“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು

ಈ ಹಡಗು ಬಂದರಿಗೆ ಬಂದು ನಿಂತಾಗ ತಲೆ ಎತ್ತಿ ನೋಡಿದರೆ ಕತ್ತು ನೋವು ಬರವಷ್ಟು ಎತ್ತರವಿದೆ

Team Udayavani, Jul 6, 2024, 12:55 PM IST

“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು

ಗಾತ್ರ ಪ್ರಾಮುಖ್ಯ ಪಡೆಯುವುದಾದರೆ ಅದು ಹಡಗುಗಳ ವಿಚಾರಕ್ಕೇ ಸರಿ. ದೊಡ್ಡ ವ್ಯವಹಾರವೊಂದು ಮುಳುಗಿದರೆ “ಹಡಗು ಮುಳುಗಿದಂತೆ’ ಎಂದು ವರ್ಣಿಸುವುದೂ ಉಂಟು. ಹಡಗುಗಳು ಎಂದರೆ ಅವು ಗಾತ್ರದಲ್ಲಿ ಅತ್ಯಂತ ದೊಡ್ಡವು ಎಂದೇ ನಮ್ಮ ತಿಳುವಳಿಕೆ ಹೇಳುತ್ತದೆ.

ಇನ್ನು ಹಡಗುಗಳಲ್ಲೇ ಅತೀದೊಡ್ಡ ಹಡಗು ಎಂದರೆ ಅದೆಷ್ಟು ದೊಡ್ಡದಿರಬಹುದು? 21ನೇ ಶತಮಾನದ ವಿಸ್ಮಯವೆನಿಸಿರುವ, ಇಂದಿನ ಅತೀದೊಡ್ಡ ಪ್ರಯಾಣಿಕರ ಹಡಗಿನ ಹೆಸರು “ಸಿಂಫೂನಿ ಆಫ್‌ ದಿ ಸೀಸ್‌’ (Symphony of the seas). ಇದು 2018ರಿಂದ ಬಳಕೆಯಲ್ಲಿದೆ. ಈ ಬಗೆಯ ಶ್ರೀಮಂತ ಹಡಗುಗಳಿಗೆ ಪ್ರಸಿದ್ಧವಾದ ರಾಯಲ್‌ ಕ್ಯಾರೆಬಿಯನ್‌ ಕ್ರೂಸ್‌ ಕಂಪೆನಿಯವರು ಇದರ ಒಡೆಯರು.

ಇದನ್ನು ನಿರ್ಮಿಸಲು 2016ರಲ್ಲಿ ತಗುಲಿದ ವೆಚ್ಚ 1.35 ಬಿಲಿಯನ್‌ ಡಾಲರ್‌ಗಳು. ಈ ಹಡಗನ್ನು ನಿರ್ಮಿಸಲು ಸುಮಾರು ಎರಡು ವರ್ಷಗಳೇ ಹಿಡಿದವಂತೆ. ಇದನ್ನು ನೀರಲ್ಲಿ ತೇಲಿಸಿದ ಅನಂತರವೂ ಅದರ ಒಳಗಿನ ವಿನ್ಯಾಸಗಳನ್ನು ನಿರ್ಮಿಸಲು ಮತ್ತೂ ಒಂದೆರಡು ವರ್ಷ ತಗುಲಿ 2018ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಪ್ರಯಾಣಿಕರ ಪ್ರವಾಸಕ್ಕೆ ಬಳಸಲಾಯಿತು.

