುರವನ್ನು 5 ವಿಕೆಟ್‌ಗಳಿಂದ ಮಣಿಸಿತ್ತು.
ಆಘಾತಕಾರಿ ಆರಂಭ
ಕರ್ನಾಟಕದ ಆರಂಭ ಆಘಾತಕಾರಿಯಾಗಿತ್ತು. 3.3 ಓವರ್‌ಗಳಲ್ಲಿ 16 ರನ್ನಿಗೆ 3 ವಿಕೆಟ್ ಉರುಳಿತು. ನಾಯಕ ಮಾಯಾಂಕ್ ಅಗರ್ವಾಲ್ (4). ಎಲ್.ಆರ್. ಚೇತನ್ (1) ಮತ್ತು ಸ್ಮರಣ್ ರವಿಚಂದ್ರನ್ (6) ಪೆವಿಲಿಯನ್ ಸೇರಿಕೊಂಡರು. ಆದರೆ ಕೀಪರ್ ಕೃಷ್ಣನ್ ಶ್ರೀಜಿತ್ (31), ಆಲ್‌ರೌಂಡರ್ ಶ್ರೇಯಸ್ ಗೋಪಾಲ್ (36), ಶುಭಾಂಗ್ ಹೆಗ್ಡೆ (ಸರ್ವಾಧಿಕ 43) ಮತ್ತು ಮನೋಜ್ ಭಾಂಡಗೆ (24) ಅವರ ಸಾಹಸದಿಂದ ಉತ್ತಮ ಸ್ಕೋರ್ ದಾಖಲಿಸಿತು.
ಆದರೆ ಕರ್ನಾಟಕದ ಬೌಲಿಂಗ್ ಯಾವುದೇ ಪರಿಣಾಮ ಬೀರಲಿಲ್ಲ. ಆರಂಭಕಾರ ಹಾರ್ವಿಕ್ ದೇಸಾಯಿ 14ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 60 ರನ್ ಬಾರಿಸಿದರು. ಪ್ರೇರಕ್ ಮಂಕಡ್ 25, ವಿಶ್ವರಾಜ್ ಜಡೇಜ ಔಟಾಗದೆ 18, ಜಯ್ ಗೋಹಿಲ್ ಔಟಾಗದೆ 15 ರನ್ ಮಾಡಿ ತಂಡವನ್ನು ದಡ ಸೇರಿಸಿದರು.
ಸೌರಾಷ್ಟ್ರ ನಾಯಕ ಜೈದೇವ್ ಉನಾದ್ಕತ್, ಚಿರಾಗ್ ಜಾನಿ, ಪ್ರೇರಕ್ ಮಂಕಡ್; ಕರ್ನಾಟಕದ ವಿದ್ಯಾಧರ್ ಪಾಟೀಲ್ ತಲಾ 2 ವಿಕೆಟ್ ಉರುಳಿಸಿದರು.
ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಶುಕ್ರವಾರ ಸಿಕ್ಕಿಂ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ-8 ವಿಕೆಟಿಗೆ 171 (ಶುಭಾಂಗ್ 43, ಶ್ರೇಯಸ್ 36, ಶ್ರೀಜಿತ್ 31, ಭಾಂಡಗೆ 24, ಉನಾದ್ಕತ್ 17ಕ್ಕೆ 2, ಮಂಕಡ್ 29ಕ್ಕೆ 2, ಚಿರಾಗ್ ಜಾನಿ 38ಕ್ಕೆ 2). ಸೌರಾಷ್ಟ್ರ: 18.1 ಓವರ್‌ಗಳಲ್ಲಿ 5 ವಿಕೆಟಿಗೆ 173 (ಹಾರ್ವಿಕ್ 60, ಮಂಕಡ್ 25, ಪಾಟೀಲ್ 39ಕ್ಕೆ 2). ಪಂದ್ಯಶ್ರೇಷ್ಠ: ಹಾರ್ವಿಕ್ ದೇಸಾಯಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ
Video: ಆಸ್ಪತ್ರೆಯಲ್ಲಿ ‘ಚಕ್ ದೇ ಇಂಡಿಯಾ’ ಹಾಡಿಗೆ ವಿನೋದ್ ಕಾಂಬ್ಳಿ ನೃತ್ಯ.. ವಿಡಿಯೋ ವೈರಲ್
Blitz Chess: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು
Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್ ಅಧ್ಯಕ್ಷ ಸಮ್ಮತಿ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.