ಬಾಂಗ್ಲಾವನ್ನು ಬಲೆಗೆ ಬೀಳಿಸೀತೇ ಇಂಗ್ಲೆಂಡ್?
Team Udayavani, Oct 27, 2021, 5:40 AM IST
ಅಬುಧಾಬಿ: ವೆಸ್ಟ್ ಇಂಡೀಸ್ ಎದುರು ಅನುಭವಿಸಿದ ಕಳೆದ ವಿಶ್ವಕಪ್ ಫೈನಲ್ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡ ಉತ್ಸಾಹದಲ್ಲಿ ರುವ ಇಂಗ್ಲೆಂಡ್ ಬುಧವಾರ ಬಾಂಗ್ಲಾದೇಶಕ್ಕೂ ಆಘಾತವಿಕ್ಕುವ ಯೋಜನೆಯಲ್ಲಿದೆ.
ಇನ್ನೊಂಡೆ ಬಾಂಗ್ಲಾ ಪಡೆ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮುಗ್ಗರಿಸಿದ ಸಂಕಟದಲ್ಲಿದ್ದು, ಗೆಲುವಿನ ಹಳಿ ಏರಲೇಬೇಕಾದ ಅನಿವಾರ್ಯತೆಯಲ್ಲಿದೆ.
ಇಯಾನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ಬಲಿಷ್ಠ ಕೆರಿಬಿಯನ್ ಪಡೆಯನ್ನು ಜುಜುಬಿ 55ಕ್ಕೆ ದಿಂಡುರುಳಿಸಿತ್ತು. ಆದರೆ ಇದರ ಸಂಪೂರ್ಣ ಶ್ರೇಯವನ್ನು ಇಂಗ್ಲೆಂಡ್ ಬೌಲರ್‌ಗಳಿಗೆ ನೀಡುವುದು ತಪ್ಪಾಗುತ್ತದೆ. ಇದರಲ್ಲಿ ವಿಂಡೀಸ್ ಕ್ರಿಕೆಟಿಗರ ಬೇಜವಾಬ್ದಾರಿ ಆಟದ ಪಾಲು ಕೂಡ ಸಾಕಷ್ಟಿದೆ.
ಇಂಗ್ಲೆಂಡ್ ಕೇವಲ 14.2 ಓವರ್‌ಗಳಲ್ಲಿ ವಿಂಡೀಸ್ ಇನ್ನಿಂಗ್ಸಿಗೆ ತೆರೆ ಎಳೆದಿತ್ತು. ಆದರೆ ಏಶ್ಯದ ಟ್ರ್ಯಾಕ್‌ಗಳಲ್ಲಿ ಏಶ್ಯನ್ ತಂಡವನ್ನು ಎದುರಿಸುವುದು ಇಂಗ್ಲೆಂಡಿಗೆ ಯಾವತ್ತೂ ದೊಡ್ಡ ಸವಾಲಾಗಿರುತ್ತದೆ. ಅಲ್ಲದೇ ಅಬುಧಾಬಿಯ 32 ಡಿಗ್ರಿಯಷ್ಟು ಬಿಸಿಯನ್ನು ಎದುರಿಸಿ ನಿಲ್ಲುವುದು ಕೂಡ ಸುಲಭವಲ್ಲ. ವಿಂಡೀಸ್ ಎದುರಿನ ಪಂದ್ಯವನ್ನು ಇಂಗ್ಲೆಂಡ್ ದುಬಾೖಯಲ್ಲಿ ರಾತ್ರಿ ಆಡಿತ್ತು. ಆದರೆ ಬಾಂಗ್ಲಾವನ್ನು ಅಪರಾಹ್ನ ಎದುರಿಸಬೇಕಿದೆ.
ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ
ಹೆಚ್ಚುವರಿ ಪೇಸರ್?
ಅಬುಧಾಬಿ ಟ್ರ್ಯಾಕ್ ಪೇಸ್ ಬೌಲಿಂಗಿಗೆ ಹೆಚ್ಚಿನ ನೆರವು ನೀಡಲಿದೆ. ಚೇಸಿಂಗ್ ಸುಲಭ. ಹೀಗಾಗಿ ಹೆಚ್ಚುವರಿಯಾಗಿ ಮಾರ್ಕ್ ವುಡ್ ಅವರಿಗೆ ಅವಕಾಶ ನೀಡುವ ಯೋಜನೆ ಇಂಗ್ಲೆಂಡಿನದ್ದು. ಆದರೆ ವಿಂಡೀಸಿಗೆ ಹಾನಿಗೈದ ಜೋಡಿ ಸ್ಪಿನ್ನರ್ ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ಇದ್ದೇ ಇರುತ್ತಾರೆ. ಅಲಿ ಪವರ್ ಪ್ಲೇಯಲ್ಲಿ ವಿಂಡೀಸಿಗೆ ಅವಳಿ ಆಘಾತವಿಕ್ಕಿದ್ದರು. ರಶೀದ್ 2 ರನ್ನಿಗೆ 4 ವಿಕೆಟ್ ಉಡಾಯಿಸಿ ಫಿನಿಶಿಂಗ್ ಟಚ್ ಕೊಟ್ಟಿದ್ದರು. ಬಾಂಗ್ಲಾ ಸ್ಪಿನ್ ಈಗಲೂ ಶಕಿಬ್ ಅವರನ್ನೇ ನಂಬಿಕೊಂಡಿದೆ.
ಇಂಗ್ಲೆಂಡಿನ ಬ್ಯಾಟಿಂಗ್ ಲೈನ್‌ಅಪ್ ಬಲಿಷ್ಠ. ಆದರೆ ವಿಂಡೀಸ್ ಎದುರು 55 ರನ್ ಚೇಸಿಂಗ್ ವೇಳೆ 4 ವಿಕೆಟ್ ಉರುಳಿಸಿಕೊಂಡಿದ್ದನ್ನು ಮರೆಯುವಂತಿಲ್ಲ. ಬಾಂಗ್ಲಾ ಬೌಲರ್ ಆರಂಭಿಕ ಆಘಾತವಿಕ್ಕಿದರೆ ಸ್ಪರ್ಧೆ ಅತ್ಯಂತ ರೋಚಕವಾಗಿರಲಿದೆ.
ಅಂದಹಾಗೆ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್-ಬಾಂಗ್ಲಾದೇಶ ತಂಡಗಳದ್ದು 2-2 ಸಮಬಲದ ಸಾಧನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.