ಈ ಹಡಗಿನಲ್ಲಿ ಪ್ರವಾಸಕ್ಕೆ ಬರುವ ಜನರು ಪ್ರಪಂಚದ ಅತ್ಯಂತ ಶ್ರೀಮಂತ ಹಡಗನ್ನು ನೋಡಲು ಮತ್ತು ಅಲ್ಲಿನ ಐಷರಾಮಗಳ ಅನುಭವಿಸಲೆಂದೇ ಬರುತ್ತಾರೆ. ಪೂರ್ವ ಮತ್ತು ಪಶ್ಚಿಮ ದಿಕ್ಕುಗಳ ಎರಡು ಪ್ರವಾಸಗಳನ್ನು ಹಮ್ಮಿಕೊಳ್ಳುತ್ತದೆ. ಉದಾಹರಣೆಗೆ ಪ್ರತೀ ವಾರಕ್ಕೊಮ್ಮೆ ಈ ಹಡಗು ಅಮೆರಿಕದ ಮಯಾಮಿ ಬಂದರಿನಿಂದ ಹೊರಟು ಗಲ್ಫ್ ಆಫ್‌ ಮೆಕ್ಸಿಕನ್‌ ಸಮುದ್ರದಲ್ಲಿ ಒಂದು ವಾರದ 140 ಮೈಲುಗಳ ವೈಭವೋಪೇತ ಪ್ರವಾಸ ಮಾಡಿ ಹಿಂದಿರುಗುತ್ತದೆ. ಜತೆಗೆ ಬಹಾಮದ ದ್ವೀಪಗಳ ಸೌಂದರ್ಯವನ್ನು ಸವಿಯುವ ಅವಕಾಶವನ್ನು ನೀಡುತ್ತದೆ. ಇದೇ ಕಾರಣಕ್ಕೆ ಬೃಹತ್‌ ಗಾತ್ರವಿದೆಯೆಂದು ಈ ಹಡಗು ಅತೀ ದೂರದ ಸಂಚಾರವನ್ನು ಕೈ ಗೊಳ್ಳುವುದಿಲ್ಲ. ಏಕೆಂದರೆ ಈ ಹಡಗೇ ಒಂದು ಅಚ್ಚರಿ. ಈ ಹಡಗು ಸಮುದ್ರದಲ್ಲಿ ತೇಲುವ ಒಂದು ವಿಲಾಸೀ ಗಂಧರ್ವ ಪ್ರಪಂಚವನ್ನು ಸೃಷ್ಟಿಸುತ್ತದೆ.

ಈ ಹಡಗು ಬಂದರಿಗೆ ಬಂದು ನಿಂತಾಗ ತಲೆ ಎತ್ತಿ ನೋಡಿದರೆ ಕತ್ತು ನೋವು ಬರವಷ್ಟು ಎತ್ತರವಿದೆ, ಬೃಹದಾಕಾರದ್ದಾಗಿದೆ. 1,184 ಅಡಿ ಉದ್ದವಿದೆ. 238 ಅಡಿ ಎತ್ತರದ ಈ ಹಡಗಿನಲ್ಲಿ 18 ಡೆಕ್‌ಗಳಿವೆ. 2,30,000 ಟನ್‌ ತೂಗುತ್ತದೆ. ಈ ಹಡಗೊಂದೇ 2,200 ಜನರಿಗೆ ಕೆಲಸ ನೀಡಿದೆ.

ಈ ಹಡಗಿನಲ್ಲಿ ಮಿಕ್ಕೆಲ್ಲ ಐಷರಾಮಗಳೊಡನೆ 2,759 ಪ್ರವಾಸಿ ವಸತಿ ಕೋಣೆಗಳಿವೆ. ಇವುಗಳಲ್ಲಿ ಒಟ್ಟಿಗೆ 6,680 ಜನರು ಪ್ರವಾಸ ಮಾಡಬಹುದಾಗಿದೆ. ಇವರ ಸೇವೆಗೆ 165 ಜನ ರೂಂ ಸರ್ವಿಸ್‌ ಸಿಬಂದಿ ಕೆಲಸ ಮಾಡುತ್ತಾರೆ. ಅತಿಥಿಗಳು ಬರುವ ಮುನ್ನ ಸರ್ವ ಸಿದ್ಧತೆಗಳನ್ನು ನಡೆಸುತ್ತಾರೆ. 26,000 ಬಾತ್‌ ಟವಲ್ಸ್‌, 30,000 ಕೈ ಒರೆಸುವ ಟವಲ್ಸ್, 20 ಸಾವಿರ ಬಾತ್‌ ಮ್ಯಾಟ್ಸ್‌ಗಳನ್ನು ಈ ಹಡಗು ಒಂದು ವಾರದ ಬಳಕೆಗೆ ಹೊತ್ತೂಯ್ಯುತ್ತದೆ. ಅತೀ ಲಕ್ಷುರಿ ಬಯಸುವ ಪ್ರಯಾಣಿಕರಿಗಾಗಿ ಇದರಲ್ಲಿ 188 ವಿ.ಐ.ಪಿ. ವಿಶೇಷ ವಸತಿ ಗೃಹಗಳಿವೆ. ಅದರಲ್ಲಿ ಅತೀ ದುಬಾರಿಯಾದ ವಸತಿಯೆಂದರೆ ಎರಡು ಮಹಡಿಯಲ್ಲಿ ಹರಡಿರುವ ರಾಯಲ್‌ ಲಾಫ್ಟ್ಸೂಟ್‌. ಇದರಲ್ಲಿ 6 ಜನ ಇರಬಹುದು.‌

