T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ
ಕೋಚ್ ದ್ರಾವಿಡ್, ರೋಹಿತ್ ಶರ್ಮಾ, ಕೊಹ್ಲಿ ಜೊತೆ ಮಾತನಾಡಿದ ಪ್ರಧಾನಿ
Team Udayavani, Jun 30, 2024, 1:36 PM IST
ನವದೆಹಲಿ: ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿ ೧೭ ವರ್ಷ ಬಳಿಕ ಎರಡನೇ ಬಾರಿ ಚುಟುಕು ಕ್ರಿಕೆಟ್ ಚಾಂಪಿಯನ್ ಆದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದಾರೆ.
ರಾಹುಲ್ ದ್ರಾವಿಡ್ ಕಳೆದ ಎರಡುವರೆ ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಶನಿವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯದವರೆಗೆ ಟೀಮ್ ಇಂಡಿಯಾಕ್ಕೆ ನೀಡಿದ ಕೊಡುಗೆ, ಸಲಹೆ, ಸೂಚನೆಗಳಿಂದ ೧೧ ವರ್ಷಗಳಿಂದ ಸಿಗದಿದ್ದ ಐಸಿಸಿ ಟ್ರೋಫಿಯ ಬರವನ್ನು ನೀಗಿಸಿದೆ.
“ಭಾರತೀಯ ಕ್ರಿಕೆಟ್ ತಂಡದೊಂದಿಗಿನ ದ್ರಾವಿಡ್ ಅವರ ಅಚಲ ಬದ್ಧತೆ, ಕಾರ್ಯತಂತ್ರ, ಪ್ರತಿಭೆಯಿಂದ ಭಾರತ ತಂಡದಲ್ಲಿ ಬದಲಾವಣೆ ತಂದಿದ್ದಾರೆ. ಇವರ ಕೊಡುಗೆಯು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕ” ಎಂದು ಕನ್ನಡಿಗ ದ್ರಾವಿಡ್ ಬಗ್ಗೆ ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಕೊಂಡಾಡಿ ಬರೆದಿದ್ದಾರೆ.
Rahul Dravid’s incredible coaching journey has shaped the success of Indian cricket.
His unwavering dedication, strategic insights and nurturing the right talent have transformed the team.
India is grateful to him for his contributions and for inspiring generations. We are… pic.twitter.com/8MKSPqztDV
— Narendra Modi (@narendramodi) June 30, 2024
ವಿರಾಟ್ ಕೊಹ್ಲಿ ಜೊತೆ ಮಾತನಾಡಿದ ಪ್ರಧಾನಿ ಮೋದಿ “ ನಿಮ್ಮೊಂದಿಗೆ ಮಾತನಾಡಿ ಸಂತೋಷವಾಯಿತು. ಫೈನಲ್ ಪಂದ್ಯದ ಇನ್ನಿಂಗ್ಸ್ ಭಾರತ ತಂಡಕ್ಕೆ ಆಧಾರವಾಗಿತ್ತು. ಎಲ್ಲ ವಿಧದ ಕ್ರಿಕೆಟ್ ಮಾದರಿಯಲ್ಲೂ ಭವ್ಯವಾಗಿ ಬ್ಯಾಟಿಂಗ್ ನಡೆಸಿದ್ದೀರಿ. ಟಿ-೨೦ ಕ್ರಿಕೆಟ್ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದೆ. ಆದರೆ ನೀವು ಯುವ ಪೀಳಿಗೆಯ ಆಟಗಾರರನ್ನು ಪ್ರೇರೇಪಿಸುತ್ತೀರಿ ಎಂಬ ವಿಶ್ವಾಸ ಹೊಂದಿದ್ಧೇನೆ” ಎಂದರು.
ತಂಡದ ನಾಯಕ ರೋಹಿತ್ ಶರ್ಮಾ ಜೊತೆ ಮಾತನಾಡಿ “ನಿಮ್ಮದು ಶ್ರೇಷ್ಠ ವ್ಯಕ್ತಿತ್ವ, ನಿಮ್ಮ ಆಕ್ರಮಣಕಾರಿ ಮನಸ್ಥಿತಿ, ಬ್ಯಾಟಿಂಗ್, ನಾಯಕತ್ವ ಭಾರತ ತಂಡಕ್ಕೆ ಹೊಸ ಆಯಾಮ ನೀಡಿದೆ. ಇಂದು ನಿಮ್ಮೊಂದಿಗೆ ಮಾತನಾಡಿ ಬಹಳ ಸಂತೋಷವಾಯಿತು” ಎಂದರು.
ಫೈನಲ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಾಂಡ್ಯ ಹಾಗೂ ಸೂರ್ಯ ಕುಮಾರ್ ಯಾದವ್‌ಗೂ ಪ್ರಧಾನಿ ಮೋದಿ ಪ್ರಶಂಸಿದ್ದಾರೆ. ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಶುಭ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.