ಚರಿತ್ರೆಯನ್ನು ಬೆನ್ನಟ್ಟಿರುವ ಆಸೀಸ್: ಇಂದು ಒಮಾನ್ ವಿರುದ್ಧ ಮೊದಲ ಪಂದ್ಯ
Team Udayavani, Jun 5, 2024, 11:22 PM IST
ಬ್ರಿಜ್ಟೌನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಆಸ್ಟ್ರೇಲಿಯವೀಗ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ನೂತನ ಇತಿಹಾಸದ ಹಾದಿಯಲ್ಲಿದೆ. ಈ ಎಲ್ಲ ಮೂರೂ ಟ್ರೋಫಿಗಳನ್ನು ಏಕಕಾಲದಲ್ಲಿ ತನ್ನದಾಗಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಕಾಂಗರೂಗಳಿಗೆ ಎದುರಾಗಿದೆ. ಇದರಲ್ಲಿ ಮಿಚೆಲ್ ಮಾರ್ಷ್ ಪಡೆ ಎಷ್ಟರ ಮಟ್ಟಿಗೆ ಯಶಸ್ವಿಯಾದೀತೆಂಬುದೊಂದು ಕುತೂಹಲ.
ಗುರುವಾರ ಬ್ರಿಜ್ಟೌನ್ನಲ್ಲಿ ನಡೆಯುವ “ಬಿ’ ಬಣದ ಪಂದ್ಯದಲ್ಲಿ ಆಸೀಸ್ ತಂಡ ಒಮಾನ್ ವಿರುದ್ಧ ಆಡಲಿದೆ. ಒಮಾನ್ಗೆ ಇದು 2ನೇ ಪಂದ್ಯ. ನಮೀಬಿಯಾ ಎದುರಿನ ಪಂದ್ಯವನ್ನು ಟೈ ಮಾಡಿಕೊಂಡು, ಬಳಿಕ ಸೂಪರ್ ಓವರ್ನಲ್ಲಿ ಸೋತಿತ್ತು. ಆದರೆ ಆಸ್ಟ್ರೇಲಿಯಕ್ಕೆ ಯಾವುದೇ ರೀತಿ ಸಾಟಿಯಾಗದು.
ಅತ್ಯಂತ ವಿಳಂಬವಾಗಿ, 2021ರಲ್ಲಿ ಮೊದಲ ಬಾರಿಗೆ ಟ20 ವಿಶ್ವಕಪ್ ಚಾಂಪಿ ಯನ್ ಆದ ಆಸ್ಟ್ರೇಲಿಯ, 2022ರ ತವರಿನ ಕೂಟದಲ್ಲಿ ಈ ಕಪ್ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಅದು ಸೆಮಿಫೈನಲಿಗೂ ಬಾರದೇ ಹೋಯಿತು. ಈ ಬಾರಿಯ ಆಸೀಸ್ ತಂಡ ಬಲಿಷ್ಠವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.