ಡೈನಿಂಗ್‌ ಕೋಣೆ, ಡೆಕ್‌, ಆಟದ ಮನೆ, ಕೂರಲು, ಮಲಗಲು ಪ್ರತ್ಯೇಕ ವಿಶಾಲ ಕೋಣೆಗಳು, ಪ್ರತ್ಯೇಕ ಈಜುಕೊಳ, ಹೆಲಿಪ್ಯಾಡ್‌ ಈ ಎಲ್ಲ ವ್ಯವಸ್ಥೆಗಳ ಈ ವಸತಿ ಗೃಹವನ್ನು ಪಡೆಯಲು ವಾರವೊಂದಕ್ಕೆ ಸುಮಾರು 75 ಲಕ್ಷ ರೂಪಾಯಿಗಳನ್ನು ತೆರಬೇಕಾಗುತ್ತದೆ. ಇದೆಲ್ಲದರ ಜತೆಗೆ ಈ ಅತೀ ದುಬಾರಿ ವಸತಿಯ ಅತಿಥಿಗಳ ಸೇವೆಗೆಂದೇ “ಸರ್ವೀಸ್‌ ಮ್ಯಾನೇಜರ್‌’ ಕೂಡ ದೊರೆಯುತ್ತಾನೆ. ಅತಿಥಿಗಳ ಎಲ್ಲ ಬೇಡಿಕೆಗಳನ್ನು ಪೂರೈಸುವುದೇ ಈತನ ಕೆಲಸ. ಅದಕ್ಕೆಂದೇ ಈತನ ಹುದ್ದೆಯನ್ನು “ರಾಯಲ್‌ ಜೀನಿ’ ಎಂಬ ಹೆಸರಿನಿಂದ ಕರೆಯುತ್ತಾರೆ.

ಈ ಹಡಗು ತನ್ನ ಅತಿಥಿಗಳ ಬಳಕೆಗೆಂದು ಪ್ರತೀವಾರ 1 ಮಿಲಿಯನ್‌ ಡಾಲರ್‌ಗಳ ವಸ್ತುಗಳನ್ನು ಖರೀದಿಸುತ್ತದೆ. ಅತಿಥಿಗಳು ಬರುವ ಮುನ್ನವೇ ಅದೆಲ್ಲವನ್ನೂ ಹಡಗಿಗೆ ಏರಿಸಲಾಗುತ್ತದೆ. 30-35 ಟ್ರಕ್‌ಗಳು ಹೊತ್ತು ತರುವ 400 ಟನ್‌ ವಸ್ತುಗಳನ್ನು ಹಡಗಿಗೆ ತುಂಬುವ ಉಸ್ತುವಾರಿಯನ್ನು ನಿಭಾಯಿಸಲು ನೂರಾರು ಜನರು ಕೆಲಸ ಮಾಡುತ್ತಾರೆ. ಪ್ರತೀ ವಾರ 340 ಮೆಟ್ರಿಕ್‌ ಟನ್‌ ಗಳಷ್ಟು ತಾಜಾ ಉತ್ಪನ್ನಗಳನ್ನು ಇಲ್ಲಿ ಬಳಸಲಾಗುತ್ತದೆ. 25,000 ಪೌಂಡ್‌ ಚಿಕನ್‌, 11,000 ಪೌಂಡ್‌ ಕಲ್ಲಂಗಡಿ ಹಣ್ಣು, 1,40,000 ಬೇಕನ್‌, ತರಕಾರಿ ಹೀಗೆ ಪಟ್ಟಿ ಬೆಳೆಯುತ್ತದೆ. ಇವನ್ನೆಲ್ಲ ತುಂಬಿಕೊಳ್ಳಲು ಅತ್ಯಂತ ದೊಡ್ಡ ಉಗ್ರಾಣಗಳಿವೆ. ಶೀತಲ ಕೋಣೆಯ ( ಫ್ರೀಜರ್‌) ವ್ಯವಸ್ಥೆಯೇ ಸುಮಾರು ಐದು ಸಾಧಾರಣ ಅಳತೆಯ ಮನೆಗಳಷ್ಟು ದೊಡ್ಡದಾಗಿವೆ. 1,350 ಸ್ಕ್ವೇರು ಮೀಟರ್‌ಗಳಷ್ಟು ರೆಫ್ರಿಜೆರೇಟರ್‌ ಜಾಗವಿದೆ.

ಸೋಡಾ,ಬೀರ್‌ ಮತ್ತು ವೈನ್‌ಗಳು ಲೆಕ್ಕವಿಲ್ಲದಷ್ಟು ಖರ್ಚಾಗುವ ಈ ಹಡಗಿನಲ್ಲಿ ಪ್ರತೀ ವಾರ 25,000 ಬೀರ್‌ ಬಾಟಲಿಗಳು ಸಿದ್ಧವಿರತ್ತವೆ. ವೋಡ್ಕಾ, ಜಿನ್‌ ಇತ್ಯಾದಿ ಪಾನೀಯಗಳು ಕೂಡ ಹೊಳೆಯಾಗಿ ಹರಿಯುತ್ತವೆ. 6,680 ಪ್ರಯಾಣಿಕರಿಗೆ ಒಂದೇ ವಾರದಲ್ಲಿ ಇಷ್ಟೆಲ್ಲ ಬೇಕಾಗುತ್ತದೆಯೇ? ಅನ್ನುವ ಪ್ರಶ್ನೆ ಇಲ್ಲಿ ಇರುವುದಿಲ್ಲ. ಆಯ್ಕೆಗಳು ಮತ್ತು ಐಷರಾಮವೇ ಮುಖ್ಯವಾಗುವ, ತಿಂದು-ತೇಗಿ ಮಜದ ಅನುಭವ ಪಡೆಯಲೆಂದೇ ಈ ಶ್ರೀಮಂತ ಹಡಗಿನಲ್ಲಿ ಜನರು ದುಬಾರಿ ಹಣತೆತ್ತು ಪ್ರಯಾಣ ಮಾಡುತ್ತಾರೆ.

ಹಡಗಿನ ಮಧ್ಯ ಭಾಗವಾದ ಪೊಮೊನಾಡ, ಜನರ ಬಾಯಲ್ಲಿ “ವಾಹ್‌…’ ಎನ್ನುವ ಉದ್ಘಾರ ಹೊರಡಿಸುವಂತೆ ಎರಡಂತಸ್ತಿನಲ್ಲಿ ಕಟ್ಟಲ್ಪಟ್ಟಿದ್ದು, ಇಲ್ಲಿ ಶಾಪಿಂಗ್‌, ವಾಕಿಂಗ್‌ ಇತ್ಯಾದಿ ಮಾಡುತ್ತ ಈ ಬೃಹತ್‌ ಸುಂದರಿಯ ಒಡಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಕುಳಿತು ಉಲ್ಲಾಸದ ಸಮಯವನ್ನು ಅನುಭವಿಸಬಹದಾಗಿದೆ. ಇಲ್ಲಿನ ಒಂದು ಪಾನೀಯದ ಬಾರ್‌ ಕೇವಲ ರೊಬೋಟ್‌ಗಳಿಂದಲೇ ನಡೆಯುತ್ತದೆ. ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಬಯಾನಿಕ್‌ ಬಾರ್‌ ಎಂದು ಕರೆಯಲ್ಪಡುವ ಈ ಬಾರ್‌ನ ನೌಕರರೆಂದರೆ ಎರಡು ರೊಬೋಟ್‌ಗಳು. ಇವು 30 ಬಗೆಯ ಸ್ಪಿರಿಟ್‌ಗಳನ್ನು ನೀಡಬಲ್ಲವು. ಪ್ರತಿ ರೊಬಾಟ್‌ಗಳು ದಿನವೊಂದಕ್ಕೆ ತಲಾ 1,000 ಪಾನೀಯಗಳನ್ನು ಸರಬರಾಜು ಮಾಡುತ್ತವೆ.

ಇದರಲ್ಲಿರುವ “ರೈಸಿಂಗ್‌ ಟೈಡ್‌’ ಎನ್ನುವ ಬಾರ್‌ ನೆಲದಿಂದ ಮೇಲೇರುವ ಒಂದು ಎಂಜಿನಿಯರಿಂಗ್‌ ಅದ್ಭುತವೆನಿಸಿದೆ. ಇಂತಹ ಅದ್ಭುತಗಳ, ಅಸಾಧಾರಣ ಅನುಭೂತಿಯ ಹಡಗಿನ ಸೌಲಭ್ಯಗಳನ್ನು ಅನುಭವಿಸಲು ಒಂದು ವಾರವಾದರೂ ಸಾಲದು ಎನ್ನುವುದು ಎಲ್ಲರ ಅನುಭವವಾಗಿದೆ.

ಸಿಂಫೂನಿ ಆಫ್‌ ಸೀಸ್‌ ಹಡಗಿನಲ್ಲಿ ನಾಲ್ಕು ಈಜುಕೊಳಗಳು, ಮಕ್ಕಳ ವಾಟರ್‌ ಪಾರ್ಕ್‌, ಬ್ಯಾಸ್ಕೆಟ್‌ ಬಾಲ್‌ ಮೈದಾನ, ಎರಡು 43 ಅಡಿ ಎತ್ತರದ ರಾಕ್‌ ಕ್ಲೈಂಬಿಗ್‌, ಐಸ್‌ ಸ್ಕೇಟಿಂಗ್‌, ಓಡಲು ರನ್ನಿಂಗ್‌ ಟ್ರಾಕ್‌ಗಳು, ಸರ್ಫಿಂಗ್‌ ಸೌಲಭ್ಯಗಳೂ ಇವೆ. ಇಲ್ಲಿರುವ ಹತ್ತು ಮಹಡಿಗಳ ಎತ್ತರದ ಜಾರುವ ಸ್ಲೆ„ಡ್‌ ಪ್ರಪಂಚದ ನೀರಿನ ಮೇಲಿನ ಅತೀ ಎತ್ತರದ ಜಾಗವೆನಿಸಿದೆ. ಇದೆಲ್ಲದರ ಜತೆ ಸೆಂಟ್ರಲ್‌ ಪಾರ್ಕ್‌ ಎನ್ನುವ ನೈಸರ್ಗಿಕ ಉದ್ಯಾನವನವನ್ನು ನಿರ್ಮಿಸಲಾಗಿದೆ.

ಪ್ರಪಂಚದ ಎಲ್ಲಡೆಗಳಿಂದ ಸಮುದ್ರದ ವಾತಾವರಣದಲ್ಲಿ ಬೆಳೆಯಬಲ್ಲ ವನಸಿರಿಯನ್ನು ಈ ಹಡಗಿನ ಪ್ರಯಾಣಿಕರಿಗೆಂದೇ ತಂದು ಅತ್ಯಂತ ಸುಂದರ ತೋಟ ನಿರ್ಮಿಸಲಾಗಿದೆ. ಇದರಲ್ಲಿ 20,700 ಗಿಡಗಳನ್ನು ಬೆಳೆಸಲಾಗಿದೆ. ಅದನ್ನು ನೋಡಿಕೊಳ್ಳಲು ಹಲವಾರು ತೋಟಗಾರರು ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಎರಡು 15 ಅಡಿ ಎತ್ತರದ ಗೋಡೆಗಳ ಮೇಲೆ ಲಂಬವಾಗಿ ಬೆಳೆಯಬಲ್ಲ 10,200 ಗಿಡಗಳನ್ನು ಹಬ್ಬಿಸಲಾಗಿದೆ.

ಪ್ರಪಂಚದ ಅತ್ಯಂತ ದೊಡ್ಡ ಹಡಗಿನ ಕಫ್ತಾನ ಇದೇ ಕಾರಣಕ್ಕೆ ತಾನು ಬಹುಶಃ ಪ್ರಪಂಚದ ಅತೀ ಸಣ್ಣ ಕ್ಯಾಪ್ಟನ್‌ ಎಂದು ನಗಾಡಿದ್ದೂ ಇದೆ. ಅತೀ ದೊಡ್ಡ ಹಡಗಾದರೂ ಅದರ ಎಲೆಕ್ಟ್ರೊ ಹೈಡ್ರಾಲಿಕ್‌ ಕಂಟ್ರೋಲ್‌ಗ‌ಳ ಕಾರಣ ಅತ್ಯಂತ ಸರಳ ಉಪಕರಣಗಳನ್ನು ಹೊಂದಿದೆ. ಅತ್ಯಂತ ಶಕ್ತಿಶಾಲಿ 6 ಎಂಜಿನ್‌ಗಳನ್ನು ಬಳಸುವ ಈ ಹಡಗು ಅದೆಷ್ಟು ದೈತ್ಯ ಗಾತ್ರದ್ದು ಎಂದರೆ, ಪ್ರತೀ ಬಂದರಿನಲ್ಲಿ ಒಬ್ಬ ಪೋರ್ಟ್‌ಪೈಲಟ್‌ ಈ ಹಡಗಿನ ಬರುವಿಕೆಗಾಗಿ ಆ ಬಂದರುಗಳಲ್ಲಿ ನಿಂತು ಕಾಯುತ್ತಿರಬೇಕಾಗುತ್ತದೆ.

ಸಣ್ಣ -ಪುಟ್ಟ ಹಡಗುಗಳು ಲಂಗರು ಹಾಕುವ ಸ್ಥಳಗಳಲ್ಲಿ ಈ ಬೃಹತ್‌ ನೌಕೆ ಎಲ್ಲಿಗೂ ತಾಗದಂತೆ ಅತ್ಯಂತ ಕುಶಲತೆಯಿಂದ ನಿಲ್ಲಿಸಬೇಕಾಗುತ್ತದೆ. ಮತ್ತೆ ಹೊರಡುವಾಗಲೂ ಈ ಪೋರ್ಟ್‌ ಪೈಲಟ್‌ ಈ ಹಡಗನ್ನು ನಿರ್ದೇಶಿಸುತ್ತ ಹಡಗಿನ ಕ್ಯಾಪ್ಟನ್‌ನೊಂದಿಗೆ ಸಹಕರಿಸುತ್ತಾನೆ. ಎಲೆಕ್ಟ್ರಾನಿಕ್‌ ಮತ್ತು ಡಿಜಿಟಲ್‌ ನ್ಯಾವಿಗೇಶನ್‌ ವ್ಯವಸ್ಥೆಯ ಕಾರಣ ಯಾವುದೇ ತಡೆಗಳನ್ನು ಕೇವಲ ಮೀಟರ್‌ಗಳ ಅಂತರದ ಅಳತೆಯಲ್ಲೂ ಅತೀ ನಾಜೂಕಿನಿಂದ ನಡೆಸಬಹುದಾಗಿದೆ. ಕೇವಲ ಬೆರಳುಗಳ ಕಂಟ್ರೋಲಿಗೆ 28 ಫೆರಾರಿ ಎಂಜಿನ್‌ಗಳಿಗೆ ಸಮನಾದ ಅಶ್ವಶಕ್ತಿಯ ಬೋತ್ರಸ್ಟರುಗಳು ಈ ನಡೆಗಳನ್ನು ಸಾಧ್ಯವಾಗಿಸುತ್ತವೆ. ಈ ಬೃಹತ್‌ ಸುಂದರಿ ಅತ್ಯಂತ ನಾಜೂಕಾಗಿ ಸಮುದ್ರದಲ್ಲಿ ತೇಲುತ್ತಾಳೆ.

ಈ ಹಡಗಿನಲ್ಲಿ ಮೂವತ್ತಕ್ಕೂ ಹೆಚ್ಚು ಅಡುಗೆ ಮನೆಗಳಿವೆ. ತಿಂಡಿಯ ಒಂದು ಖಾದ್ಯವಾದ ಆಮ್ಲೆಟ್‌ಗಾಗಿ ಪ್ರತೀ ವಾರ 60,000 ಮೊಟ್ಟೆಗಳನ್ನು ಬಳಸಲಾಗುತ್ತದೆ. 30,000 ಆಲೂಗಡ್ಡೆಗಳು ಖರ್ಚಾಗುತ್ತವೆ. ಹೀಗಾಗಿ ಅವುಗಳ ಜವಾಬ್ದಾರಿಯನ್ನು ನಿಭಾಯಿಸಲು ನಿಗದಿತ ಕುಕ್‌ ಗಳಿದ್ದಾರೆ. 254 ಕುಕ್‌ಗಳು ಜತೆಗೆ 140 ಸಹಾಯಕರು ಈ ಅಡಿಗೆ ಮನೆಗಳಲ್ಲಿ ಅವಿರತವಾಗಿ ಕೆಲಸ ಮಾಡುತ್ತಾರೆ.

ಒಟ್ಟು 23 ಡೈನಿಂಗ್‌ ಸ್ಥಳಗಳಿವೆ. 5,129 ಸೀಟುಗಳಿವೆ ಅದರಲ್ಲಿ ಸೆಂಟ್ರಲ್‌ ಡೈನಿಂಗ್‌ ಹಾಲ್‌ ನ ಮಧ್ಯಕ್ಕೆ ಮೂರು ಡೆಕ್‌ ಎತ್ತರದ ದೀಪಾಲಂಕಾರವನ್ನು ಇಳಿಬಿಡಲಾಗಿದೆ. ಇದಲ್ಲದೆ ಪ್ರಪಂಚದ ಅತ್ಯಂತ ಶ್ರೀಮಂತವಾದ ಈ ವಿಲಾಸೀ ಹಡಗಿನಲ್ಲಿ ಮನರಂಜನೆಗಾಗಿ ಹಲವು ಥಿಯೇಟರ್‌ಗಳಿವೆ. ಮುಖ್ಯವಾದ ರಾಯಲ್‌ ಥಿಯೇಟರ್‌ನಲ್ಲಿ 1,100 ಆಸನಗಳ ವ್ಯವಸ್ಥೆಯಿದೆ. ಮೇಲ್ಛಾವಣಿ ಇರುವ ಮತ್ತು ಇಲ್ಲದ ವೇದಿಕೆಗಳಿವೆ. ಇಲ್ಲಿನ ಒಂದು ಐಸ್‌ ರಿಂಕ್‌ 11,411 ಸ್ವೆRàರ್‌ ಅಡಿಗಳಷ್ಟು ದೊಡ್ಡದಿದ್ದು ಒಲಿಂಪಿಕ್‌ ಮಟ್ಟದ ಸ್ಕೇಟರ್‌ಗಳು ಇಲ್ಲಿ ಮನರಂಜಿಸುತ್ತಾರೆ. ನಾಟಕ, ಸಮರಕಲೆ, ಸರ್ಕಸ್‌, ಸಾಹಸ, ಆಕ್ವಾ ಥಿಯೇಟರ್‌ಇತ್ಯಾದಿ ಬಗೆಯ ಎಲ್ಲ ವಿಧದ ಮನರಂಜನ ಕಾರ್ಯಕ್ರಮಗಳು ಪ್ರತೀರಾತ್ರಿ ನಡೆಯುತ್ತವೆ. ಪ್ರತೀ ಬಂದರಿನಲ್ಲಿ ಇಳಿವ ಮತ್ತು ಸ್ಥಳಗಳ ಭೇಟಿ ಮುಗಿದ ಅನಂತರ ಮರಳಿ ಬರುವ ಪ್ರವಾಸಿಗರನ್ನು ಎಣಿಸಲು ಡಿಜಿಟಲ್‌ ವ್ಯವಸ್ಥೆಯಿದೆ. ಅದನ್ನು ನಿರ್ವಹಿಸಲೆಂದೇ ಮ್ಯಾನೇಜರ್‌ಗಳಿದ್ದಾರೆ.

ಇಲ್ಲಿ ಉತ್ಪಾದಿಸಲ್ಪಡುವ ತ್ಯಾಜ್ಯಗಳ ಮರುಬಳಕೆಗೆ ಹಡಗಿನಲ್ಲೇ ರಿಸೈಕ್ಲಿಂಗ್‌ ಸವಲತ್ತುಗಳಿವೆ. ಈ ಹಡಗು ಕೆಲವು ಬಂದರುಗಳಿಗೆ ಹಲವು ವಸ್ತುಗಳ ಸರಬರಾಜನ್ನು ಕೂಡ ನಿರ್ವಹಿಸುತ್ತದೆ. ತನ್ನದೇ ಸ್ಟೀಂ ಪವರ್‌ನ್ನು ಉತ್ಪಾದಿಸಬಲ್ಲ ಜಗತ್ತಿನಲ್ಲಿರುವ ಎರಡು ಹಡಗುಗಳಲ್ಲಿ ಇದೂ ಒಂದು. ಇದರಿಂದಾಗಿ ಬಿಸಿ ನೀರಿನ ನಿರಂತರ ಸರಬರಾಜಾಗುತ್ತದೆ. ಜತೆಗೆ ಅದರಿಂದ ವಿದ್ಯುತ್‌ನ್ನು ಕೂಡ ಉತ್ಪಾದಿಸಲಾಗುತ್ತದೆ.

ಪ್ಲಾಸ್ಟಿಕ್‌, ಗಾಜು, ರಟ್ಟು ಮತ್ತು ತ್ಯಾಜ್ಯ ಆಹಾರ ವಸ್ತುಗಳನ್ನು ಹಡಗಿನಲ್ಲೇ ಪುಡಿಮಾಡಿ ಮಯಾಮಿಯ ಬಂದರಿನ ರಿಸೈಕ್ಲಿಂಗ್‌ ಪ್ಲಾಂಟ್‌ಗಳಿಗೆ ಬರುತ್ತವೆ. ನೀರನ್ನು ಪ್ರತಿಶತ ಹಡಗಿನಲ್ಲೇ ಮರುಬಳಸಿಕೊಳ್ಳುವ ತಂತ್ರಗಳಿವೆ. ಈ ಹಡಗಿನ ಹೃದಯಭಾಗವಾದ ಎಂಜಿನ್‌ ಕೋಣೆಯಲ್ಲಿ ಬಸ್ಸುಗಳ ಗಾತ್ರದ ಆರು ಎಂಜಿನ್‌ ಗಳಿವೆ. ಆಧುನಿಕ ತಂತ್ರ ಜ್ಞಾನದ ಕಾರಣ ಈ ಎಂಜಿನ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ ಮಾಡಲು ಕೇವಲ 90 ಸೆಕೆಂಡುಗಳು ಸಾಕೆಂದು ಹೇಳಲಾಗಿದೆ. ಈ ಹಡಗಿನ ಬಂಡವಾಳವೆಂದರೆ ನಿರಂತರ ಕ್ರಿಯಾಶೀಲತೆ, ವ್ಯವಸ್ಥಿತ ಕಾರ್ಯ ಕ್ಷಮತೆ, ನಿಲ್ಲದ ಚಟುವಟಿಕೆಗಳು, ಹಗಲು ರಾತ್ರಿಯನ್ನದೆ ಶಿಫ್ಟ್ ಪ್ರಕಾರ ಕೆಲಸಗಳು ನಡೆಯುತ್ತಲೇ ಇರುತ್ತವೆ.

ಡಾ| ಪ್ರೇಮಲತಾ ಬಿ., ಲಿಂಕನ್‌

 

ಟಾಪ್ ನ್ಯೂಸ್

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

3-madikeri

Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.